ಭಾವಬಂಧ ಕಥಾಸಂಕಲನ ಲೋಕಾರ್ಪಣೆ

Must Read

ವಿದೇಶದಲ್ಲಿದ್ದರೂ ಕನ್ನಡ ಸಾಹಿತ್ಯದ ಕೃಷಿ ಶ್ರೀಮಂತಗೊಳಿಸಿದ ಸೋಮಶೇಖರ ಪಾಟೀಲ- ಡಾ. ವನಿತಾ ಮೆಟಗುಡ್ಡ

ಬೆಳಗಾವಿ: ವಿದೇಶದಲ್ಲಿ ನೆಲಸಿದ್ದ ಲಿಂಗೈಕ್ಯ ಸೋಮಶೇಖರ ಆರ್ ಪಾಟೀಲರು ಕಳೆದ ಐದು ದಶಕಗಳ ಹಿಂದೆಯೇ ಕಥೆ, ಕವನ, ಸಾಹಿತ್ಯ ದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ ಕಥೆ, ಕವನಗಳನ್ನು ರಚಿಸಿ ಕನ್ನಡ ಸಾಹಿತ್ಯದ ಕೃಷಿಯಲ್ಲಿ ನಿರಂತರವಾಗಿ ತೊಡಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು ನಿಜಕ್ಕೂ ನಮ್ಮ ಕನ್ನಡ ನಾಡಿಗೆ ಹೆಮ್ಮೆಯ ಸಂಗತಿ ಎಂದು ನಗರದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ವನಿತಾ ಮೆಟಗುಡ್ಡ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಘಟಕದ ಆಶ್ರಯದಲ್ಲಿ ನೆಹರೂ ನಗರದಲ್ಲಿನ ಕನ್ನಡ ಭವನದಲ್ಲಿ ಜರುಗಿದ ಆಸ್ಟ್ರೇಲಿಯಾದ ನಿವಾಸಿಯಾಗಿದ್ದ ಲಿಂಗೈಕ್ಯ ಸೋಮಶೇಖರ ಆರ್ ಪಾಟೀಲ ರವರ “ಭಾವ ಬಂಧ” ಕಥಾ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಖ್ಯಾತ ಹಿರಿಯ ಸಾಹಿತಿ ಶ್ರೀಮತಿ ನೀಲಗಂಗಾ ಚರಂತಿಮಠ “ಭಾವ ಬಂಧ” ಕಥಾ ಸಂಕಲನದ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ, ಕಥಾ ಸಾಹಿತ್ಯವೆಂಬುದು ಸಾಹಿತ್ಯ ಪ್ರಕಾರಗಳಲ್ಲಿಯೇ ಅತೀ ಆಪ್ಯಾಯವಾದುದು. ಕುತೂಹಲವೇ ಅದರ ಜೀವಾಳ. ದೇಶ, ಕಾಲ. ಪರಿಸರ, ಸುಖ ದು:ಖದ ಕುಲಮೆಯಲ್ಲಿ ಬೆಳೆದು ಅಂತ್ಯದಲ್ಲಿ ತನ್ನೆಲ್ಲ ಜಾಣ್ಮೆಯನ್ನು ತೋರುವ ಗತ್ತುಗಾರಿಕೆಯೇ ಕಥೆ. ಲಿಂಗೈಕ್ಯ ಸೋಮಶೇಖರ ಪಾಟೀಲ ಅವರು ತಮ್ಮ ಭಾವ ಮೋಡದಲ್ಲಿ ಬಂಧಿಯಾದ ಹಲವಾರು ಕಥೆಗಳನ್ನು ಈ “ಭಾವ ಬಂಧ” ಪುಸ್ತಕದಲ್ಲಿ ಓದುಗರಿಗೆ ಆಸಕ್ತಿ ಮೂಡುವ ಹಾಗೇ ಹಂಚಿಕೊಂಡಿದ್ದಾರೆಂದು ಹೇಳಿದರು.

ಭಾವ ಬಂಧ ಕಥಾ ಸಂಕಲನದ ಪ್ರಕಾಶಕಿ ಹಾಗೂ ಲೇಖಕರ ಪತ್ನಿ ಡಾ. ವಿಜಯಾ ಪಾಟೀಲ ಮಾತನಾಡುತ್ತಾ ವಿದೇಶದಲ್ಲಿ ತಮ್ಮ ಕುಟುಂಬ ನೆಲಸಿದ್ದರೂ ಸಹ ಕನ್ನಡ ನೆಲದ ಪ್ರೀತಿ ಆಸಕ್ತಿ ಒಂದಿಷ್ಟೂ ಕಡಿಮೆ ಆಗದ ಹಾಗೇ ಸಾಹಿತ್ಯದ ಮೂಲಕ ನಂಟನ್ನು ಬೆಸೆದು ಸಾಹಿತ್ಯಿಕವಾಗಿ ಕನ್ನಡಿಗರ ಮನ ತಟ್ಟುವ ಕಾರ್ಯವನ್ನು ಲಿಂಗೈಕ್ಯ ಸೋಮಶೇಖರ ಪಾಟೀಲರು ಮಾಡಿದ್ದು ಕೃತಿ ಲೋಕಾರ್ಪಣೆ ಮಾಡುವಲ್ಲಿ ಸಹಾಯ ಮಾಡಿದ ಕನ್ನಡ ಸಾಹಿತ್ಯ ಪರಿಷತ್ ಮತ್ತು ಇನ್ನಿತರ ಸಾಹಿತಿಗಳ ನೆರವನ್ನು ನೆನಪಿಸಿಕೊಂಡು ಗದ್ಗತಿತರಾದರು.

ಹಿರಿಯ ಸಾಹಿತಿ ಮತ್ತು ನಿವೃತ್ತ ಪ್ರಾದ್ಯಾಪಕಿ ಶ್ರೀಮತಿ ಗುರುದೇವಿ ಹುಲ್ಲೆಪ್ಪನವರಮಠ ಕೃತಿಯನ್ನು ಪರಿಚಯಿಸಿ ಕೃತಿಯಲ್ಲಿರುವ ಕಥೆಗಳನ್ನು ವಿಮರ್ಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ವಿದೆಶದಲ್ಲಿ ನೆಲಸಿ ಸಾಹಿತ್ಯದ ಕೃಷಿ ಮಾಡಿದ್ದನ್ನು ಕನ್ನಡ ಸಾಹಿತ್ಯ ಪರಿಷತ್ ಸಂಸ್ಥೆಯ ಮೂಲಕ ಲೋಕಾರ್ಪಣೆ ಮಾಡಿರುವುದು ಸಾಹಿತ್ಯ ಪರಿಷತ್ ನ ನಾಡು ನುಡಿ ಸಾಹಿತ್ಯ ಮೇಲಿರುವ ಪ್ರೀತಿ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಕನ್ನಡ ಭಾಷೆಗೆ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದಿನ ಇತಿಹಾಸವಿದೆ. ಕನ್ನಡ ಇನ್ನೂ ಹೆಚ್ಚು ಶ್ರೀಮಂತಗೊಳ್ಳಬೇಕಾದರೆ ಇವತ್ತಿನ ಪೀಳಿಗೆ ಇಂತಹ ಸಾಹಿತ್ಯದ ಕೃಷಿಯಲ್ಲಿ ತೊಡಗಿಕೊಳ್ಳಬೇಕಿರುವುದು ಅತೀ ಅವಶ್ಯವಿದೆ ಎಂದರಲ್ಲದೇ ಮುಂಬರುವ ದಿನಗಳಲ್ಲಿ ಸಾಹಿತ್ಯ ಪರಿಷತ್ ಮೂಲಕ ಸಾಹಿತ್ಯಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.

ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಯಾನಂದ ಧನವಂತ, ಹಿರಿಯ ವೈದ್ಯ ಡಾ. ಬಸವರಾಜ ಮೆಟಗುಡ್ಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷ ಮೋಹನ ಬಸನಗೌಡ ಪಾಟೀಲ, ಕಸಾಪ ಬೆಳಗಾವಿ ತಾಲೂಕಾ ಅಧ್ಯಕ್ಷ ಡಾ.ಸುರೆಶ ಹಂಜಿ, ಮುರುಗೇಶ ಶಿವಪೂಜಿಮಠ, ಸಾಹಿತಿಗಳಾದ ಜ್ಯೋತಿ ಬಾದಾಮಿ, ಹೇಮಾ ಸೋನೊಳ್ಳಿ, ಸುಮಾ ಪಾಟೀಲ, ರಾಜೇಶ್ವರಿ ಹಿರೇಮಠ, ನಂದಾ ಮಹಾಂತಶೆಟ್ಟಿ, ಸುಧಾ ಪಾಟೀಲ, ಗ್ಯಾತ ಗಾಯಕ ಶ್ರೀರಂಗ ಜೋಶಿ, ಮಲ್ಲಿಕಾರ್ಜುನ ಕೋಳಿ, ಈರಣ್ಣ ಜ್ಯೋತಿ, ಕಿರಣ ಸಾವಂತನವರ, ಆಕಾಶ್ ಥಬಾಜ, ಅಮೃತ ಚರಂತಿಮಠ, ಸುರೇಶ ಮರಲಿಂಗಣ್ಣವರ ಒಳಗೊಂಡಂತೆ ಅನೇಕರು ಉಪಸ್ಥಿತರಿದ್ದರು.

ಗಾಯಕ ಆನಂದ ಚಿಟಗಿ ಸ್ವಾಗತಗೀತೆ ಹಾಡಿದರು. ನಂದಿತಾ ಮಾಸ್ತಿಹೊಳಿಮಠ ಮತ್ತು ಪ್ರತಿಭಾ ಕಳ್ಳಿಮಠ ಭಾವಗೀತೆಗಳನ್ನು ಪ್ರಸ್ತುತ ಪಡಿಸಿದರು.

ಮೊದಲಿಗೆ ಎಂ.ವೈ ಮೆಣಶಿನಕಾಯಿ ಸ್ವಾಗತಿಸಿದರು. ಶಿವಾನಂದ ಕಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಗೆ ರಮೇಶ ಬಾಗೇವಾಡಿ ವಂದಿಸಿದರು.


ಮಾಹಿತಿ ವರದಿ: ಆಕಾಶ್ ಅರವಿಂದ ಥಬಾಜ

ಕಛೇರಿ: ರೇಡಿಯಾಲಾಜಿ ಇಮೇಜಿಂಗ್ ಆಫೀಸರ್, ಸಮುದಾಯ ಆರೋಗ್ಯ ಕೇಂದ್ರ, ಹಿರೇಬಾಗೆವಾಡಿ ತಾ:ಜಿ: ಬೆಳಗಾವಿ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group