ಗುರುಭವನ ಕಟ್ಟಡಕ್ಕೆ ಭೂಮಿ; ಮುಂದಿನ ಕಾರ್ಯಗಳಿಗೆ ಸಹಕರಿಸಿ- ರಮೇಶ ಭೂಸನೂರ

Must Read

ಸಿಂದಗಿ: ಶಿಕ್ಷಕರ ಬಹುದಿನಗಳ ಬೇಡಿಕೆಯ ಗುರುಭವನದ ಕಟ್ಟಡಕ್ಕೆ ಪಟ್ಟಣದ ಪುರಸಭೆಯ ನಗರೋತ್ಥಾನ ಯೋಜನೆಯಡಿ ರೂ 50 ಲಕ್ಷ ವೆಚ್ಚದಲ್ಲಿ ಭೂಮಿ ನೀಡಿದ್ದೇವೆ ಮುಂದಿನ ಭಾಗವಾಗಿ ಇನ್ನೂ ರೂ 50 ಲಕ್ಷ ನೀಡುವುದಾಗಿ ನೀಡಿ ಹೆಚ್ಚು ವೇಗವಾಗಿ 16 ತಿಂಗಳ ಅವಧಿಯಲ್ಲಿ ಸರಕಾರದಿಂದ ಅನುದಾನ ತಂದು ಅಭಿವೃದ್ಧಿ ಪಡಿಸಲು ಮುಂದಾಗುತ್ತೇನೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ 21 ನೇ ವಾರ್ಡಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ 02 ಆವರಣದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ, ಪುರಸಭೆಯ 2021-22ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ 4 ಹಂತ ಅನುದಾನದಡಿಯಲ್ಲಿ ರೂ 50 ಲಕ್ಷ ವೆಚ್ಚದಲ್ಲಿ ಗುರುಭವನದ ಭೂಮಿ ಪೂಜೆ ನೇರವೇರಿಸಿ ಮಾತನಾಡಿ, ಪಟ್ಟಣದಲ್ಲಿ ಈ ತಾಲೂಕಿನ ನಟ ಸಾರ್ವಭೌಮ ಹಂದಿಗನೂರ ಸಿದ್ರಾಮಪ್ಪನವರ ರಂಗಮಂದಿರ ಭೂಮಿ ಪೂಜೆ ನೇರವೇರಿಸಿದ್ದೇನೆ ಸುಮಾರು ಒಂದು ಕೋಟಿ 90 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತದೆ.

ನೂತನ ಬಡಾವಣೆಗಳಿಗೆ ಕುಡಿಯುವ ನೀರು ನಿರ್ವಹಣೆಯಾಗುತ್ತಿಲ್ಲ ಅದಕ್ಕೆ ಸಾರ್ವಜನಿಕರ ಬೇಡಿಕೆಯಿದ್ದು ಸುಮಾರು ರೂ 95 ಕೋಟಿ ವೆಚ್ಚದಲ್ಲಿ ಪ್ರತಿ ಮನೆಗಳಿಗೆ ನೀರು ಸರಬರಾಜು ಯೋಜನೆಯ ಪ್ರಸ್ತಾವನೆ ಕಳಿಸಲಾಗಿದೆ. ಅಲ್ಲದೆ ಸಂತೆ ಮಾರುಕಟ್ಟೆಯ ಬೇಡಿಕೆಯಿದ್ದು ಹಳೇ ತಹಶೀಲ್ದಾರ ಆಫೀಸ್ ಜಾಗೆಯನ್ನು ಮಾರುಕಟ್ಟೆ ನಿರ್ಮಾಣ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ.

ಈಗಿದ್ದ ತಹಶೀಲ್ದಾರ ಕಛೇರಿ ಸ್ಥಳಾಂತರಗೊಂಡ ನಂತರ ವಾಣಿಜ್ಯ ಸಂಕೀರ್ಣ ಮಾಡುವ ಬೇಡಿಕೆಯಿದೆ ಅಭಿವೃದ್ಧಿ ವಿಷಯದಲ್ಲಿ ಪಕ್ಷಾತೀತವಾಗಿ ಪುರಸಭೆ ಅಧ್ಯಕ್ಷರ ಆದಿಯಾಗಿ ಎಲ್ಲ ಸದಸ್ಯರು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದು ತೀವ್ರಗತಿಯಲ್ಲಿ ಎಲ್ಲ ಕಾಮಗಾರಿಗಳಿಗೆ ಪೂರ್ಣಗೊಳ್ಳುವ ಸನ್ನಾಹದಲ್ಲಿವೆ ಎಂದರು.  

ಶಿಕ್ಷಕರ ಸಂಘದ ರಾಜ್ಯ ಉಪಾದ್ಯಕ್ಷ ಯು.ಆಯ್.ಶೇಖ, ಪುರಸಭೆ ಅದ್ಯಕ್ಷ ಹಣಮಂತ ಸುಣಗಾರ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ, ಸದಸ್ಯ ಗೋಲ್ಲಾಳ ಬಂಕಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಐ.ಎಸ್. ಟಕ್ಕೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಆನಂದ ಭೂಸನೂರ, ಪ್ರೌಢಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಆರ್.ಎಚ್.ಬಿರಾದಾರ, ಗುತ್ತಿಗೆದಾರ ಬಿ.ಎಸ್.ಬಿರಾದಾರ ತೆಗ್ಗಿಳ್ಳಿ, ಪುರಸಭೆ ಜೆಇ ಎ.ಜೆ.ನಾಟೀಕಾರ, ಶಿವಕುಮಾರ ಬಿರಾದಾರ, ಎಸ್.ಬಿ.ಚಿಗರಿ, ಎಸ್.ಎಂ.ಮಸಳಿ, ಅಲ್ತಾಫ ಸಾಲೋಟಗಿ, ಯು.ಬಿ.ಚೌಧರಿ, ಆರ್.ಎಂ.ಕುಮಸಗಿ, ರಾಯಪ್ಪ ಇವಣಗಿ, ಮಹಾದೇವಪ್ಪ ಗಾಯಕವಾಡ, ಚಂದ್ರಶೇಖರ ಅಮಲಿಹಾಳ ಸೇರಿದಂತೆ ಹಲವರು ಇದ್ದರು.

Latest News

ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ

ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ...

More Articles Like This

error: Content is protected !!
Join WhatsApp Group