Homeಲೇಖನಸೇವೆ ಮತ್ತು ಸ್ಪಂದನೆಯ ಇನ್ನೊಂದು ಹೆಸರು ಕಲಬುರಗಿಯ ಲೇಡಿ ಸಿಂಘಂ

ಸೇವೆ ಮತ್ತು ಸ್ಪಂದನೆಯ ಇನ್ನೊಂದು ಹೆಸರು ಕಲಬುರಗಿಯ ಲೇಡಿ ಸಿಂಘಂ

spot_img

ಕುಡಿಯಲು ನೀರು ಕೇಳಿದರೆ ಕೊಡಲು ಹಿಂದೆ ಮುಂದೆ ಯೋಚಿಸುವ ಈಗಿನ ಕಾಲದಲ್ಲಿ ಹಗಲು ರಾತ್ರಿ ಎನ್ನದೆ ರಕ್ತದ ಅಗತ್ಯ ಇರುವ ಜನರಿಗೆ ಸಕಾಲದಲ್ಲಿ ವ್ಯವಸ್ಥೆ ಮಾಡುವ, ಕೊರೆಯುವ ಚಳಿಯಲ್ಲಿ ನಡುಗುತ್ತಾ ಮಲಗಿರುವ ನಿರಾಶ್ರಿತರಿಗೆ ,ಅನಾಥರಿಗೆ ಭಿಕ್ಷುಕರಿಗೆ ಬೆಚ್ಚನೆಯ ಹೊದಿಕೆ ಹೊದಿಸುವ, ಬರಡಾದ ಭೂಮಿಯಲ್ಲಿ ಸಾವಿರಾರು ಸಸಿ ನೆಟ್ಟು ಭೂಮಿಗೆ ಶೃಂಗಾರ ಮಾಡಿ,ಅನಾಥ ಮಕ್ಕಳ ಆಶಾ ಕಿರಣ,ಕೋವಿಡ್ ಸಮಯದಲ್ಲಿ ಜೀವ ಭಯ ತೊರೆದು ಪ್ರಾಣ ಪಣಕ್ಕಿಟ್ಟು ರೋಗಿಗಳ ಸೇವೆ ಮಾಡಿದ,ಅನಾಥರ ಅಳಲನ್ನು ಆಲಿಸುವ ಗಂಡೆದೆಯ ಗುಂಡಿಗೆಯ ಯುವ ಸ್ಪೂರ್ತಿ ಮಾಲಾ ಕಣ್ಣಿ…..

ಕಾಲೇಜ ಯುವಕರಿಗೆ ಮಾದರಿ…. ಮಾಲಾ ಕಣ್ಣಿ ಅಂದರೆ ಮಕ್ಕಳಿಂದ ಹಿರಿಯರಿಗೂ ಅಚ್ಚುಮೆಚ್ಚು.ಇವರ ಉಡಿಗೆ ತೊಡಿಗೆ ಗತ್ತು ಗಮತ್ತು ನೋಡಿದರೆ ಚಿತ್ರನಟಿ ಮಾಲಾಶ್ರೀ ನೋಡಿದಂತೆ.

ಸಮಾಜ ಸೇವೆ ಮಾಡಲು ಮನಸಿದ್ದರೆ ಸಾಲದು ನಾವು ಆರ್ಥಿಕವಾಗಿ ಸಿದ್ಧರಿರಬೇಕು , ಮಾಲಾ ತನ್ನ ತಂದೆ ಕೊಡುತ್ತಿದ್ದ ಪಾಕೆಟ್ ಮನಿ ಯನ್ನು ತನ್ನ ಜೊತೆ ಓದುತ್ತಿದ ವಿದ್ಯಾರ್ಥಿಗಳ ಶಾಲಾ ಕಾಲೇಜು ಶುಲ್ಕ ,ಪುಸ್ತಕ, ಸಮವಸ್ತ್ರ ಕ್ಕೆ ಸಹಕರಿಸುತ್ತಿದ್ದರಂತೆ…ಸೇವೆ ಮತ್ತು ಸ್ಪಂದನೆ ಎಂಬ ವಿಚಾರಧಾರೆಯೊಂದಿಗೆ 2019 ರಲ್ಲಿ ಸಮಕಾಲೀನ ಗೆಳೆಯರಾದ ಕಲ್ಯಾಣರಾವ್ ಪಾಟೀಲ್ ಕಣ್ಣಿ, ಮಹೇಶ್ಚಂದ್ರ ಪಾಟೀಲ್ ಕಣ್ಣಿ ಎಂಬುವವರಿಂದ ರಚಿಸಲ್ಪಟ್ಟಿದೆ.

ಮಧ್ಯಮ ವರ್ಗದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಕಣ್ಣಿ ಅದ್ಬುತ ಯುವ ಶಕ್ತಿ, ಸಮಾಜ ಸೇವೆಗಾಗಿಯೇ ಜನ್ಮ ತಾಳಿದ ಯುವ ಪ್ರತಿಭೆ.ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ ರಿಂದ ರಚಿಸಿದ ಸಂಘಟನೆ ಇಂದು 400 ಕ್ರಿಯಾಶೀಲ ಸಕ್ರಿಯ ಸದಸ್ಯರನ್ನು ಹೊಂದಿದೆ.ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ

ಕಲಬುರಗಿ ಜಿಲ್ಲೆಯ ಕಣ್ಣಿ ಎಂಬ ಗ್ರಾಮದಲ್ಲಿ 18-08-1992 ರಂದು ಹಣಮಂತರಾಯ ನಿವೃತ್ತ ಎಎಸ್ಐ ತಾಯಿ ಅನ್ನಪೂರ್ಣ ಅವರ ಉದರದಲ್ಲಿ ಜನಿಸಿದ ನಕ್ಷತ್ರ.ವಿದ್ಯಾಭ್ಯಾಸ. ಗೋದುತಾಯಿ ಕಾಲೇಜಿನಲ್ಲಿ MBA ಪದವಿಯನ್ನು ಕಲಬುರಗಿಯಲ್ಲಿ ಮುಗಿಸಿದ್ದಾರೆ..

ತಂದೆಯಿಂದ ಬೇಕರಿ ಉದ್ಯಮದಲ್ಲಿ ಕೈಜೋಡಿಸಿದ ಮಾಲಾ MBA ಪದವಿ ಪಡೆದರು ಬೇಕರಿ ಉದ್ಯಮದಲ್ಲಿ ಎತ್ತಿದ ಕೈ, ಅನೇಕ ಯುವಕರಿಗೆ ಬೇಕರಿ ತಿನಿಸುಗಳ ತಯಾರಿ ತರಬೇತಿ ನೀಡಿದ್ದು, ಇವರ ಸಹಾಯದಿಂದ ಅನೇಕ ಯುವಕರು ಸ್ವಂತ ಬೇಕರಿಯ ಮಾಲೀಕರಾಗಿದ್ದು ಶ್ಲಾಘನೀಯ.

ಇವರ ಸೇವೆಗಳು

ಕೊವಿಡ್ ಸಂದರ್ಭದಲ್ಲಿ ಬಡವರಿಗೆ, ಅಲೆಮಾರಿ ಜನಾಂಗದವರಿಗೆ ರೇಷನ್ ಕಿಟ್ ವಿತರಣೆ ಹಾಗೂ ಮಾಸ್ಕ್ ಸ್ಯಾನಿಟೈಸರ್ ವಿತರಣೆ,ಜಿಲ್ಲಾಡಳಿತ, ಮಹಾನಗರ ಪಾಲಿಕೆ, ವಾರ್ತಾ ಇಲಾಖೆ ಹಾಗೂ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜೊತೆ ಸೇರಿಕೊಂಡು ಕರೋನಾ ಜಾಗೃತಿ ಮಾಡಲಾಯಿತು.

2 ನೆ ಅಲೆ ಕೋವಿಡ್ ಸಮಯದಲ್ಲಿ
10,000 ಸಾವಿರಕ್ಕೂ ಅಧಿಕ ಜನರಿಗೆ ಉಚಿತ ಕೋವಿಡ್ ವ್ಯಾಕ್ಸಿನ್ ಬಹುಮುಖ್ಯವಾಗಿ ಮಂಗಳಮುಖಿಯರಿಗೆ ವ್ಯಾಕ್ಸಿನೇಷನ್ ನೀಡಲಾಗಿದೆ.ಉತ್ತರ ಕರ್ನಾಟಕ ಪ್ರವಾಹ ಸಂದರ್ಭದಲ್ಲಿ ನಿತ್ಯಬಳಕೆ ವಸ್ತುಗಳ ಕಿಟ್, ಬಟ್ಟೆ ಬ್ಲಾಂಕೆಟ್ ವಿತರಣೆ. ಸ್ವಚ್ಛ ಪರಿಸರ ಅಭಿಯಾನ ಮೂಲಕ ನಾಲ್ಕುಚಕ್ರ ತಂಡವು ‘ ಶ್ರಮದಾನ’ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳುವ ಮೂಲಕ ಇಲ್ಲಿಯವರೆಗೆ 50 ಕ್ಕೂ ಉದ್ಯಾನವನಗಳನ್ನು ಹಾಗೂ ದೇವಸ್ಥಾನ, ಐತಿಹಾಸಿಕ ಪುಷ್ಕರಣಿಗಳ ಸ್ವಚ್ಛತಾ ಅಭಿಯಾನ ಮಾಡಿದೆ.

ಹಸಿರು ಕಲಬುರಗಿ ಅಭಿಯಾನದಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಉಚಿತ ಸಸಿಗಳನ್ನು ವಿತರಿಸುತ್ತ ಜಿಲ್ಲೆಯಾದ್ಯಂತ ಸಾವಿರಾರು ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯದಲ್ಲಿ ನಿರತವಾಗಿದೆ.. ಪ್ರತಿ ವರ್ಷ 2500 ಸಸಿಗಳನ್ನು ವಿತರಿಸುತ್ತಾರೆ .ವಿಶೇಷ ಎಂದರೆ ಸಭೆ ಸಮಾರಂಭಗಳಲ್ಲಿ ಸಸಿಗಳನ್ನೆ ಉಡುಗೊರೆಯಾಗಿ ಕೊಡುತ್ತಾರೆ.

ಪುಸ್ತಕ ಅಭಿಯಾನ ಮೂಲಕ ಪ್ರತಿ ವರ್ಷ ಜೂನ್ ತಿ‌ಂಗಳ ಶಾಲಾ ಪ್ರಾರಂಭದ ಸಮಯ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ಸ್, ಬ್ಯಾಗ್ ಹಾಗೂ ಕಡುಬಡ ವಿದ್ಯಾರ್ಥಿಗಳ ಬಸ್ ಪಾಸ್ ವ್ಯವಸ್ಥೆ ಮಾಡುತ್ತ ಬರುತ್ತಿದೆ.

ಮಣ್ಣಿನ ಮಡಿಕೆ ಅಭಿಯಾನ ಮೂಲಕ
ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳು ನೀರು ಕುಡಿಯಲು ಮಣ್ಣಿನ ಮಡಿಕೆಗಳನ್ನು ಗಿಡಕ್ಕೆ ತೂಗು ಹಾಕುವ ಮೂಲಕ ನೀರಿನ ದಾಹ ತೀರಿಸುವುದರ ಜೊತೆಗೆ ಕರ್ಮಚಾರಿಗಳಿಗೆ ಕೊಡೆ ವಿತರಣೆ ಮೂಲಕ ನೆರಳಿನ‌ ಆಶ್ರಯ ಮಾಡುತ್ತಾರೆ.ಒಂದು ಜೊತೆ ಬಟ್ಟೆ ಅಭಿಯಾನ‌ ಮೂಲಕ ಚಳಿಗಾಲದಲ್ಲಿ ನಿರ್ಗತಿಕರಿಗೆ, ಅಶಕ್ತರಿಗೆ, ಅಲೆಮಾರಿ‌ ಜನಾಂಗದವರಿಗೆ ಬ್ಲಾಂಕೆಟ್, ಚಾದರ್, ಸ್ವೇಟರ್ ವಿತರಣೆ ಜೊತೆಗೆ ಒಳ್ಳೆಯ ಉಡುಪುಗಳನ್ನು ಹೊಂದಿಸಿ ಕೊಡುತ್ತಿದ್ದಾರೆ.

ರಕ್ತದಾನ ಅಭಿಯಾನ ಮೂಲಕ ತುರ್ತು ಪರಿಸ್ಥಿತಿಯಲ್ಲಿ ಬೇಕಾಗುವ ರಕ್ತವನ್ನು ಹೊಂದಿಸಿಕೊಡುತ್ತಾರೆ..ತಮ್ಮ ಹುಟ್ಟು ಹಬ್ಬದ ದಿನದಂದು ದೇಹದಾನ ಒಡಂಬಡಿಕೆ ಮಾಡಿಕೊಂಡಿದ್ದಾರೆ ಜೊತೆಗೆ ತಂಡದ ಸದಸ್ಯರಿಂದ ನೇತ್ರದಾನ ಪ್ರತಿಜ್ಞೆ ಹಾಗೂ ಮಹಿಳಾ ಸಾಧಕರನ್ನು ಗುರುತಿಸಿ 5 ಜನ ಸಾಧಕಿ ಮಹಿಳೆಯರಿಗೆ ಸ್ತ್ರೀ ಶಕ್ತಿ ಪ್ರಶಸ್ತಿ ನೀಡಿ ಗೌರವಿಸುತ್ತಾರೆ..ಯಾವುದೇ ಸಭೆ ಸಮಾರಂಭಗಳಲ್ಲಿ ಆಹಾರ ಉಳಿದರೆ ಅದನ್ನು ಭಿಕ್ಷೆ ಬೇಡುವವರಿಗೆ, ನಿರ್ಗತಿಕರಿಗೆ ತಲುಪಿಸುವ ಕಾರ್ಯ ಮಾಡುತ್ತಾರೆ.

ನಿರಂತರವಾಗಿ ವೃದ್ಧಾಶ್ರಮ, ಅನಾಥಾಶ್ರಮ, ಕುರುಡ, ಮೂಕ ಮತ್ತು ಕಿವುಡರ ಶಾಲೆಗೆ ಭೇಟಿ ನೀಡಿ ಅವರ ಕುಂದುಕೊರತೆಗಳನ್ನು ನೀಗಿಸುತ್ತಾರೆ ಮತ್ತು ತಂಡದ ಸದಸ್ಯರ ವಿಶೇಷ ದಿನಗಳನ್ನು ಅಲ್ಲಿಯೇ ಆಚರಿಸುತ್ತಾರೆ.

ಭಾರತ ದೇಶವೇ ಹೆಮ್ಮೆ ಪಡುವಂತಹ ತಂಡದ ಇನ್ನೊಂದು ಮಹತ್ಕಾರ್ಯ ಎಂದರೆ ಅಮೃತ ಮಹೋತ್ಸವ ಅಂಗವಾಗಿ 15-08-2022 ರಂದು 750 ಮೀಟರ್ ಉದ್ದದ ರಾಷ್ಟ್ರ ಧ್ವಜ ಮೆರವಣಿಗೆ ಮಾಡಿರುವುದು ಹಾಗೂ ಇದು ಏಷ್ಯಾ ದೇಶದಲ್ಲಿಯೇ 2ನೇ ಸ್ಥಾನ ಪಡೆದುಕೊಂಡು ಕೀರ್ತಿ ಪತಾಕೆ ತನ್ನದಾಗಿಸಿಕೊಂಡಿದೆ.ಪ್ರಸ್ತುತ ನಾಲ್ಕುಚಕ್ರ ತಂಡವು ಕಲಬುರಗಿ ಮಹಾನಗರ ಪಾಲಿಕೆಯ ಬ್ರಾಂಡ್ ಅಂಬಾಸಿಡರ್ ಆಗಿದೆ.

ನಾಲ್ಕುಚಕ್ರ ತಂಡದ ಗುರಿ ಮತ್ತು ಉದ್ದೇಶ:-

ರೈತ ಮತ್ತು ಯೋಧರ ಮಕ್ಕಳಿಗಾಗಿ ಧರ್ಮಶಾಲೆ ಪ್ರಾರಂಭಿಸಿ ಉಚಿತ ಶಿಕ್ಷಣ.ಬಡವರಿಗಾಗಿ ಧರ್ಮಾಸ್ಪತ್ರೆ ಪ್ರಾರಂಭಿಸಿ ಉಚಿತ ಚಿಕಿತ್ಸೆನಿರ್ಗತಿಕರಿಗೆ, ಅಶಕ್ತರಿಗೆ, ಅನಾಥರಿಗೆ ಆಶ್ರಯ ತಾಣಗಳನ್ನು ನಿರ್ಮಿಸುವುದು. ಪ್ಲಾಸ್ಟಿಕ್ ಮುಕ್ತ ಭಾರತದ ಕನಸು. ಬಟ್ಟೆ ಬ್ಯಾಗ್ ತಯಾರಿಸುವ ಮೂಲಕ ಉದ್ಯೋಗ ನೀಡುವ ಗುರಿ. ವಿಶೇಷವಾಗಿ ಮಹಿಳೆಯರಿಗಾಗಿ ಸೇವೆ ನೀಡಿದ್ದಾರೆ.

ತಂಡದ ಸೇವಾಕಾರ್ಯಗಳಿಗೆ ಹಾಗೂ ಇವರಿಗೆ ಸಂದ ಪ್ರಶಸ್ತಿ ಗಳು

ಶರಣ ಬಸವೇಶ್ವರ ವಿಶ್ವವಿದ್ಯಾಲಯದಿಂದ ಸೇವಾರತ್ನ ಪ್ರಶಸ್ತಿ.ರಾಜ್ಯದ ಮುಖ್ಯಮಂತ್ರಿಗಳಿಂದ ಕಲ್ಯಾಣ ಕರ್ನಾಟಕ ಉತ್ಸವ ದಿನದಂದು ಕೋರೊನಾ ವಾರಿಯರ್ಸ್‌ ಎಂದು ಸನ್ಮಾನ.ರಾಜ್ಯದ Tv5 ಚಾನೆಲ್ ಪ್ರಸಾರ ಮಾಡುವ ನಮ್ಮ ಬಾಹುಬಲಿ ವಿಶೇಷ ಸಂದರ್ಶನಕ್ಕೆ ಆಯ್ಕೆ.ಪ್ರಜಾವಾಣಿ ಪತ್ರಿಕೆ ಬಳಗದಿಂದ 2020 ಸಾಲಿನ ಯುವ ಸಾಧಕಿ ಪ್ರಶಸ್ತಿ.ಮಾಜ಼ಿ ಸೈನಿಕರ ಸಂಘದಿಂದ ಪ್ರಶಸ್ತಿ.ಛತ್ರಪತಿ ಯುವ ಬ್ರೀಗೆಡ್ ವತಿಯಿಂದ ಸೇವಾರತ್ನ ಪ್ರಶಸ್ತಿ.ಆರೋಗ್ಯ ಇಲಾಖೆಯಿಂದ ಪ್ರಶಸ್ತಿ. ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಕೋರೊನಾ ವಾರಿಯರ್ಸ್‌ ಪ್ರಶಸ್ತಿ. ಯುವಜನ ಜಾಗೃತಿ ವೇದಿಕೆ ವತಿಯಿಂದ ಪ್ರಶಸ್ತಿ.ದಾಸೋಹ ನಿಧಿ ಪ್ರತಿಷ್ಠಾನ ವತಿಯಿಂದ ಪ್ರಶಸ್ತಿ.ವಿವೇಕಾನಂದ ಸೋಷಿಯಲ್ ಫ಼ೌಂಡೇಶನ್ ವತಿಯಿಂದ ಪ್ರಶಸ್ತಿ.ಎಸಬಿಐ ಬ್ಯಾಂಕಿನವರಿಂದ ಮಹಿಳಾ ಸಾಧಕಿ ಪ್ರಶಸ್ತಿ.ಕನ್ನಡಪರ ಸಂಘಟನೆಗಳಿಂದ ಕಲ್ಯಾಣ ಕರ್ನಾಟಕ ರತ್ನ. ಹೆಮ್ಮೆಯ ಕನ್ನಡತಿ, ನಾರಿಶಕ್ತಿ ಪ್ರಶಸ್ತಿ. ಮಹಿಳಾ ಸಬಲಿಕರಣ ಇಲಾಖೆಯಿಂದ ಪ್ರಶಸ್ತಿ. ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದಿಂದ “ರಾಣಿ ಅಬ್ಬಕ್ಕ ದೇವಿ”ರಾಜ ಪ್ರಶಸ್ತಿ ದೊರಕಿವೆ.

ಎಲ್ಲರ ಪ್ರೀತಿಯ ಮಾಲಾ

*”ಹೆಣ್ಣು ಅಬಲೆ ಅಲ್ಲ ಶಕ್ತಿಯ ನೆಲೆ” ಮಹಿಳಾ ಪ್ರಪಂಚದಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ತೋರಿಸಿಕೊಟ್ಟವರು,ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರಂತರವಾಗಿ ಸಾಮಾಜಿಕ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಮಾನವೀಯ ಮೌಲ್ಯ ಇರುವ ಅಪರೂಪದ ಜೀವಿ…ಹುಟ್ಟು ಹೋರಾಟಗಾರರಾಗಿರುವ ಇವರು, ಕನ್ನಡ ಭಾಷೆಯ ಪರಿಣಿತ ವಾಗ್ಮಿಯಾಗಿ ಹೊರಹೊಮ್ಮಿದ್ದಾರೆ…

ಯಾವತ್ತೂ ಪ್ರಚಾರವನ್ನು ಬಯಸದೇ ಇರುವ ಇವರು ಇಂದಿನ ಯುವಕರು ಸಮಾಜಿಕ ಕಾರ್ಯದತ್ತ ಮುಖ ಮಾಡಲಿ , ದೇಶದ ಪ್ರಗತಿಯಲ್ಲಿ ಕೈಜೋಡಿಸಲಿ, ಸ್ವಾವಲಂಬಿ ಸ್ವಾಭಿಮಾನಿ ಜೀವನ ನಡೆಸಲಿ ಎಂದು ಬಯಸುತ್ತಾರೆ….

ಇಂದು ಇವರ ಹುಟ್ಟುಹಬ್ಬ ಶುಭವಾಗಲಿ……

ನಂದಿನಿ ಸನಬಾಳ್ ಕಲಬುರಗಿ

RELATED ARTICLES

Most Popular

error: Content is protected !!
Join WhatsApp Group