ಚಿನ್ನ ಕಳ್ಳರನ್ನು ಬಂಧಿಸಿದ ಕುಲಗೋಡ ಪೊಲೀಸರು

Must Read

ಮೂಡಲಗಿ: -ತಾಲೂಕಿನ ಕುಲಗೋಡ ಪೊಲೀಸರು ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಆಟೋರಿಕ್ಷಾ ಹಾಗೂ 9.6 ಲಕ್ಷದ ಬಂಗಾರದ ಆಭರಣಗಳನ್ನು  ವಶಪಡಿಸಿಕೊಂಡಿದ್ದಾರೆ.

ಗೋಕಾಕ ನಗರದ ರಾಘವೇಂದ್ರ ರಾಮು ರೇವಣಕರ (22) ಹಾಗೂ ಓಂಕಾರ ದಯಾನಂದ ಜಾಧವ (21) ಎಂಬ ಆರೋಪಿಗಳು ಬಂಧಿಯಾಗಿದ್ದಾರೆ.

ಕಳೆದ ಸಪ್ಟೆಂಬರನಲ್ಲಿ ಗೋಕಾಕ ತಾಲೂಕಿನ ಕೌಜಲಗಿಯ ಮನೆಯೊಂದರ ಕೀಲಿ ಮುರಿದು ಮನೆಯಲ್ಲಿದ್ದ ಚಿನ್ನ ಕಳ್ಳತನವಾದ ಬಗ್ಗೆ ಕುಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಎಸ್.ಪಿಯವರ ಮಾರ್ಗದರ್ಶನದಲ್ಲಿ,ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಪಿ ಎಸ್ ಐ ಆನಂದ ಬಿ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಿ ಆರೋಪಿಗಳನ್ನು ಬಂಧಿಸಿ 9.6ಲಕ್ಷ ಮೌಲ್ಯದ 113 ಗ್ರಾಂ ಬಂಗಾರ ಮತ್ತು ಆಟೋರಿಕ್ಷಾ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ,ಕುಲಗೋಡ ಪಿ ಎಸ್ ಐ ಆನಂದ ಬಿ,ಎಸ್ ಐ 2 ವಿ.ವಿ.ಉತ್ರೇಶ್ವರ, ಎಮ್.ಬಿ.ಕರಣಿ, ವಾಯ್.ಎಮ್.ಸಾಂಗಲಿ, ಎಸ್.ವಿ.ಹಣಜಿ, ಎಮ್.ಬಿ.ಅಡಿನ, ಕೆ.ಸಿ.ಬಾಗಲಿ, ಎಮ್.ಎಸ್.ಕುರೆನ್ನವರ, ಎಸ್.ಎನ್.ಬಡಬಂಡೆ, ಎಲ್.ಎಲ್.ಪೂಜೇರಿ, ಎಸ್.ಎಫ್.ಮಳಲಿ, ವಿ.ಎಕ್.ದೂಳಪ್ಪನವರ, ಎ.ಎಚ್.ವೇಶದಾರಿ ಮತ್ತು ವಿನೋದ ಟಕ್ಕನವರ ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group