ಸಿಂದಗಿ: ಮಾತಾಡು ಮಾತಾಡು ಕನ್ನಡ ಎಂಬಂತೆ ಪ್ರತಿ ಮಾತಿನಲ್ಲಿ ಕನ್ನಡವನ್ನೆ ಬಳಕೆ ಮಾಡಿ ನಮ್ಮ ನೆಲ-ಜಲ ಹಾಗೂ ಕನ್ನಡ ನಾಡು ನುಡಿಗಾಗಿ ನಾವೆಲ್ಲರು ಕಂಕಣಬದ್ಧರಾಗಿದರೆ ಮಾತ್ರ ಭಾರತ ಮಾತೆಯ ರಕ್ಷಣೆ ಮಾಡಿದಂತಾಗುತ್ತದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಕೋಟಿ ಕಂಠ ಗಾಯನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಮರೆತು ಹೋಗುತ್ತಿದೆ ಪ್ರತಿಯೊಂದು ಕಾರ್ಯದಲ್ಲಿ ಕನ್ನಡವನ್ನೆ ಬಳಕೆ ಮಾಡಬೇಕಲ್ಲದೆ ಕನ್ನಡ ತಾಯಿಯ ಮಕ್ಕಳಾದ ನಾವೆಲ್ಲ ಶುದ್ಧ ಬರಹ ಕನ್ನಡ, ಶುದ್ಧ ಭಾಷೆ ಕನ್ನಡ ಎಂಬ ವೇದ ವಾಕ್ಯವನ್ನು ಸದಾ ನೆನಪಿನಲ್ಲಿಟ್ಟುಕೊಂಡು ಕನ್ನಡದ ರಕ್ಷಣೆ ಕಟಿ ಬದ್ಧರಾಗೋಣ ಎಂದು ತಿಳಿಸುತ್ತ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ನಿಂಗಣ್ಣ ಬಿರಾದಾರ, ತಾಪಂ ಇಓ ಬಾಬು ರಾಠೋಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಹರನಾಳ, ಸಿಪಿಐ ರವಿ ಉಕ್ಕುಂದ, ಪುರಸಭೆ ಉಪಾದ್ಯಕ್ಷ ಹಾಸೀಂ ಆಳಂದ, ಮುಖ್ಯಾಧಿಕಾರಿ ರಾಜಶ್ರೀ ತುಂಗಳ, ಪಿಡ್ಲ್ಯೂಡಿ ಎಇಇ ತಾರಾನಾಥ ನಾಯಕ, ಎಚ್.ಜಿ.ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ, ನೌಕರರ ಸಂಘದ ಅದ್ಯಕ್ಷ ಅಶೋಕ ತೆಲ್ಲೂರ, ಪಿಎಸ್‍ಐ ಸೋಮೇಶ ಗೆಜ್ಜೆ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಪಟ್ಟಣದ ರಾಗರಂಜಿನಿ ಸಂಗೀತ ಅಕೆಡೆಮಿಯ ಡಾ. ಪ್ರಕಾಶ ಹಾಗೂ ಸಂಗಡಿಗರು ಕೋಟಿ ಕಂಠ ಗಾಯನದ 5 ಹಾಡುಗಳನ್ನು ಹಾಡಿದರು. ಅವರೊಂದಿಗೆ ವಿವಿಧ ಶಾಲೆಗಳ ಮಕ್ಕಳು ದ್ವನಿಗೂಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವಕುಮಾರ ಕಲ್ಲೂರ, ಕೃಷಿ ಅಧಿಕಾರಿ ಡಾ. ಎಚ್.ವೈ.ಸಿಂಗೇಗೋಳ, ಸಿಡಿಪಿಓ ಬಸವರಾಜ ಜಗಳೂರ, ಶಿರಸ್ತೆದಾರ ಸುರೇಸ ಮ್ಯಾಗೇರಿ, ಫುಡ್ ಶಿರಸ್ತೆದಾರ ರವಿ ರಾಠೋಡ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಸರಕಾರಿ ಆದರ್ಶ ವಿದ್ಯಾಲಯ, ಸರಕಾರಿ ಪ್ರೌಡಶಾಲೆ, ಭೀಮಾ ಯುನಿರ್ವಸೇಲ್, ಲೋಯಲಾ ಸ್ಕೂಲ್, ಜ್ಞಾನ ಭಾರತಿ ವಿದ್ಯಾಮಂದಿರ ವಿವಿಧ ಶಾಲೆಗಳ ಮುಖ್ಯಸ್ಥರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಿಕ್ಷಕ ಬಸವರಾಜ ಸೊಂಪೂರ ಕಾರ್ಯಕ್ರಮ ನಡೆಸಿಕೊಟ್ಟರು.