ತಿರುವನಂತಪುರಂ – ಮಧ್ಯರಾತ್ರಿಯಲ್ಲಿ ಮನೆಯೊಳಗೆ ಹೊಕ್ಕ ಯುವಕನನ್ನು ಕಳ್ಳನೆಂದು ತಿಳಿದುಕೊಂಡ ವ್ಯಕ್ತಿಯೊಬ್ಬ ೧೯ ವರ್ಷದ ಯುವಕನನ್ನು ಚಾಕುವಿನಿಂದ ಇರಿದು ಕೊಂದ ಘಟನೆ ಕೇರಳದ ತಿರುವನಂತಪುರಂ ನಲ್ಲಿ ನಡೆದಿದೆ.
ಲಲನ್ ಎಂಬಾತ ಬುಧವಾರ ಬೆಳಗಿನ ೩ ಗಂಟೆಗೆ ತನ್ನ ಮನೆಯಲ್ಲಿ ಯುವಕನೊಬ್ಬ ಪ್ರವೇಶಿಸುವುದನ್ನು ನೋಡಿ ಒಮ್ಮೆಲೆ ಅವನ ಮೇಲೆ ಮುಗಿಬಿದ್ದು ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ. ನಂತರದ ಆತ ತನ್ನ ಮಗಳ ಸ್ನೇಹಿತ ೧೯ ವರ್ಷದ ಅನೀಶ ಜಾರ್ಜ್ ಎಂದು ತಿಳಿದೊಡನೆ ಲಲನ್ ಪೊಲೀಸ್ ಠಾಣೆಗೆ ತೆರಳಿ ಘಟನೆಯ ಬಗ್ಗೆ ವಿವರಿಸಿದ್ದಾನೆ. ಪೊಲೀಸರು ತಕ್ಷಣವೇ ಲಲನ್ ಮನೆಗೆ ಧಾವಿಸಿದರಾದರೂ ಅಷ್ಟರಲ್ಲಿ ಅನೀಶ ಪ್ರಾಣ ಪಕ್ಷಿ ಹಾರಿಹೋಗಿತ್ತೆನ್ನಲಾಗಿದೆ.
ಅನೀಶ ಮಧ್ಯರಾತ್ರಿಯಲ್ಲಿ ಲಲನ್ ಮಗಳನ್ನು ಭೇಟಿಯಾಗಲು ಬಂದಿದ್ದನೆನ್ನಲಾಗಿದೆ. ಪೊಲೀಸರು ಲಲನ್ ವಿಚಾರಣೆ ಕೈಗೊಂಡಿದ್ದಾರೆ.