- Advertisement -
ಮೂಡಲಗಿ: 12 ನೇ ಶತಮಾನದ ಎಲ್ಲಾ ಶರಣರ ವಚನ ಸಾಹಿತ್ಯ ಭಂಡಾರವನ್ನು ಉಳಿಸಿ ಸುರಕ್ಷಿತವಾಗಿ ಸೈನ್ಯದೊಂದಿಗೆ ದಂಡನಾಯಕನಾಗಿ ಉಳವಿಯವರೆಗೆ ಸುರಕ್ಷಿತವಾಗಿ ಮುಟ್ಟಿಸಿದ ಮಹಾನ್ ಪುರುಷ ಮಡಿವಾಳ ಮಾಚಿದೇವರು 914ನೇ ಜಯಂತಿಯನ್ನು ತಾಲೂಕಿನ ಕುಲಗೋಡ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಆಚರಿಸಲಾಯಿತು
ಈ ಸಮಯದಲ್ಲಿ ಮಡಿವಾಳರ ಸಮಾಜದ ಮುಖಂಡರಾದ ಶ್ರೀಕಾಂತ್ ಮಡಿವಾಳರ, ಭೀಮಸಿ ಮಡಿವಾಳರ, ಶಿವಾನಂದ ಮಡಿವಾಳರ, ಹನುಮಂತ ಮಡಿವಾಳರ, ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗ ಮತ್ತು ಶಾನೂರ್ ಮುಲ್ಲಾ, ಸುರೇಶ್ ಸಸಾಲಟ್ಟಿ, ಪದ್ಮನಾಭ ಹೆಗಡೆ,ಮಹಮ್ಮದ್ ಮಕಂದರ್, ಉಮಾ ಮಡಿವಾಳರ್, ಪದ್ಮಾವತಿ, ಮಡಿವಾಳರ, ರಂಜನ ಬೋಸ್ಲೆ ಉಪಸ್ಥಿತರಿದ್ದರು.