ಸಿಂದಗಿ; ಪ್ರೀತಿಸಲು ಒಪ್ಪದ ಯುವತಿ ಅಂಜಲಿ ಅಂಬಿಗೆರ ಇವಳಿಗೆ ಚುಚ್ಚಿ ಕೊಲೆ ಮಾಡಿದ ಆರೋಪಿಗೆ ಪೊಲೀಸ್ ಎನ್ಕೌಂಟರ್ ಮಾಡಿ ಯುವತಿ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ವಿಜಯಪೂರ ಜಿಲ್ಲಾ ತಳವಾರ ಪರಿವಾರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಜಯಪೂರ ಜಿಲ್ಲಾ ತಳವಾರ ಪರಿವಾರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಶಿವಾಜಿ ರೇ, ಮೇಟಗಾರ ಮಾತನಾಡಿ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಈ ಹಿಂದೆ ನೇಹಾ ಹಿರೇಮಠ ಪ್ರೀತಿಸಲು ನಿರಾಕರಿಸಿದ್ದಕ್ಕೆ ಪಾಗಲ ಪ್ರೇಮಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಮಾಸುವ ಮುನ್ನವೆ ಮತ್ತೊಂದು ಘಟನೆ ಪೀರಾಪೂರದಲ್ಲಿ ಮೇ. 15 ರಂದು ಅಂಜಲಿ ಅಂಬಿಗೇರ ಕೊಲೆಯ ಬರ್ಬರ ಕೃತ್ಯವನ್ನು ಬೈಕ ಕಳ್ಳತನದ ಆರೋಪಿ ವಿಶ್ವ ಅಲಿಯಾಸ್ ಗಿರೀಶ ಮಾಡಿದ್ದಾನೆ. ಅಂಜಲಿ ಹಿಂದೆ ಬಿದ್ದಿದ್ದ ಆರೋಪಿ ನೇಹಾ ರೀತಿ ನಿನ್ನನ್ನು ನಾನು ಕೊಲೆ ಮಾಡುತ್ತೇನೆ ಎಂದು ಅಂಜಲಿಗೆ ಹೆದುರಿಸುತ್ತಿದ್ದ ಎನ್ನುವ ವಿಷಯವನ್ನು ತನ್ನ ಅಜ್ಜಿಗೆ ತಿಳಿಸಿದ್ದಾಳೆ ಹಾಗೂ ಹುಬ್ಬಳ್ಳಿಯ ಬೇಂಡಿಗೇರಿಯ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ ಮೊದಲೇ ಗಿರೀಶನನ್ನು ಬಂಧಿಸಿದ್ದರೆ ಈ ಕೃತ್ಯ ನಡೆಯುತ್ತಿರಲಿಲ್ಲ ಇದಕ್ಕೆ ಪೊಲೀಸ ನಿರ್ಲಕ್ಷ್ಯವೆ ಕಾರಣವಾಗಿದೆ. ಕೊಲೆ ಮಾಡಿದ ಆರೋಪಿಗೆ ಪೊಲೀಸರು ಎನ್ ಕೌಂಟರ್ ಮಾಡಬೇಕು ಮೃತ ಅಂಜಲಿ ಕುಟುಂಬಕ್ಕೆ ಸರಕಾರ 50/- ಲಕ್ಷ ಪರಿಹಾರ ನೀಡಬೇಕೆಂದು ಸಮುದಾಯದ ಒಕ್ಕೊರಲಿನ ಆಗ್ರಹವಾಗಿದೆ. ಮತ್ತೆ ಇಂತಹ ಘಟನೆಗಳು ರಾಜ್ಯದಲ್ಲಿ ಮರುಕಳಿಸದಂತೆ ಸರಕಾರ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕು. ಇಲ್ಲದೆ ಹೋದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಹಣಮಂತ ಸುಣಗಾರ, ಗೋಲ್ಲಾಳ ನಿಂ ಬಂಕಲಗಿ, ಬಸವರಾಜ್ ಯರನಾಳ ಮುಖಂಡರಾದ ಪರಶುರಾಮ ಕೋಟಾರಗಸ್ತಿ, ಮಡಿವಾಳಪ್ಪ ನಾಯ್ಕೋಡಿ, ಕಂಟೆಪ್ಪ ಚೋರಗಸ್ತಿ, ಮಾಂತೇಶ ನಾಯ್ಕೋಡಿ, ಮಲ್ಲು ಹೇರಲಾಗಿ, ಸಂತೋಷ ಹರನಾಳ, ಅನಿಲ ಕಡಕೋಳ, ರಾಜು ಮ ನಾಯ್ಕೊಡಿ, ವಿಜಯ ಯಾಳವಾರ ಸೇರಿದಂತೆ ಅನೇಕರಿದ್ದರು.