spot_img
spot_img

ಮೊದಲ ಸಂಸತ್ತು ನಿರ್ಮಿಸಿದ ಕೀರ್ತಿ ಬಸವಣ್ಣನವರದು – ಈರಣ್ಣ ಕಡಾಡಿ

Must Read

- Advertisement -

ಮೂಡಲಗಿ: ಶರಣರ ಅನುಭವ ಮಂಟಪ ಸ್ಥಾಪಿಸುವ ಮೂಲಕ ವಿಶ್ವದ ಮೊದಲ ಸಂಸತ್ತನ್ನು ನಿರ್ಮಾಣ ಮಾಡಿದ ಕೀರ್ತಿ ಜಗಜ್ಯೋತಿ ಬಸವಣ್ಣವರಿಗೆ ಸಲ್ಲುತ್ತದೆ. ಹೀಗಾಗಿ ದೆಹಲಿಯ ನೂತನ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಿದರೆ ಕಾಯಕದಿಂದ ದಾಸೋಹ ಮಾಡಿದ ಶರಣರಿಗೆ ಗೌರವ ಸನ್ಮಾನ ಸಲ್ಲಿಸಿದಂತಾಗುವುದು ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರು ಹೇಳಿದರು.

ಸೋಮವಾರ ಜ.02 ರಂದು ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ. ಜಿ ಗ್ರಾಮದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಅಪ್ಪನ ಜಾತ್ರೆ ಹಾಗೂ 24ನೇ ಸತ್ಸಂಗ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಸಮಾಜ ಸುಧಾರಕ ಎಂದು ಖ್ಯಾತಿಯಾದ ಜಗಜ್ಯೋತಿ ಬಸವಣ್ಣನವರ  ವಿಚಾರಗಳನ್ನು ಜಗತ್ತಿಗೆ ಪರಿಚಯಿಸಬೇಕಾಗಿದೆ. ನಮ್ಮ ನಾಡು ಶರಣ ಪರಂಪರೆಗೆ ಹೆಸರು ವಾಸಿಯಾಗಿದೆ ಹೀಗಾಗಿ ಇಂತಹ ಪರಂಪರೆಯನ್ನು ಹೊಂದಿದಂತಹ ಈ ನಾಡಿನ ಜನ ನಾವೆಲ್ಲ ಪುಣ್ಯವಂತರು ಎಂದರು.

ಪೂಜ್ಯ ಶ್ರೀ ನಿಜಗುಣ ದೇವರು ಪ್ರತಿ ವರ್ಷ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಈ ಭಾಗದ ಜನರು ಸಂತರ ಮಹಾತ್ಮರ ವಾಣಿಯನ್ನು ಕೇಳುವ ಮತ್ತು ದರ್ಶನ ಪಡೆಯುವಂತಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶ್ರೀಗಳನ್ನು ಸಂಸದರು ಸನ್ಮಾನಿಸಿದರು.

- Advertisement -

ಕಾರ್ಯಕ್ರಮದಲ್ಲಿ ನಿಡಸೋಸಿ ಮಠದ ಶ್ರೀ ಶಿವಲಿಂಗೇಶ್ವರ ಮಹಾ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಸುಣಧೋಳಿ ಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮಿಗಳು, ವೆಂಕಟೇಶ ಮಹಾರಾಜರು, ಗಣೇಶಾನಂದ ಮಹಾರಾಜರು, ಸಿದ್ದೇಶ್ವರ ತಾಯಿ, ಅನುಸೂಯಾ ದೇವಿ, ಶಾಮಾನಂದ ಪೂಜೇರಿ, ಬಸವರಾಜ ಹುಡೇದ, ಅಜೀತ ಪಾಟೀಲ, ಹಣಮಂತ ಶಕ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಹುನಗುಂದದ ಜನ ಭಕ್ತಿವಂತರು – ಪ್ರಶಾಂತ ದೇವರು

ಹುನಗುಂದ :-ಧರ್ಮ ಮಾನವನ ಅವಿಭಾಜ್ಯ ಅಂಗ ಧರ್ಮ ಎಂದರೆ ಬದುಕಿನ ರೀತಿ ಮಾನವ ಕುಲ ಸುಖದಿಂದ ಇರಬೇಕಾದ ಧರ್ಮ ಬೇಕೇ ಬೇಕು ಧರ್ಮದಿಂದ ಮಾತ್ರ ಜಗತ್ತಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group