ಬೆಂಗಳೂರು – ನಾಟ್ಯ ನಿನಾದ ನೃತ್ಯಾಲಯದ ಕುಮಾರಿ ಅನುಷ ರಾಘವೇಶ್ ಬಾಲ್ಯದಿಂದಲೇ ಗುರು ವಿದ್ವಾನ್ ಚೇತನ್ಗಂ ಗಟ್ಕರ್ ಹಾಗೂ ವಿದುಷಿ ಶ್ರೀಮತಿ ಚಂದ್ರಪ್ರಭ ಚೇತನ್ ರವರಲ್ಲಿ ಭರತ ನಾಟ್ಯಾಭ್ಯಾಸ ಮಾಡುತ್ತಿದ್ದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಕಿರಿಯ ದರ್ಜೆಯ ಭರತನಾಟ್ಯ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣಳಾಗಿದ್ದಾಳೆ.
ತನ್ನ ನಾಟ್ಯ ಶಾಲೆಯಾದ ನಾಟ್ಯ ನಿನಾದ ನೃತ್ಯಾಲಯದೊಂದಿಗೆ ಹಲವಾರು ನೃತ್ಯ ಉತ್ಸವಗಳಲ್ಲೂ ಸಹ ಪಾಲ್ಗೊಂಡಿದ್ದಾಳೆ. ಕಲೆಯಲ್ಲಿ ಉನ್ನತ ಆಸಕ್ತಿ ಹೊಂದಿರುವ ಇವಳು ಭರತನಾಟ್ಯದೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಕಥಕ್ ಸಹ ಕಲಿಯುತ್ತಿದ್ದಾಳೆ.
ಕುಮಾರಿ ಅನುಷ ದಿನಾಂಕ 20/1/2022 ರಂದು ತನ್ನ ಭರತನಾಟ್ಯ ರಂಗಪ್ರವೇಶವನ್ನು ಬೆಂಗಳೂರು ಭಾರತೀಯ ವಿದ್ಯಾಭವನದ ಕಿಂಚ ಸಭಾಂಗಣದಲ್ಲಿ ಸಂಜೆ 5:45 ಮಾಡುತ್ತಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಕನ್ನಡ ಚಲನಚಿತ್ರ ನಟರಾದ ಕೆ.ಎಸ್.ಅಶ್ವಥ್ ರವರ ಮಗಳು ಮತ್ತು ಹಿರಿಯ ನಾಟ್ಯ ಗುರುಗಳಾದ ವಿದುಷಿ ಶ್ರೀಮತಿ ವಿಜಯಾ ಮೂರ್ತಿ ರವರು ಆಗಮಿಸಲಿದ್ದಾರೆ ಎಂದು ಅಯೋಜಕರು ತಿಳಿಸಿದ್ದಾರೆ.
ವಿವರಗಳಿಗೆ: 9886598171 ಸಂಪರ್ಕಿಸಲು ಕೋರಲಾಗಿದೆ