ಮಕ್ಕಳು ಶಾಲೆಯ ಕಡೆಗೆ: ಹಬ್ಬದ ವಾತಾವರಣ !

Must Read

ಸಿಂದಗಿ: ತಾಲೂಕಿನ ಎಲ್ಲಾ ಶಾಲಾ ಆವರಣ ಹಾಗೂ ಶಾಲೆ ಕೊಠಡಿಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಶಾಲೆಗಳ ಮುಖ್ಯದ್ವಾರಗಳಲ್ಲಿ ತೆಂಗಿನಗರಿ, ಮಾವಿನ ತೋರಣ, ಬಲೂನಗಳನ್ನು ಕಟ್ಟಿ, ಶಾಲಾ ಪ್ರಾರಂಭೋತ್ಸವ ಮಾಡಿ ಶಾಲೆಗೆ ಬಂದ ಮಕ್ಕಳು, ಪಾಲಕರು, ಪೋಷಕರು, ಜನಪ್ರತಿನಿಧಿಗಳು, ಎಸ್.ಡಿ.ಎಮ್.ಸಿ. ಅಧ್ಯಕ್ಷರು, ಸದಸ್ಯರು, ಶಾಲೆಗಳ ಶಿಕ್ಷಕರು ಪ್ರಭಾತ ಫೇರಿ ಮಾಡಿ ಪಾಲಕರ ಮನೆಗೆ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ಕಳುಹಿಸಲು ವಿನಂತಿಸಿದರು. ಶಾಲೆಗೆ ಬಂದ ಮಕ್ಕಳಿಗೆ ಸಿಹಿ ಹಂಚಿ ಶೈಕ್ಷಣಿಕ ವರ್ಷಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಮ್. ಹರನಾಳ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಆಯ್.ಎಸ್. ಟಕ್ಕೆ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ಕೋವಿಡ್-19 ಸಂದರ್ಭದಲ್ಲಿ ಉಂಟಾದ ಕಲಿಕಾ ಹಿನ್ನಡೆಯನ್ನು ಸರಿಪಡಿಸಲು 2022-23 ರ ಶೈಕ್ಷಣಿಕ ವರ್ಷದಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಲಿಕಾ ಚೇತರಿಕೆ ವರ್ಷವಿಡಿ ನಡೆಯುವ ಕಾರ್ಯಕ್ರಮವಾಗಿದ್ದು, ಈ ಉಪಕ್ರಮದಡಿಯಲ್ಲಿ ಹಿಂದಿನ 2 ವರ್ಷದ ತರಗತಿಯ ಕಲಿಕಾ ಫಲಗಳನ್ನು ಪ್ರಸ್ತುತ ತರಗತಿಯೊಂದಿಗೆ ಸಮ್ಮಿಳಿತಗೊಳಿಸಿ ಕಲಿಕಾ ಚೇತರಿಕೆಯಡಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ ಹಾಗೂ ಮಳೆಬಿಲ್ಲು ಎಂಬ ವಿನೂತನ ಕಾರ್ಯಕ್ರಮವನ್ನು 16 ರಿಂದ 30 ರ ವರೆಗೆ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಡಿ ಮೊದಲನೆ ದಿನದಿಂದ 14ನೇ ದಿನದ ವರೆಗೆ ಆಟದ ಹಬ್ಬ, ಆಟಾಟಿಕೆ ಮೇಳ, ನಾಟಕದ ದಿನ, ಚಿತ್ರಚಿತ್ತಾರ, ಕಲಾ ಹಬ್ಬ, ಚಿತ್ರ ಜಗತ್ತು, ಕಥೆಗಳ ಹಬ್ಬ, ಕವಿತೆ ಕಟ್ಟೋಣ, ಹಾಡು ಹಾಡೋಣ, ಪರಿಸರ ಹಬ್ಬ, ನಿಸರ್ಗದಡೆಗೆ ನಮ್ಮ ನಡಿಗೆ, ಗಣಿತದ ಗಮ್ಮತ್ತು, ಇತಿಹಾಸದ ಹಬ್ಬ, ನಾವಿನ್ನು ಮರೆತ್ತಿಲ್ಲ. ಅಡುಗೆ ಮನೆಯಲ್ಲಿ ವಿಜ್ಞಾನ , ಗೊಂಚಲು, ಸಾಂಸ್ಕೃತಿಕ ಸಂಭ್ರಮ, ಶಾಲೆ ಸಿಂಗಾರ, ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಕೈ ಬಿಸಿ ಕರೆಯುವಂತೆ ಶೈಕ್ಷಣಿಕ ವಾತಾವರಣ ಸೃಷ್ಟಿಲಾಗುತ್ತದೆ ವಿದ್ಯಾರ್ಥಿಗಳು ಮತ್ತೆ ಶಾಲೆಗೆ ಆಗಮಿಸುವಂತೆ ಪ್ರೇರಣೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಬಿ.ಆರ್.ಪಿ./ಸಿ.ಆರ್.ಪಿ., ಶಿಕ್ಷಕರು, ಕಾರ್ಯಕ್ರಮಕ್ಕೆ ಆಗಮಿಸಿದ್ದರು.

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...

More Articles Like This

error: Content is protected !!
Join WhatsApp Group