ಹಾಸನದ ವಸಂತಕುಮಾರ್ ಅವರ ಲ್ಯಾಂಡ್ ಸ್ಕೇಪ್ ಏಕವ್ಯಕ್ತಿ ಚಿತ್ರ ಪ್ರದರ್ಶನ

Must Read

ಹಾಸನದ ಚಿತ್ರ ಕಲಾ ಶಿಕ್ಷಕರು ಮತ್ತು ಕಲಾವಿದರು ಆದ ವಸಂತಕುಮಾರ್ ಅವರ ವಾಟರ್ ಕಲರ್, ಲ್ಯಾಂಡ್ ಸ್ಕೇಪ್, ಬಾರ್ಕೋಲ್ ಮತ್ತು ಪೆನ್ಸಿಲ್ ವರ್ಕ್ಸ್ ಗಳ ಏಕ ವ್ಯಕ್ತಿ ಚಿತ್ರ ಕಲಾ ಪ್ರದರ್ಶನವನ್ನು ಹಾಸನದ ಒಡನಾಡಿ ಚಿತ ಕಲಾ ಬಳಗದಿಂದ ವಿಶ್ವ ಪರಿಸರ ದಿನದ ಪ್ರಯುಕ್ತ ದಿನಾಂಕ 22-6-2025ರ ಭಾನುವಾರ ಬೆ 11ಕ್ಕೆ ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಿದೆ.

ಹಾಸನ ಕ್ಷೇತ್ರದ ಶಾಸಕರು  ಹೆಚ್ ಪಿ ಸ್ವರೂಪ್ ಕಾರ್ಯಕ್ರಮ ಉದ್ಘಾಟಿಸುವರು. ಅಂತಾರಾಷ್ಟ್ರೀಯ ಚಿತ್ರ ಕಲಾವಿದರಾದ ಕೆ.ಟಿ.ಶಿವಪ್ರಸಾದ್ ವಿಶ್ವ ಪರಿಸರ ದಿನದಂದು ವಿವಿಧ ವಯೋಮಾನದ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸುವರು.

ಸಾಹಿತಿಗಳು ವಿಮರ್ಶಕರು  ಗೊರೂರು ಅನಂತರಾಜು, ಹಿರಿಯ ವ್ಯಂಗ್ಯ ಚಿತ್ರಕಾರರು  ಶಿವರಾಮ್, ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಹೆಚ್. ಪಿ. ತಾರಾನಾಥ್, ಶ್ರೀಮತಿ ಭಾಗ್ಯ,, ಪ್ರಾಂಶುಪಾಲರು, ಶ್ರೀಮತಿ ಸುವರ್ಣ ಕೆ.ಟಿ ಶಿವಪ್ರಸಾದ್, ಕಾದಂಬರಿಗಾರ್ತಿ, ಹಾಸನ ಮತ್ತು ಶ್ರೀಮತಿ ಸುನಂದ ಕೃಷ್ಣ, ಜನಪದ ಗಾಯಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group