ಮೂಡಲಗಿ:- ಕಿತ್ತೂರ ಉತ್ಸವದ ಜ್ಯೋತಿಯಾದ ಕಿತ್ತೂರ ಜ್ಯೋತಿಯು ರಥದ ಮೂಲಕ ಪಟ್ಟಣದ ಪ್ರಮುಖ ವೃತ್ತಗಳ ಮೂಲಕ ನಗರದಲ್ಲಿ ಆಗಮಿಸಿತು.
ಮೂಡಲಗಿ ತಾಲೂಕಾಡಳಿತ ಅಧಿಕಾರಿಗಳು ಸೇರಿ ಕಿತ್ತೂರು ಚೆನ್ನಮ್ಮಳ ವೀರಜ್ಯೋತಿಗೆ ಸ್ವಾಗತ ಕೋರಿದರು. ತಹಶಿಲ್ದಾರ ಗುಡುಮೆ ಪೂಜೆ ನೆರವೇರಿಸಿದರು ನಂತರ ಬೀಳ್ಕೊಟ್ಟರು.
ತಾಲೂಕಾ ಪಂಚಾಯತ ಅಧಿಕಾರಿ ಎಫ್.ಜಿ.ಚಿನ್ನಣವರ, ಸಿಡಿಪಿಒ ಯಲ್ಲಪ್ಪ ಗದಾಡಿ, ಪುರಸಭೆ ಮುಖ್ಯಾಧಿಕಾರಿ ತುಕಾರಾಂ ಮಾದರ, ಶಿವಾನಂದ ಬಬಲಿ ,ಪಿಎಸ್ಐ ರಾಜು ಪೂಜೇರಿ, ಗ್ರಾಮ ಲೆಕ್ಕಾಧಿಕಾರಿ ಬಾಗವಾನ, ಪರಶುರಾಮ ನಾಯಿಕ, ತಾಲೂಕಿನ ಸರ್ಕಾರಿ ಮತ್ತು ಅರೆ ಸರ್ಕಾರಿ ಅಧಿಕಾರಗಳು,ಜನಪ್ರತಿನಿಧಿಗಳು, ಊರಿನ ಮುಖಂಡರು,ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಮತ್ತು ವಿಶೇಷ ಕುಂಭ ಮೇಳದಲ್ಲಿ ಮಹಿಳೆಯರು ಸಹ ಪಾಲ್ಗೊಂಡಿದ್ದರು.