ಸಚಿವರಿಗೆ ತಡವಾಗಿ ಜ್ಞಾನೋದಯ : ರಸ್ತೆ ಹಾಳಾದ ಮೇಲೆ ಮರಳು ಸಾಗಾಣಿಕೆಗೆ ಕಡಿವಾಣ

Must Read

ಬೀದರ – ಒಂದು ಗಾದೆ ಮಾತು ಇದೆ ಗಂಡ ಸತ್ತ ಮೇಲೆ ಹೆಂಡತಿಗೆ ಬುದ್ದಿ ಬಂತಂತೆ ! ಇನ್ನೊಂದು ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ ! ಅದೇ ರೀತಿಯಾಗಿದೆ ಈಗ ಬೀದರನ ರಸ್ತೆಗಳ ಸ್ಥಿತಿ.

ನಿಯಮ ಮೀರಿ ಅತಿಭಾರ ವಾದ ಮರಳು ಸಾಗಿಸುವ ವಾಹನ ಗಳಿಂದ ಜಿಲ್ಲೆಯ ಕಮಲನಗರ ಮತ್ತು ಔರಾದ ತಾಲೂಕಿನ ಪ್ರಮುಖ ರಸ್ತೆಗಳು ಹಾಳಾದ ಮೇಲೆ ಸಚಿವ ಪ್ರಭು ಚವ್ಹಾಣ ಅವರಿಗೆ ಜ್ಞಾನೋದಯ ವಾಗಿದೆ. ತಕ್ಷಣವೇ ಮರಳು ಗಾಡಿಗಳು ಬಂದರೆ ಹಿಡಿದು ಒಳಗೆ ಹಾಕಿ ಎಂಬ ಫರ್ಮಾನು ಡಿವೈಎಸ್ ಪಿ ಯವರಿಗೆ ಹೊರಡಿಸಿದ್ದಾರೆ !

ಪಶು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ ಅವರು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾಗಿ ದ್ದಾಗ ಯಾದಗಿರಿ ಜಿಲ್ಲೆಯ ಶಹಾಪೂರ ದಿಂದ ಬೀದರ ಜಿಲ್ಲೆಯ ಪ್ರಮುಖ ರಸ್ತೆಗಳಿಂದ ಹಾಗು ಔರಾದ ನಿಂದ ಮಹಾರಾಷ್ಟ್ರ ರಾಜ್ಯಕ್ಕೆ ರಾಜಾರೋಷ ವಾಗಿ ನಲವತ್ತ ರಿಂದು ಐವತ್ತು ಟನ್ ಭಾರದ ಮರಳನ್ನು ಹೊತ್ತ ಟ್ರಕ್ ಗಳು ತಿರುಗುತ್ತವೆ ಇದರಿಂದ ಜಿಲ್ಲೆಯ ರಸ್ತೆಗಳು ಹಾಳಾಗುತ್ತಿವೆ ಎಂದು ಹೇಳಿದರೂ ಆಗ ಕೇರ್ ಮಾಡಿಲ್ಲ ಸಚಿವರು. ಮಾದ್ಯಮದವರು ಕೂಡ ಅನೆಕ ಬಾರಿ ಪ್ರಚಾರ ಮಾಡಿದರೂ ಯಾವದೇ ಕ್ರಮಕ್ಕೆ ಮುಂದಾಗದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹುದ್ದೆ ಹೊದನಂತರ ಎಚ್ಚರವಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಇದ್ದಕ್ಕಿದ್ದಂತೆ ಸಚಿವರಿಗೆ ತಮ್ಮ ಕ್ಷೇತ್ರದ ರಸ್ತೆಗಳ ಮೇಲೆ ಪ್ರೀತಿ ಉಕ್ಕಿ ಹರಿಯುವದನ್ನು ನೋಡಿದರೆ….. ನಮ್ಮ ಗ್ರಾಮೀಣ ಭಾಗದ ಜನರು ಆಡಿಕೊಳ್ಳುವ ನುಡಿ….ಗಂಡ ಸತ್ತ ಮೇಲೆ ಹೆಂಡತಿಗೆ ಬುದ್ದಿ ಬಂತು ಎಂಬುದು ಜ್ಞಾಪಕಕ್ಕೆ ಬರುತದೆ ಅದೇ ರೀತಿ ಎಲ್ಲಾ ರಸ್ತೆಗಳು ಹಾಳಾಗಿ ಹೋದನಂತರ ಸಚಿವರಿಗೆ ಜ್ಞಾನೋದಯವಾದಂತಿದೆ ಎಂದು ವ್ಯಂಗ್ಯ ಮಾಡುತ್ತಿದ್ದಾರೆ.

ಏಕೆಂದರೆ ಇಷ್ಟು ದಿನಗಳ ವರೆಗೆ ಮರಳು ಸಾಗಾಣಿಕೆ ಮಾಡುವ ವಾಹನಗಳು ಓಡಾಡುವದರಿಂದ ಜಿಲ್ಲೆಯ ಹೆದ್ದಾರಿಗಳು ಹಾಳಾದರು ತುಟಿ ಬಿಚ್ಚದ ಸಚಿವರು ಇಂದು ಕಮಲನಗರ ತಾಲೂಕಿನಲ್ಲಿ ಸಾರ್ವಜನಿಕ ಅಹವಾಲು ಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಸಂಚಾರಿ ನಿಯಮಗಳನ್ನು ಮೀರಿ ಮರಳನ್ನು ಸಾಗಿಸುವ ವಾಹನಗಳನ್ನು ಸೀಜ್ ಮಾಡುವಂತೆ ಭಾಲ್ಕಿ ಡಿವೈಎಸ್ಪಿಯವರಿಗೆ ಖಡಕ ವಾರ್ನಿಂಗ್ ಮಾಡಿದರು.

ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಕೂಡಲೆ ಕ್ರಮಕ್ಕೆ ಮುಂದಾಗುವಂತೆ ತಹಸಿಲ್ದಾರ ರಿಗೆ ಆದೇಶ ನೀಡಿದರು. ಹಾಗೆ ನೋಡಿದರೆ ಅಧಿಕಾರ ಕೈಯಲ್ಲಿ ಇದ್ದಾಗ ತನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನರನ್ನು ಮರೆತು ಈಗ ಅಧಿಕಾರಕ್ಕೆ ಕುತ್ತು ಬರುವ ಸಮಯ ಬರುತ್ತಿದ್ದಂತೆಯೇ ಮೊಸಳೆ ಕಣ್ಣೀರು ಸುರಿಸುವವರನ್ನು ಏನೆಂದು ಹೇಳಬೇಕೆಂಬುದು ಜಿಲ್ಲೆಯ ಜನರಿಗೆ ಕಾಡುತ್ತಿರುವ ಪ್ರಶ್ನೆಯಾಗಿದೆ.

ಇನ್ನು ಮುಂದಾದರು ನಮ್ಮ ಜಿಲ್ಲೆಯ ಜನರು ಇಂತಹ ಅವಕಾಶವಾದಿಗಳಿಗೆ ಮುಂಬರುವ ಚುನಾವಣೆಯಲ್ಲಿ ಬುದ್ದಿ ಕಲಿಸುವರೋ ಅಥವಾ ಅವರು ಹಾಕುವ ಮೊಸಳೆ ಕಣ್ಣೀರಿಗೆ ಮತ್ತು ಮತ ಹಾಕುವ ಮತೀಯ ಮಾಯಾಜಾಲಕ್ಕೆ ಸಿಲುಕಿ ತಮ್ಮ ವಿನಾಶಕ್ಕೆ ತಾವೇ ಕಾರಣೀಕರ್ತರಾಗುವರೋ ಕಾದು ನೋಡ ಬೇಕು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ,ಬೀದರ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group