ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ

Must Read

ಸಿಂದಗಿ ಪಟ್ಟಣದ ಸೋಮಲಿಂಗೇಶ್ವರ ಚೌಕದಲ್ಲಿ ಪುರಸಭೆ 2021-22ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ವಾರ್ಡ ನಂ 10 ರಲ್ಲಿ ರೂ. 6ಲಕ್ಷ ಅನುದಾನದಲ್ಲಿ ಶ್ರೀ ಸೋಮಲಿಂಗೇಶ್ವರ ದೇವಸ್ಥಾನದಿಂದ ದುರ್ಗಿ ಮನೆಯವರೆಗೆ ಹಾಗೂ ಮಸೂತಿ ಹಿಂದುಗಡೆಯಿಂದ ಸಂಗಮ ಮನೆಯವರೆಗೆ ಜಿ.ಐ.ಪೈಪ್ ಅಳವಡಿಸುವ ಮತ್ತು ಕುಲಕರ್ಣಿ ಮನೆಯಿಂದ ಶಂಕರಗೌಡ ಪಾಟೀಲ ಮನೆಯವರೆಗೆ ಸಿಸಿ ರಸ್ತೆ ಹಾಗೂ ವಾರ್ಡ 13 ರಲ್ಲಿ ರೂ. 9 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅವರು ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ, ಸದಸ್ಯ ಭೀಮು ಕಲಾಲ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ, ಕಿರಿಯ ಅಭಿಯಂತರ ಎ.ಜೆ.ನಾಟೀಕಾರ, ಶಿವಾನಂದ ದುರ್ಗಿ, ಶಿವು ಬಡಿಗೇರ, ಅಶೋಕ ಯಡ್ರಾಮಿ, ಮಂಜುನಾಥ ಪಾಟೀಲ, ಈಶ್ವರ ಪಾಟೀಲ, ಶರಣು ಪಾಟೀಲ, ಆನಂದ ದುರ್ಗಿ ಸೇರಿದಂತೆ ಅನೇಕರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group