ರಾಜ್ಯಮಟ್ಟದ ಸಾಹಿತ್ಯಾತ್ಮಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ಗ್ರಾಮಾಂತರ ಬುದ್ಧಿಜೀವಿಗಳ ಬಳಗವು ತನ್ನ ನಲವತ್ತನೆ ವಾರ್ಷಿಕೋತ್ಸವದ ಅಂಗವಾಗಿ ಮುಂಬರುವ ೨೩ ರಂದು ರಾಷ್ಟ್ರಕವಿ ಕುವೆಂಪು ನೆನಪಿನ ರಾಜ್ಯಮಟ್ಟದ ಸಾಹಿತ್ಯೋತ್ಸವ ಹಮ್ಮಿಕೊಂಡಿದೆ .
ಮೈಸೂರು ನಗರದ ಜೆ.ಎಲ್. ಬಿ. ರಸ್ತೆಯಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಎಂಜಿನ್ನೀಯರ‍್ಸ್ ಸಭಾಂಗಣದಲ್ಲಿ ನಡೆಯುವ ಕಾರ‍್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಷಿ ಅವರು ಉದ್ಘಾಟಿಸುವರು. ಸಾಹಿತಿ ಭೇರ‍್ಯ ರಾಮಕುಮಾರ್ ಸಾಹಿತ್ಯೋತ್ಸವದ ಅಧ್ಯಕ್ಷತೆ ವಹಿಸುವರು.
ಆರು ಕೃತಿಗಳ ಲೋಕಾರ್ಪಣೆ-
ಇದೇ ಸಂದರ್ಭದಲ್ಲಿ ಉದಯೋನ್ಮುಖ ಕವಿಗಳ ಆರು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಕೊಡಗಿನ ಕವಿ ಎಂ. ಡಿ.ಅಯ್ಯಪ್ಪ ಅವರ ಹೃದಯರಾಗ ಕೃತಿಯನ್ನು ಹಿರಿಯ ಸಾಹಿತಿಗಳಾದ ಡಾ. ಸಿ.ಪಿ.ಕೆ.ಅವರು ,ಪುಣೆಯ ಲೇಖಕಿ ಶ್ರೀಮತಿ ಹೇಮಮಳಗಿ ಅವರ ಹೃದಯ ಕಾದಂಬರಿಯನ್ನು ಮಹಾಕವಿ ಡಾ.ಲತಾ ರಾಜಶೇಖರ್ ಲೋಕಾರ್ಪಣೆ ಮಾಡುವರು.
ಶ್ರೀಮತಿ ರತ್ನ ಚಂದ್ರಶೇಖರ್ ಅವರ ಕಾವ್ಯ ಲಹರಿ ಕೃತಿಯನ್ನು ಹಿರಿಯ ಸಾಹಿತಿ ಹಾಗೂ ರಂಗಕರ‍್ಮಿ ಪ್ರೊಫೆಸರ್ ಹೆಚ್.ಎ.ಪಾರ್ಶ್ವನಾಥ ಅವರು, ವಕೀಲರಾದ ಬಿ.ಕೆ.ನೂತನ ಕುಮಾರ್ ಅವರ ಮೊದಲ ತೊದಲು ಕೃತಿಯನ್ನು ಸಾಹಿತಿ, ನ್ಯಾಯವಾದಿ ಡಾ. ರೇವಣ್ಣ ಬಳ್ಳಾರಿ ಲೋಕಾರ್ಪಣೆ ಮಾಡುವರು.
ಪುಣೆಯ ಹೇಮಾ ಮಳಗಿ ಅವರ ಕವನ ಸಂಕಲನ ಸಂಗಮ ಕೃತಿಯನ್ನು ಸಾಹಿತಿಗಳಾದ ಡಾ. ಪುಷ್ಪ ಐಯ್ಯಂಗಾರ್, ಕಾವ್ಯಧಾರೆ ಕೃತಿಯನ್ನು ಸಾಹಿತಿಗಳಾದ ಡಾ. ಜೆ.ಲೋಹಿತ್ ಲೋಕಾರ್ಪಣೆ ಮಾಡುವರು.ಹಿರಿಯ ಪತ್ರಕರ್ತ ರಾದ ಅಂಶಿ ಪ್ರಸನ್ನಕುಮಾರ್,ಲೇಖಕಿ ಡಾ.ಸೌಜನ್ಯ ಶರತ್ ,ಸಮಾಜಸೇವಕ ಶ್ರೀಮತಿ ಜುಬೇಧ ಮುಖ್ಯ ಅತಿಥಿಗಳಾಗಿ ಇರುವರು.
ಹೆಚ್.ಎಸ್.ಕೆ. ಶತಮಾನೋತ್ಸವ ಪ್ರಶಸ್ತಿ
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಹಾಗೂ ಅಂಕಣಕಾರರಾದ ಪ್ರೊ.ಹೆಚ್. ಎಸ್.ಕೆ. ಅವರ ನೆನಪಿನ ಶತಮಾನೋತ್ಸವ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಹಾಗೂ ಸಾಹಿತಿಗಳಾದ ಆಂಶಿ ಪ್ರಸನ್ನಕುಮಾರ್, ಹಾವೇರಿಯ ಪರಿಸರ ಚಿಂತಕ ಜಗದೀಶ ಮಹಾರಾಜ್ ಪೇಟ್ ಹಾಗೂ ಹಿರಿಯ ಸಾಹಿತಿ ಹಾಗೂ ರಂಗ ಕರ‍್ಮಿಗಳಾದ ಪ್ರೊ. ಹೆಚ್. ಏ.ಪಾರ್ಶ್ವನಾಥ ಅವರಿಗೆ ಪ್ರದಾನ ಮಾಡಲಾಗುವುದು.
ಸುವರ್ಣ ಕರ್ನಾಟಕ ಪ್ರಶಸ್ತಿಯನ್ನು ಮಹಾ ಕಾವ್ಯ ರಚನೆಗಾಗಿ ಮಹಾ ಕವಿ ಡಾ.ಲತಾ ರಾಜಶೇಖರ್ ಮಹಾ ಕಾವ್ಯ , ವೈದ್ಯಕೀಯ ಸೇವೆಗಾಗಿ ಕೆ.ಆರ್.ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ನರೇಂದ್ರ , ಸಾಹಿತ್ಯ ಹಾಗೂ ಸಮಾಜಸೇವೆಗಾಗಿ ಡಾ.ಪುಷ್ಪ ಅಯ್ಯಂಗಾರ್ ಹಾಗೂ ಶ್ರೀಮತಿ ವೈದೇಹಿ ಅಯ್ಯಂಗಾರ್ ಅವರಿಗೆ ಪ್ರದಾನ ಮಾಡಲಾಗುವುದು.
ಇದೇ ಸಂದರ್ಭದಲ್ಲಿ ರಾಷ್ಟ್ರ ಕವಿ ಕುವೆಂಪು ಅವರನ್ನು ಕುರಿತಂತೆ ರಾಜ್ಯ ಪರಿಶಿಷ್ಟ ವರ‍್ಗಗಳ ಕಲ್ಯಾಣ ಇಲಾಖೆಯ ರಾಜ್ಯ ಅಧಿಕಾರಿ ಹಾಗೂ ಕನ್ನಡಪರ ಚಿಂತಕ ಡಿ. ಜಿ.ಗುರುಶಾಂತಪ್ಪ ಉಪನ್ಯಾಸ ಮಾಡುವರು.
ಸಾಮೂಹಿಕ ನೇತ್ರದಾನ ಕಾರ‍್ಯಕ್ರಮವನ್ನು ವೈದ್ಯರಾದ ಡಾ.ಕೆ.ಆರ್.ಗೌತಮ್ ಅವರು ಉದ್ಘಾಟಿಸುವರು.ಪರಿಸರ ಜಾಗೃತಿ ಕಾರ‍್ಯಕ್ರಮವನ್ನು ರೈತ ಮುಖಂಡರಾದ ಸರಗೂರು ನಟರಾಜ್ ಉದ್ಘಾಟಿಸುವರು.
ಅಪೂರ್ವ ದಂಪತಿಗಳಿಗೆ ಸನ್ಮಾನ. –
ಇದೇ ಸಂದರ್ಭದಲ್ಲಿ ವಿವಿದ ಕ್ಷೇತ್ರ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆರು ದಂಪತಿಗಳಿಗೆ ಸುವರ್ಣ ಕರ್ನಾಟಕ ಅಪೂರ‍್ವ ದಂಪತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಸಮಾಜಸೇವೆ ಹಾಸನದ ಡಾ. ಎಂ. ಸಿ. ರಾಜು ದೊಡ್ಡ ಮಂಡಿಗನಹಳ್ಳಿ ಹಾಗೂ ರೇವತಿ ದಂಪತಿ , ವೈದ್ಯಕೀಯ ಹಾಗೂ ಕನ್ನಡ ಸೇವೆಗಾಗಿ ಕೆ.ಆರ್.ನಗರದ ಡಾ.ಕೆ.ಆರ್.ಗೌತಮ್ ಹಾಗೂ ಡಾ.ವಾಣಿಶ್ರೀ ದಂಪತಿ, ಸಾಹಿತ್ಯ ಹಾಗೂ ಕಾನೂನು ಸೇವೆಗಾಗಿ ಡಾ. ರೇವಣ್ಣ ಬಳ್ಳಾರಿ ಹಾಗೂ ಶಕುಂತಲಾ ದಂಪತಿಗಳು , ಸಾಹಿತ್ಯ ಸೇವೆಗಾಗಿ ಶ್ರೀಮತಿ ಸಂಧ್ಯಾರಾಣಿ ದೇಶಪಾಂಡೆ ಹಾಗೂ ಗೋಪಾಲ ದೇಶಪಾಂಡೆ ದಂಪತಿಗಳು , ಗ್ರಾಮೀಣ ಸೇವೆಗಾಗಿ ಹೊಸ ಅಗ್ರಹಾರದ ಸಮಾಜಸೇವಕ ಹೆಚ್.ಕೆ. ಓಬೇಗೌಡ ಹಾಗೂ ಕಮಲಮ್ಮ ದಂಪತಿಗಳು ,ಶಿಕ್ಷಣ ಸೇವೆಗಾಗಿ ಕೆ.ಆರ್.ನಗರದ ವೈ. ಸಿ.ಸತ್ಯನಾರಾಯಣ ಹಾಗೂ ಶ್ರೀಮತಿ ಭಾರತಿ ದಂಪತಿಗಳಿಗೆ ಸುವರ್ಣ ಕರ್ನಾಟಕ ಅಪೂರ‍್ವ ದಂಪತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ –
ಇದೇ ಸಂದರ‍್ಭದಲ್ಲಿ ಹಾಸನ ಜಿಲ್ಲೆಯ ಹಿರಿಯ ಕವಿ ಗಿರಿರಾಜ ಹೊನ್ನಶೆಟ್ಟಿ ಹಳ್ಳಿ, ಬೆಂಗಳೂರಿನ ಲೇಖಕಿ ಡಾ.ಸೌಜನ್ಯ ಶರತ್ ಚಂದ್ರ , ಕೊಡಗು ಜಿಲ್ಲೆಯ ಲೇಖಕಿ ,ನಟಿ ಶ್ರೀಮತಿ ಈರಮಂಡಲ ಹರಿಣಿ ವಿಜಯ್ ,ಮೈಸೂರಿನ ಪದ್ಮಶ್ರೀ ಜೈನ ಮಹಿಳಾ ಸಮಾಜದ ಶ್ರೀಮತಿ ಲತಾ ಸುರ‍್ಶನ್ , ಚನ್ನರಾಯಪಟ್ಟಣದ ಸಮಾಜ ಸೇವಕ ಜಬಿವುಲ್ಲಾ ಬೇಗ್,ಯುವ ಉದ್ಯಮಿ ರಾಘವೇಂದ್ರ ಸಿ., ಗೀತ ರಚನೆಕಾರ ರಜಾಕ್ ಪುತ್ತೂರು,ಸಾಹಿತಿ ಸುಜಾತ ರವೀಶ್,ಪುಣೆಯ ಸಾಹಿತಿ ಹೇಮಾ ಧೀ.ಮಳಗಿ ಹಾಗೂ ಗೋಕರ‍್ಣದ ಸಬ್ ಇನ್ಸ್ಪೆಕ್ಟರ್ ಖಾದರ್, ಗಾಯಕಿ ಮೊನಾಲಿಸಾ.ಎಂ.ಎನ್ ಇವರುಗಳಿಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ರಾಷ್ಟ್ರ ಕವಿ ಕುವೆಂಪು ಚೇತನ ಪ್ರಶಸ್ತಿ –
ಸಾಹಿತ್ಯ ರಂಗದ ಸೇವೆಗಾಗಿ ಕೊಡಗಿನ ಕವಿ ಎಂ. ಡಿ. ಅಯ್ಯಪ್ಪ ,ವಿಶೇಷ ಚೇತನ ಕವಿ ಬಂದಿಹೊಳೆ ಮಂಜುನಾಥ್ ,ವಕೀಲ ಹಾಗೂ ಕವಿ ಬಿ.ಕೆ.ನೂತನ ಕುಮಾರ್,ಕೆ. ವಿ. ರಮೇಶ್ ಕಟ್ಟೇಪುರ ಹಾಗೂ ಕವಯತ್ರಿ ಶ್ರೀಮತಿ ರತ್ನ ಚಂದ್ರ ಶೇಖರ್ ಇವರುಗಳಿಗೆ ರಾಷ್ಟ್ರ ಕವಿ ಕುವೆಂಪು ಕಾವ್ಯ ಚೇತನ ಪ್ರಶಸ್ತಿ ನೀಡಲಾಗುವುದು.
ಉತ್ತರ ಕನ್ನಡ ಜಿಲ್ಲೆಯ ಮರವಂತೆಯ ಕಲಾವಿದೆ ಜಯ ದೇವಿಸುತೆ ಮರವಂತೆ ಹಾಗೂ ಮೈಸೂರಿನ ಗಾಯಕಿ ಮುತ್ತು ಲಕ್ಷ್ಮಿ ರಾಮಚಂದ್ರ ಅವರಿಗೆ ರಾಷ್ಟ್ರ ಕವಿ ಕುವೆಂಪು ಸಾಂಸ್ಕೃತಿಕ ಚೇತನ ಪ್ರಶಸ್ತಿ ನೀಡಲಾಗುವುದು.ರೈತ ಮುಖಂಡ ಸರಗೂರು ನಟರಾಜ್ ಹಾಗೂ ಕೆ.ಆರ್.ಪೇಟೆಯ ಸಂಪ್ರದಾಯಿಕ ಅಂರ‍್ಜಲ ತಜ್ಞ ನವಿಲುಮಾರನ ಹಳ್ಳಿ
ರಾಮೇಗೌಡ ಅವರಿಗೆ ರಾಷ್ಟ್ರಕವಿ ಕುವೆಂಪು ಕೃಷಿ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಇದೇ ಸಂದರ‍್ಭದಲ್ಲಿ ನಡೆಯುವ ರಾಷ್ಟ್ರಕವಿ ಕುವೆಂಪು ನೆನಪಿನ ಕವಿಗೋಷ್ಠಿಯನ್ನು ಹಾಸನದ ಸಾಹಿತಿಗಳಾದ ಶ್ರೀಮತಿ ಜಯಶ್ರೀ ಡಾ. ಕೃಷ್ಣ ಉದ್ಘಾಟಿಸುವರು. ವಿಶೇಷ ಚೇತನ ಕವಿ ಬಂಡಿ ಹೊಳೆ ಮಂಜುನಾಥ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಅಮೆರಿಕದ ಕವಯತ್ರಿ ಶ್ರೀಮತಿ ಸವಿತಾ ರವಿಶಂಕರ್ ಪಾಲ್ಗೊಳ್ಳುವರು.
ಕಾರ‍್ಯಕ್ರಮಕ್ಕೆ ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಭೇರ‍್ಯ ರಾಮಕುಮಾರ್ ಕೋರಿದ್ದಾರೆ.