ಗಂಗಾವತಿ – ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಖಿಲ ಕರ್ನಾಟಕ ನಾಲ್ಕನೆಯ ಕವಿ ಕಾವ್ಯ ಸಂಭ್ರಮದ ಕಾರ್ಯಕ್ರಮವನ್ನು ಇದೇ ಜನವರಿ 19 ಭಾನುವಾರದಂದು ಗಂಗಾವತಿಯ ಚೆನ್ನಬಸವೇಶ್ವರ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ
ಸರ್ವಾಧ್ಯಕ್ಷರಾದ ಡಾ.ಜಾಜಿ ದೇವೇಂದ್ರಪ್ಪನವರ ಪ್ರಬುದ್ಧತೆ ನುಡಿಗಳು,ಕನ್ನಡ ನಾಡಿನ ಹೆಸರಾಂತ ಹಿರಿಯ ಸಾಹಿತಿಗಳಾದ ರಂಜಾನ್ ದರ್ಗಾ ಅವರ ನಡೆ ನುಡಿ ವಿಶ್ವ ಸಂದೇಶದ ಮಾತು ಕತೆಗಳು ಮತ್ತು ಸಾಮಾಜಿಕ, ವಿಶ್ವಪ್ರೇಮದ ಜ್ಞಾನದ ಹಿತಾಶಕ್ತಿಯ ಮನುಧರ್ಮದ ಸಮಾನತೆಯ ನುಡಿಮುತ್ತುಗಳ ಚಿಂತನೆಯ ಲಹರಿ ಈ ಸಂದರ್ಭದಲ್ಲಿ ಹರಿದು ಬರಲಿದೆ ಎಂದು ಶರಣಪ್ಪ ತಳ್ಳಿ ಕುಪ್ಪಿಗುಡ್ಡ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷರು, ಗಂಗಾವತಿ ಇವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್ ಅವರ ಹಾಸ್ಯದ ಬರಹಗಳ ಮೆಲುಕು ಮತ್ತು ಕವಿಗೋಷ್ಠಿಯ ಅಧ್ಯಕ್ಷತೆಯ ಅವಲೋಕನ ಮಾತುಕತೆಗಳು, ಹೆಸರಾಂತ ಕವಯಿತ್ರಿ ಶಿವಲೀಲಾ ಹುಣಸಿಗಿ ಯಲ್ಲಾಪೂರ ಅವರ ಕವಿಗೋಷ್ಠಿ ಅಧ್ಯಕ್ಷತೆಯ ನುಡಿಗಳು ಕೇಳುಗರ ಅಧ್ಯಯನಕ್ಕೆ ಕಲಿಕೆಯಾಗಬಹುದು. ವೇದಿಕೆಯಲ್ಲಿ ಇನ್ನೂ ಹೆಸರಾಂತ ಬರಹಗಾರರು ಇದ್ದಾರೆ
ನನಗೆ ಅವಕಾಶವಿಲ್ಲ “ನಾನೇಕೆ ಹೋಗಬೇಕು” ಎಂಬ ಮನದ ಮಾತು ಬದಿಗಿಟ್ಟು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರಿ. ಇದೊಂದು ಬೃಹತ್ತಾದ ಜ್ಞಾನವಂತರ ನಾಲ್ಕನೆಯ ಕವಿ ಕಾವ್ಯ ಸಂಭ್ರಮವಾಗಿದೆ ಸುಮಾರು ಎರಡು ನೂರು ಸ್ನಾತಕೋತ್ತರ ವಿದ್ಯಾರ್ಥಿಗಳು ಕಲಿಕೆಗಾಗಿ ಬರುತ್ತಾರೆ. ಕನ್ನಡ ನಾಡಿನ ಸೃಜನಶೀಲ ಬರಹಗಾರರು ಆಗಮಿಸುವರು. ಒಟ್ಟಾರೆಯಾಗಿ ಎಂಟು ನೂರು ಜನ ಸೃಜನರು, ಕಾವ್ಯಾಸಕ್ತರು, ಕನ್ನಡಾಭಿಮಾನಿಗಳು,ಕನ್ನಡ ಸಂಘಟನೆಗಳು ಮತ್ತು ಕವಿ-ಕವಯಿತ್ರಿಯರು, ಅಭಿಮಾನಿ ಸಭಿಕರು ಪಾಲ್ಗೊಳ್ಳುವರು ಎಂದು ಅವರು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.
ನಾಡಿನ ಜಿಲ್ಲೆಗಳಿಂದ ತಾಲೂಕಗಳಿಂದ ಬರುವವರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ. ದಿನಾಂಕ,19:01:2025 ರಂದು ಬೆಳಿಗ್ಗೆ 9:30 ಭಾನುವಾರ ಕಾರ್ಯಕ್ರಮ ಜರುಗಲಿದೆ ಎಂದೂ ಅವರು ತಿಳಿಸಿದ್ದಾರೆ.