ಕವನ: ಕಪಿಲೆ

Must Read

ಕಪಿಲೆ

ಕಲಕಲರವದೊಳು ಹರಿಯುತಿಹಳು ಕಪಿಲೆ
ತನ್ನೊಡಲ ನೋವದನು ಯಾರಿಗೂ ತಿಳಿಸದೆ
ತಿಳಿಮುಖದಿ ಶಾಂತರೂಪಿಣಿಯಾದರೊಮ್ಮೆ
ರುದ್ರನರ್ತನ (ತಾಂಡವ)ವಾಡುತಾಳೆ ಮಗದೊಮ್ಮೆ.

ನಿನ್ನೊಡಲ ಸೇರಲೆಂದೋ ಆಶಿಸಿದ್ದೆ ನಾನು
ಅದರಿಂದ ಹೊರ ಬಂದೆ ಇಂದು ನಾನು
ಕೈ ಬೀಸಿ ಕರೆಯುತಿದ್ದಳಂದು ನನ್ನ
ಬರಬೇಡ ದೂರವಿರು ಎನ್ನುತ್ತಾಳಿಂದು.

ನಿನ್ನ ಸೊಬಗದನು ನಾ ಹೇಗೆ ಬಣ್ಣಿಸಲಿ?
(ನಾ ಹೇಗೆ ಬಣ್ಣಿಸಲಿ ನಿನ್ನ ಸೊಬಗನಿಂದು?)
ಹಾರುತ್ತಾ ನಲಿಯುತ್ತಾ ಹರಿಯುವ ಸೊಬಗದನು
ಕಪಿಲೇ…ನಿನ್ನ ಮತ್ತೆ ಮತ್ತೆ ನೋಡುವಾಸೆ
ಎಂದೆಂದಿಗೂ ನನ್ನ ಗೆಳತಿಯಾಗಿರು ನೀನು.

ಒಂದು ದಿನ ನಿನ್ನ ರೌದ್ರಾವತಾರವ ನೋಡಿದೆ
ನಿನ್ನ ತಾಂಡವ ನೋಡಿ ಹೆದರಿ ಹೋದೆ ನಾನು
ಶಾಂತಳಾಗು ನೀ ಕಪಿಲೇ,ನಿನ್ನ ತಾಂಡವನಿಲ್ಲಿಸು
ತಿಳಿನೀರಿನ ಚೆಲುವೆಯಾಗಿ ಹರಿಯುತಿರು ನೀನು.


ರೇಣುಕಾ ಸುಧೀರ್
ಅರಸಿನಮಕ್ಕಿ,
ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

Latest News

ಬಸವ ಸಮಿತಿಯಿಂದ ಶರಣ ಸಂದೇಶ ಜಗತ್ತಿಗೆ ಮುಟ್ಟಿದೆ – ಯಾಪಲಪರವಿ

ಜನಸಾಮಾನ್ಯರಿಂದ ಸ್ಥಾಪಿತವಾದ ಧರ್ಮ ಲಿಂಗಾಯತಕಲಬುರ್ಗಿ - ಕಲಬುರ್ಗಿ ಬಸವ ಸಮಿತಿ ಅನುಭವ ಮಂಟಪ , ಡಾ. ಬಿ ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ...

More Articles Like This

error: Content is protected !!
Join WhatsApp Group