spot_img
spot_img

ರಾಜಕೀಯ ಆಡಳಿತದ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ – ಪ್ರೊ.ಮನ್ನಾಪೂರ

Must Read

- Advertisement -

ಮೂಡಲಗಿ : ದೇಶದ ಆಡಳಿತ ಪ್ರಕ್ರಿಯೆಯ ಪರಿಪೂರ್ಣ ಜ್ಞಾನ ಇಂದಿನ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ನಮ್ಮ ದೇಶ ವಿಶ್ವದಲ್ಲೇ ಬಲಾಢ್ಯವಾದ ಸಂವಿಧಾನ ಹೊಂದಿದ್ದು ಸಂವಿಧಾನದ ಅಡಿಯಲ್ಲಿ ರಾಜಕೀಯ ಆಡಳಿತ ಚಟುವಟಿಕೆಗಳು ಜರುಗುತ್ತಿವೆ. ಆಡಳಿತವು ದೇಶದ ಸಮಗ್ರ ಬೆಳವಣಿಗೆಯ ಮೇಲೆ ಪ್ರಭಾವ ಬೀರುವದರಿಂದ ಆಡಳಿತದ ಮಹತ್ವ ಮತ್ತು ರಾಜಕೀಯದ ವಾಸ್ತವಿಕ ರೂಪುರೇಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಮೂಡಲಗಿಯ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಿ.ಎಸ್. ಮನ್ನಾಪೂರ ಹೇಳಿದರು.

ಪಟ್ಟಣದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಅಣಕು ಯುವ ಸಂಸತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜಕೀಯ ರಂಗದಲ್ಲಿ ಸಾಕ್ಷರ ಯುವಕರು ತೊಡಗಿಕೊಂಡು ದೇಶದ ಆಡಳಿತವನ್ನು ಡಾ.ಬಿ.ಆರ್.ಅಂಬೇಡ್ಕರರವರ ಆಶಯದಂತೆ ಸುಭದ್ರಗೊಳಿಸುವುದು ಅಗತ್ಯವಾಗಿದ್ದು ಈ ದೃಷ್ಟಿಯಲ್ಲಿ ನಮ್ಮ ದೇಶದ ಮತ್ತು ರಾಜ್ಯದ ಚುನಾವಣಾ ಆಯೋಗಗಳು ಅನೇಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ರೂಪಿಸಿ ಆಯೋಜನೆ ಮಾಡಿ ಅರಿವು ಮೂಡಿಸುವುದು ಒಳ್ಳೆಯ ಚಿಂತನೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಆಕಾಶ ರಾವತ ಮಾತನಾಡುತ್ತಾ, ರಾಜಕೀಯ ರಂಗದಲ್ಲಿ ಇರುವ ಕಾನೂನು ನಿಬಂಧನೆಗಳು ಮತ್ತು ನಾಯಕತ್ವದಲ್ಲಿನ ಜವಾಬ್ದಾರಿಗಳು ಹಾಗೂ ಆಡಳಿತದಲ್ಲಿ ನಡೆಯುವ ಚರ್ಚೆಗಳ ಮಹತ್ವ ನಮ್ಮಂಥ ಯುವಕರಿಗೆ ಕಾರ್ಯಕ್ರಮಗಳು ಸ್ಪೂರ್ತಿ ನೀಡುತ್ತೇವೆ ಎಂದರು.

- Advertisement -

ವಿದ್ಯಾರ್ಥಿನಿ ರೇವತಿ ಮಾದರ ಮಾತನಾಡಿ, ಸರಕಾರ ನಡೆಸುವುದರಲ್ಲಿ  ಆಡಳಿತ ಮತ್ತು ವಿರೋದ ಪಕ್ಷದವರ ಪಾತ್ರ ಮತ್ತು ಅದರಲ್ಲಿ ಭಾಗವಹಿಸುವುದರಿಂದ ಜವಾಬ್ದಾರಿಯಿಂದ ಆಡಳಿತ ನಿಭಾಯಿಸುವ ರಾಜಕೀಯ ತಂತ್ರಗಳ ಅರಿವು ನಮಗೆ ದೊರಕುತ್ತದೆ ಎಂದರು.

ಅಣಕು ಯುವ ಸಂಸತ್ತಿನಲ್ಲಿ ವಿದ್ಯಾರ್ಥಿಗಳಾದ ಅಪೂರ್ವ ಚಿಕ್ಕೋಡಿ ಸಭಾಧ್ಯಕ್ಷರಾಗಿ, ದ್ರಾಕ್ಷಾಯಣಿ ಸುಣದೋಳಿ ಮುಖ್ಯಮಂತ್ರಿಯಾಗಿ, ಸದಾಶಿವ ಬ್ಯಾಳಿ ವಿರೋಧ ಪಕ್ಷದ ನಾಯಕನಾಗಿ, ಆಕಾಶ ರಾವತ ರಾಜ್ಯಪಾಲನಾಗಿ ಅಧಿಕಾರ ಚಲಾಯಿಸಿದರು. ಆಡಳಿತ ಮತ್ತು ವಿರೋಧ ಪಕ್ಷದ ವಿವಿಧ ಖಾತೆಗಳ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ವಹಿಸಿಕೊಂಡು ಪ್ರಶ್ನೆ ಚರ್ಚೆ ಹಾಗೂ ಪ್ರಮಾಣ ವಚನ ಸ್ವೀಕಾರ ಚಟುವಟಿಕೆಗಳು ಜರುಗಿ ಸಂವಿದಾನದನ್ವಯ ವಿದಾನಸಭೆಯಲ್ಲಿ ನಡೆಯುವ ಚರ್ಚೆಗಳಂತೆ ವಿದ್ಯಾರ್ಥಿಗಳು ಭಾಗವಹಿಸಿ ಆಡಳಿತದ ಪ್ರಾತ್ಯಕ್ಷಿಕೆಯನ್ನು ಪಡೆದು ಕೊಂಡರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ಉಪನ್ಯಾಸಕರಾದ ಸಂಜೀವ ವಾಲಿ ಸಂಗಮೇಶ ಕುಂಬಾರ ಮಲ್ಲಪ್ಪ ಜಾಡರ ಎಂ.ಬಿ. ಸಿದ್ನಾಳ ರವಿ ಕಟಗೇರಿ ಎಸ್.ಬಿ.ಬೆಳವಿ. ಎಂ.ಎಲ್. ಪೂಜೇರಿ ಅಶ್ವೀನಿ ಬಡಿಗೇರ ಜಿ.ಎಚ್. ಕಡಪಟ್ಟಿ ಹಾಜರಿದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group