ಜೀವ ಸಂಪನ್ಮೂಲಗಳನ್ನು ಉಪಯೋಗಿಸಿ ತನ್ನ ಸೈನ್ಯ ಶಕ್ತಿಯನ್ನು ಹೆಚ್ಚಿಸಿಕೊಂಡ ವಿಜಯನಗರದ ಕೃಷ್ಣದೇವರಾಯ – ಡಾ || ಕೆ ಎಸ್ ಗಣೇಶಯ್ಯ

Must Read

ಬೆಂಗಳೂರಿನ ಆರ್. ವಿ. ರಸ್ತೆ ಯಲ್ಲಿ ಇರುವ ಪ್ರತಿಷ್ಠಿತ ವಿಜಯ ಕಾಲೇಜಿನಲ್ಲಿ ಆಯೋಜಿಸಿದ್ದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ವಿಜ್ಞಾನ ಸಚಿವಾಲಯದ ಅಂಗ ಸಂಸ್ಥೆಗಳಾದ ಇಂಡಿಯನ್ ಅಕಾಡಮಿ ಆಫ್ ಸೈನ್ಸಸ್ ಬೆಂಗಳೂರು, ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡಮಿ ಹೊಸ ದೆಹಲಿ, ದಿ ನ್ಯಾಷನಲ್ ಅಕಾಡಮಿ ಆಫ್ ಸೈನ್ಸಸ್ ಪ್ರಯಾಗರಾಜ್ ಇವರ ಪ್ರತಿಷ್ಠಿತ ಜಾಯಿಂಟ್ ಎಜುಕೇಷನ್ ಪ್ಯಾನೆಲ್ ಅಡಿಯಲ್ಲಿ ಜೀವ ಸಂಪನ್ಮೂಲಗಳ ಉಪಯೋಗದಲ್ಲಿ ಆಗಿರುವ ನೂತನ ಬೆಳವಣಿಗೆಗಳು ಹಾಗು ಜೈವಿಕ ತಂತ್ರಜ್ಞಾನ ಎಂಬ ವಿಷಯದ ಬಗ್ಗೆ ಎರಡು ದಿನಗಳ ವಿಶೇಷ ಉಪನ್ಯಾಸ ಕಾರ್ಯಾಗಾರವನ್ನು .ನಿವೃತ್ತ ಐಎಎಸ್ ಅಧಿಕಾರಿಗಳು ಹಾಗು ಬಿ.ಹೆಚ್.ಎಸ್. ಉನ್ನತ ಶಿಕ್ಷಣ ಸಂಸ್ಥೆಗಳ ಅದ್ಯಕ್ಷರಾದ ಜಿ. ವಿ. ವಿಶ್ವನಾಥ್ ಅವರು ಉಪನ್ಯಾಸ ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿದರು.

ಖ್ಯಾತ ಸಾಹಿತಿ, ಸಸ್ಯ ವಿಜ್ಞಾನಿ, ಅಂಕಣಕಾರ ಡಾ ಕೆ. ಎನ್.ಗಣೇಶಯ್ಯಅವರು ಈ ಎರಡು ದಿನಗಳ ಉಪನ್ಯಾಸ ಕಾರ್ಯಾಗಾರದ ಸಂಚಾಲಕರು ಆಗಿದ್ದು ಉದ್ಘಾಟನಾ ಭಾಷಣದಲ್ಲಿ ಜೀವ ಸಂಪನ್ಮೂಲಗಳನ್ನು ಉಪಯೋಗಿಸಿ ತನ್ನ ಸೈನ್ಯ ಶಕ್ತಿಯನ್ನು ಹೆಚ್ಚಿಸಿ ಕೊಂಡ ಹಾಗು ಜೀವ ಸಂಪನ್ಮೂಲಗಳನ್ನು ಉಪಯೋಗಿಸಿ ಹೇಗೆ ಸಾಮ್ರಾಜ್ಯಗಳು ಬೆಳೆದವು ಎಂದು ಡಾ ಗಣೇಶಯ್ಯ ಅವರು ತಿಳಿಸಿದರು.

ಸುತ್ತಮುತ್ತಲ ಕಾಲೇಜುಗಳ ಸುಮಾರು 125 ರಿಂದ 150 ಜೀವ ವಿಜ್ಞಾನದ ವಿದ್ಯಾರ್ಥಿಗಳು ಈ ಉಪನ್ಯಾಸ ಕಾರ್ಯಾಗಾರದಲ್ಲಿ ಪಾಲ್ಗೊಂಡು ತಮ್ಮ ಜ್ಞಾನಾರ್ಜನೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ.

ಕಾರ್ಯಾಗಾರದ ಸಂಯೋಜಕರಾದ , ಜೈವಿಕ ತಂತ್ರಜ್ಞಾನ ವಿಭಾಗದ ಉಪನ್ಯಾಸಕರಾದ ಭರತ್ ಎಂ. ಎ. ಅವರು ಅತಿಥಿಗಳನ್ನು ಸ್ವಾಗತಿಸಿದರು, ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾಗೋಪಾಲಕೃಷ್ಣ ಅವರು ಉಪನ್ಯಾಸ ಕಾರ್ಯಾಗಾರದ ಆಶಯವನ್ನು ತಿಳಿಸಿದರು.

ಬಿ.ಹೆಚ್. ಎಸ್. ಉನ್ನತ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಜಿ. ವಿ . ವಿಶ್ವನಾಥ್ ಅವರು ಮುಖ್ಯ ಅತಿಥಿಗಳಾಗಿ ಜೀವ ಸಂಪನ್ಮೂಲಗಳ ಪ್ರಮುಖತೆಯನ್ನು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರು ಪ್ರೊ. ಕೆ ಎಸ್ ಶೈಲಜ ಅವರು ಅಧ್ಯಕ್ಷತೆ ವಹಿಸಿದ್ದರು, ಉಪಪ್ರಾಂಶುಪಾಲರಾದ ಡಾ ರಾಧಾಕೃಷ್ಣ ಅವರು ವಂದನಾರ್ಪಣೆ ಮಾಡಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group