ಮಂಗಳೂರು- ಸೌಹಾರ್ದ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಇದರ ಮಂಗಳೂರು ಘಟಕ ವತಿಯಿಂದ ರಾಷ್ಟ್ರ ಕವಿ ಕುವೆಂಪು ಅವರು ಬರೆದ ಕವನ ವಾಚನ ಹಾಗೂ ವಿಚಾರಧಾರೆ ಎಂಬ ವಿಶಿಷ್ಟ ಕಾರ್ಯಕ್ರಮವು ಇಂದಿರಾ ಪ್ರಿಯದರ್ಶಿನಿ ಪಾರ್ಕ್, ಆಯುಷ್ ಆಸ್ಪತ್ರೆ ಹತ್ತಿರ ಲಾಲ್ ಭಾಗ್, ಪಬ್ಬಾಸ್ ಎದುರು, ಮಂಗಳೂರಿನಲ್ಲಿ ದಿನಾಂಕ 23 ರ ಸಂಜೆ 3.00 ಗಂಟೆಯಿಂದ ಅತ್ಯಂತ ಯಶಸ್ವಿಯಾಗಿ ನೆರವೇರಿತು
ಶ್ರೀಮತಿ ರೇಖಾ ಸುದೇಶ ರಾವ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಲಾಪದಲ್ಲಿ ಕವಿಗಳು ಕುವೆಂಪು ರಚಿತ ಕವನಗಳನ್ನು ಆರಿಸಿ ವಾಚನಮಾಡಿದರು. ತದನಂತರ ಆ ಕವಿತೆಯ ವಿಮರ್ಶೆಯನ್ನು ಮಾಡಿ ಕವಿಭಾವದ ಮೆರುಗನ್ನು ಹೊರ ಸೂಸಿದರು
ಸೌಹಾರ್ದ ಸಾಹಿತ್ಯ ವೇದಿಕೆಯ ಆರ್ ಎಂ.ಗೋಗೇರಿ ಯವರು ಸಂಪೂರ್ಣ ನಿರ್ವಾಹಕರಾಗಿ ಮತ್ತು ಮೋಡರೇಟರ್ ಆಗಿ ಪ್ರತಿಯೊಬ್ಬರು ವಾಚಿಸಿದ ಕವನದ ಅಂಶಗಳನ್ನೊಳ ಗೊಂಡ ರಸಪ್ರಶ್ನೆಯನ್ನೂ ಮಾಡಿ ರಂಜಿಸಿದರು
ಇದಲ್ಲದೆ ಅನಿತಾ ಶೆಣೈ, ರೇಖಾ ಸುದೇಶರಾವ್,ಶ್ರೀಮತಿ ಪ್ರತಿಭಾ ಸಾಲಿಯಾನ್,ಗೊಗೇರಿ ಮತ್ತಿತರರು ಕುವೆಂಪು ರಚಿತ ಕವನಗಳನ್ನು ಸಂಗೀತ ಸಹಿತ ಗಾಯನಮಾಡಿದರು
ಈ ವಿಶೇಷ ಕಾರ್ಯಕ್ರಮದಲ್ಲಿ ಡಾ ಸುರೇಶ್ ನೆಗಳಗುಳಿ (ಅಗಣಿತ ತಾರ ಗಣಗಳ ನಡುವೆ) ಅನಾರ್ಕಲಿ ಸಲೀಮ್ (ಮೂರು ದಿನದ ಸಂತೆ), ಎನ್ ನಾಗೇಂದ್ರ ಶ್ರೀಮತಿ ಸುಲೋಚನ ಕೊಟ್ಟಾರ (ಬಾರಿಸು ಕನ್ನಡ ಡಿಂಡಿಮವ) ಕೆ ಎನ್ ಭಟ್ (ಜೇನುಗೂಡು) ಅರುಣ್ ನಾಗರಾಜ್ (ಆನಂದಮಯ ಈ ಜಗ ಹೃದಯ) ಶ್ರೀಮತಿ ಕಸ್ತೂರಿ ಜಯರಾಂ (ಸಂಸಾರಿಯಾಗಲಿರು ಬ್ರಹ್ಮ ಚಾರಿ ಪ್ರಾರ್ಥನೆ) ಆರ್ ಎಮ್ ಗೋಗೇರಿ (ಓ ನನ್ನ ಚೇತನಾ) ಶ್ರೀಮತಿ ಅನಿತಾ ಶೆಣೈ (ಜೀವನ ಸಂಜೀವನ) ಶ್ರೀಮತಿ ಪ್ರತಿಭಾ ಸಾಲಿಯಾನ್ ಶ್ರೀಮತಿ ರೇಖಾ ಸುದೇಶ್ ರಾವ್ ಗುಣಾಜೆ ರಾಮಚಂದ್ರ ಭಟ್( ದೇವರು ರುಜು ಮಾಡಿದನು) ಶಿವರಾಂ ಸಾಗರ್ (ತನುವು ನಿನ್ನದು ಮನವು ನಿನ್ನದು) ವಿನಯನೇತ್ರಾ ಶ್ರೀಮತಿ ಶಾಂಭವಿ ಪ್ರಭು ಕುವೆಂಪು ರಚಿತ ಕವನ ವಾಚನಮತ್ತು ವಿಮರ್ಶೆ ಮಾಡಿದರು
ಹಿರಿಯ ಕವಯಿತ್ರಿ ಶ್ರೀಮತಿ ಅನಿತಾ ಶೆಣೈ ಸಂಚಾಲಕರಾಗಿದ್ದರು. ಮೋಹನ್ ಅತ್ತಾವರ, ಚಂದ್ರಶೇಖರ್ ದೈತೋಟ ಮತ್ತಿತರರು ಉಪಸ್ಥಿತರಿದ್ದರು
ವರದಿ : ಡಾ ಸುರೇಶ ನೆಗಳಗುಳಿ
ಮಂಗಳೂರು