ರೂ.1.70 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ; ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಕನಸು ಭೂಸನೂರ

Must Read

ಸಿಂದಗಿ: ಕಳೆದ ಉಪ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಹಂತ ಹಂತವಾಗಿ ಮತಕ್ಷೇತ್ರದ ಅಭಿವೃದ್ಧಿಗೆ ಮುಂದಾಗುತ್ತಿದ್ದು ಜನರೇ ನನ್ನ ಉಸಿರು, ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಕನಸಾಗಿದೆ ಎಂದು ಶಾಸಕ ರಮೇಶ ಭೂಸನೂರ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಬಗಲೂರ ಗ್ರಾಮದಿಂದ ನಾರಾಯಣಪುರ ಕ್ರಾಸ್ ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕಳೆದ 10 ವರ್ಷದ ಅಧಿಕಾರದ ಮೇಲೆ ಕಳೆದ ಉಪಚುನಾವಣೆಯಲ್ಲಿ ಕ್ಷೇತ್ರದ ಜನತೆ ನನ್ನ ಮೇಲೆ ಅಪಾರವಾದ ವಿಶ್ವಾಸವನ್ನು ಇಟ್ಟು ನಿರೀಕ್ಷೆ ಗಿಂತಲೂ ಅಧಿಕ ಮತಗಳಿಂದ ಆಯ್ಕೆ ಮಾಡಿದ ಋಣ ನನ್ನ ಮೇಲಿದೆ ಸಿಂದಗಿ ಮತ್ತು ಆಲಮೇಲ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಪ್ರತಿಯೊಂದು ಸಮಸ್ಯೆಗಳನ್ನು ಆಲಿಸಿ ಕಾರ್ಯ ನಿರ್ವಹಿಸುತ್ತಿದ್ದೇನೆ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ಹೇಳಿದ ಅವರು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ವಿಶೇಷ ಅನುದಾನದ ಅಡಿಯಲ್ಲಿ ರೂ. 1.70 ಕೋಟಿ ಮೊತ್ತದಲ್ಲಿ ಬಗಲೂರ ಗ್ರಾಮದಿಂದ ನಾರಾಯಣಪುರ ಕ್ರಾಸ್ ವರೆಗೆ ಸುಮಾರು ಎರಡೂವರೆ ಕಿಮೀ ಡಾಂಬರಿಕರಣ ರಸ್ತೆ ನಾಳೆಯಿಂದ ಪ್ರಾರಂಭವಾಗಲಿದೆ ಎಲ್ಲ ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ರಸ್ತೆ ಪಕ್ಕದ ರೈತರು ಹಿರಿಯರು ಯುವಕರು ಗುತ್ತಿಗೆದಾರರಿಗೆ ಸಹಕಾರ ನೀಡಿ ಸುಸಜ್ಜಿತವಾದ ರಸ್ತೆ ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಮಾಜಿ ತಾ ಪಂ ಸದಸ್ಯ ರಮೇಶಗೌಡ ಬಿರಾದಾರ, ಈರಗಂಟೆಪ್ಪ ಮಾಗಣಗೇರಿ, ರುದ್ರಗೌಡ ಕಿರಣಗಿ , ಸಿದ್ದನಗೌಡ ಗುತ್ತರಗಿ (ಮೋರಟಗಿ )ಗುತ್ತಿಗೆದಾರ ಎನ್.ವ್ಹಿ.ಕುಲಕರ್ಣಿ, ಜಿತೇಂದ್ರ ರಜಪೂತ, ಪ್ರಕಾಶ ತುಪ್ಪದ, ಶಿವು ಪದ್ಮಾ, ಶಿವು ಹೂನಳ್ಳಿ, ಸುರೇಶ ಕುರನಳ್ಳಿ, ಮಾಹಾಂತೇಶ ಹೂನಳ್ಳಿ, ಸುನೀಲ ಮಾಗಣಗೇರಿ, ಸಿದ್ದಣ್ಣ ಮೂರ್ಛಾವರ, ಮಾಹಾಂತಯ್ಯ ಗವಿಮಠ, ಭೀಮರಾಯ ಮೂರ್ಛಾವರ, ಸಂಗಣ್ಣ ಮಾಗಣಗೇರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group