ಸಿಂದಗಿ; ಅಂಜಲಿ ಅಂಬಿಗೇರ ಅವರ ಹತ್ಯೆಯಾಗಿ ಎರಡು ದಿನಗಳಾದರೂ ಹಂತಕನನ್ನು ಬಂಧಿಸಲು ವಿಫಲರಾಗಿರುವದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿ ಹೋಗಿರುವದು ಎತ್ತಿ ತೋರಿಸುತ್ತಿದೆ ಎಂದು ಬಿಜೆಪಿ ಮುಖಂಡ ಡಾ. ಗೌತಮ ಚೌಧರಿ ಹೇಳಿದರು
ಪತ್ರಿಕಾ ಹೇಳಿಕೆ ನೀಡಿರುವ ಅವರು, ಪದೆ ಪದೆ ಇಂತಹ ಪ್ರಕರಣಗಳು ದಾಖಲಾಗುತ್ತಿದ್ದು ರಾಜ್ಯ ಸರಕಾರ ಕಠಿಣವಾದ ಕ್ರಮ ತೆಗೆದುಕೊಳ್ಳದೆ ಇರುವದು ಖಂಡನೀಯ. ಅಂಜಲಿ ಅಂಬಿಗೇರ ಅವರ ಕುಟುಂಬದ ಆಸರೆಯಾಗಿದ್ದರು ಅವರ ಹತ್ಯೆಯಿಂದ ಅವರ ಕುಟುಂಬ ಬೀದಿಪಾಲಾಗಿದ್ದು ಈ ಕೂಡಲೇ ರಾಜ್ಯ ಸರಕಾರ ಅವರ ಕುಟುಂಬಕ್ಕೆ ಸೂಕ್ತವಾದ ಪರಿಹಾರವನ್ನೊದಗಿಸಿ ಹಂತಕನನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕೆಂದು ಅವರು ಆಗ್ರಹಿಸಿದರು.