ಇತ್ತೀಚೆಗೆ ಚಿನ್ನ ಅಥವಾ ಬಂಗಾರದ ದರ ಗಗನವನ್ನೂ ಮೀರಿ ಎತ್ತರಕ್ಕೆ ಹೋಗುತ್ತಿದೆ. ಆದರೂ ಚಿನ್ನ ಖರೀದಿಸುವವರು ಸಾಕಷ್ಟು ಜನರಿದ್ದಾರೆ. ಆದರೆ ಚಿನ್ನ ಖರೀದಿಸುವವರಿಗಿಂತಲೂ ಚಿನ್ನ ಮಾರುವವರು ರಾಕೆಟ್ ವೇಗದಲ್ಲಿ ಶ್ರೀಮಂತರಾಗುತ್ತಿದ್ದಾರೆಂಬುದು ಸುಳ್ಳಲ್ಲ. ಇದಕ್ಕೆ ಕಾರಣ ಚಿನ್ನದಲ್ಲಿ ಅವರು ಮಾಡುವ ಮಿತಿ ಮೀರಿದ ಲಾಭ ಅಥವಾ ಅನೈತಿಕ ಲಾಭ.
ವಾಟ್ಸಪ್ ನಲ್ಲಿ ಒಂದು ಬರಹ ಓಡಾಡುತ್ತಿದೆ ಅದು ಚಿನ್ನ ಖರೀದಿಸುವವರ ಕಣ್ಣು ತೆರೆಸುವಂತಿದೆ. ಅದು ಕಣ್ಣೇನೋ ತೆರೆಸುತ್ತದೆ ಆದರೆ ಮಾರಾಟಗಾರರ ಮೋಸ ನಿಲ್ಲುವುದ್ಯಾವಾಗ ಎಂಬ ಪ್ರಶ್ನೆ ಏಳುತ್ತದೆ. ವಾಟ್ಸಪ್ ನ ಬರಹವನ್ನೊಮ್ಮೆ ನೋಡೋಣ….
ಚಿನ್ನ ತೆಗೆದುಕೊಳ್ಳುವಾಗ ಹೇಗೆ ಮೋಸ ಮಾಡುತ್ತಾರೆ ನೋಡಿ.
ನಮ್ಮ ಲಲಿತಾ, ನಮ್ಮ ಭೀಮಾ, ನಮ್ಮ ಆಭರಣ, ನಮ್ಮ ಜೋಯ್ ಅಲುಕಾಸ್,ಹೇಗೆ ನೋಡುತ್ತಾ ನೋಡುತ್ತಾ ಹೊಸ ಬಂಗಾರದ ಅಂಗಡಿ ತೆಗೆಯುತ್ತಾರೆ ಅಂದರೆ ಈ ವಿಷಯ ಪೂರ್ತಿ ಓದಿ ಹಾಗೆ ಆದಷ್ಟು ಜನರಿಗೆ ಹಾಗೂ ಸರ್ಕಾರಕ್ಕೆ ಈ ವಿಷಯ ತಲುಪುವ ಹಾಗಾಗಲಿ.
ಕೆಲವು ಜಾಹೀರಾತುಗಳು ವೇಸ್ಟೇಜ್ ಇಷ್ಟು ಪರ್ಸೆಂಟೇಜ್ ಎಂದು ಹೇಳುತ್ತವೆ ಮತ್ತು ಯಾವುದೇ ಮೇಕಿಂಗ್ ಚಾರ್ಜ್‌ಗಳು ಇಲ್ಲ, ಅದಿಲ್ಲ ಇದಿಲ್ಲ….ಇತ್ಯಾದಿಗಳಿಲ್ಲ, ಆದರೆ ಸತ್ಯ ಏನು?
ಒಂದು ಸವರನ್ ಅಂದರೆ ಸುಮಾರು ಎಂಟು ಗ್ರಾಮ್ ಚಿನ್ನದ ಸರಕ್ಕೆ 1.5 ಗ್ರಾಂ ತಾಮ್ರವನ್ನು ಸೇರಿಸಿ ಮಾತ್ರ ಆಭರಣಗಳನ್ನು ಮಾಡಬಹುದು …!
ಆದರೆ 8 ಗ್ರಾಂ ಚಿನ್ನದ ಸರವನ್ನು ಮಾಡಲು 1.5 ಗ್ರಾಂ ತಾಮ್ರ ಮತ್ತು 6.5 ಗ್ರಾಂ ಚಿನ್ನವನ್ನು ಸೇರಿಸಿ ಚಿನ್ನದ ಆಭರಣಗಳನ್ನು ತಯಾರಿಸಲಾಗುತ್ತದೆ. ಆದರೆ ಸಾಮಾನ್ಯ ಮನುಷ್ಯ ಚಿನ್ನವನ್ನು ಖರೀದಿಸುವಾಗ 6.5 ಚಿನ್ನ + 1.5 ತಾಮ್ರವನ್ನು ಸೇರಿಸಿ 8 ಗ್ರಾಂ ಚಿನ್ನವನ್ನು ಬಿಲ್‌ನಲ್ಲಿ ಹಣ ನೀಡುತ್ತಾನೆ. ಅದಕ್ಕೆ ಪೂರಕವಾಗಿ ತಾಮ್ರವನ್ನು ಚಿನ್ನದ ಬೆಲೆಗೆ ಮಾರುತ್ತಿದ್ದಾರೆ! 1.5 ಗ್ರಾಂ ಚಿನ್ನವನ್ನು ವೇಸ್ಟೇಜ್ ಎಂದು ತೋರಿಸಿ ನಿಜವಾಗಿ ತಾಮ್ರವನ್ನು ಸೇರಿಸಿ ! ಇದರಲ್ಲಿ ನನ್ನ ಪ್ರಕಾರ 6.5 ಚಿನ್ನ + 1.5 ತಾಮ್ರ (ಚಿನ್ನದಂತೆ) + ಹಾನಿ ತಾಮ್ರ 1.5 = 9.5 ಗ್ರಾಂ. ಆದ್ದರಿಂದ 1 ಸವರನ್ ಆಭರಣವನ್ನು ಖರೀದಿಸುವವರು 6.5 ಗ್ರಾಂ ಚಿನ್ನವನ್ನು ಮಾತ್ರವಲ್ಲದೆ 3 ಗ್ರಾಂ ತಾಮ್ರವನ್ನು ಸಹ ಚಿನ್ನವಾಗಿ ಸೇರಿಸಿ ಚಿನ್ನದ ಬೆಲೆಯನ್ನು ನೀಡುತ್ತಾರೆ !
ಆದ್ದರಿಂದ ನಾವು 1 ಸವರನ್ 8 ಗ್ರಾಂ ಚಿನ್ನಾಭರಣಕ್ಕೆ 9.5 ಗ್ರಾಂ ಚಿನ್ನದ ಬೆಲೆಯನ್ನು ಪಾವತಿಸುತ್ತೇವೆ. ಅವರು ಯಾರಿಗೆ ಮೋಸ ಮಾಡುತ್ತಿದ್ದಾರೆ! ಬಡವರನ್ನು ವಂಚಿಸಿ ಪರಾವಲಂಬಿಗಳಂತೆ ಬಡವರ ರಕ್ತ ಹೀರುತ್ತಿದ್ದಾರೆ…! ಹೊಸ ಆಭರಣ ಮಳಿಗೆ ತೆರೆದು ಕೆಲವೇ ವರ್ಷಗಳಲ್ಲಿ ಬಹು ಮಹಡಿ ಕಟ್ಟಡ, ಮಹಡಿಗಳನ್ನು ಖರೀದಿಸುತ್ತಾರೆ, ಮೈ ತುಂಬಾ ಚಿನ್ನ ಧರಿಸುತ್ತಾರೆ, ದುಬಾರಿ ಕಾರಿನಲ್ಲಿ ತಿರುಗುತ್ತಾರೆ. ಅವರಿಗೆ ಹಣ ಹೇಗೆ ಬಂತು?
ಇಂದು ಒಂದು ಗ್ರಾಂ ಚಿನ್ನದ ಬೆಲೆ ಎಷ್ಟು? ಪ್ರತಿ ಸವರನ್‌ನಿಗೆ 8 ಗ್ರಾಂ ಚಿನ್ನವಾಗಿ ಸಂಗ್ರಹಿಸುತ್ತಿರುವಾಗ ಒಂದು ಗ್ರಾಂ ತಾಮ್ರದ ಬೆಲೆ ಎಷ್ಟು? ಈ ಒಂದು ಉದಾಹರಣೆಯನ್ನು ಪರಿಶೀಲಿಸಿ…!
1 ಗ್ರಾಂ ಚಿನ್ನ ರೂ. 4760 / -( ಉದಾಹರಣೆ)
8 ಗ್ರಾಂ ಚಿನ್ನ ರೂ. 38,080 / –
1 ಗ್ರಾಂ ತಾಮ್ರ – ರೂ. 4.80
1.5 ಗ್ರಾಂ ತಾಮ್ರ – ರೂ. 7.20 ಅಥವಾ ರೂ. 7 .
6.5 ಗ್ರಾಂ ಚಿನ್ನ – 30940 / –
6.5 ಗ್ರಾಂ ಚಿನ್ನ + 1.5 ಗ್ರಾಂ ತಾಮ್ರ – ರೂ. 30940 + ರೂ. 7.20 = 30947.2 /
1 ಸವರನ್ ಚಿನ್ನದಲ್ಲಿ – ರೂ. 38080 – 30940 ಲಾಭ = ರೂ. 7140
ವೇಸ್ಟೇಜ್ 1.5 ಗ್ರಾಂ = ರೂ. 7140 /
ಒಟ್ಟು ಲಾಭ ಪ್ರತಿ 1 ಸವರನ್ ಗೆ 14280 !
ಇದೊಂದು ಲೆಕ್ಕಾಚಾರವಾಗಿದ್ದು ಇದನ್ನು ಚಿನ್ನದ ಈಗಿನ ದರಕ್ಕೆ ಹೋಲಿಸಿಕೊಳ್ಳಬಹುದು. ಆದರೆ ಬಡವರ್ಗ ಹಾಗೂ ಮಧ್ಯಮ ವರ್ಗದ ಜನತೆಯ ಶೋಷಣೆ ಮಾಡುತ್ತಿರುವ ಈ ಚಿನ್ನದ ವ್ಯಾಪಾರಿಗಳ ವಿರುದ್ಧ ಹೋರಾಟವಾಗಬೇಕೆಂಬುದು ಇಂದಿನ ಅಗತ್ಯ.
ಈ ವಾಟ್ಸಪ್ ಬರಹದಲ್ಲಿ ಸತ್ಯವೇ ಇದೆ ಎಂದಾದಲ್ಲಿ ಇದರ ವಿರುದ್ಧ ಸರ್ಕಾರ ಜಾಗೃತವಾಗಬೇಕು, ಗ್ರಾಹಕರು ಜಾಗೃತರಾಗಬೇಕು. ಈ ಮೇಲಿನ ಬರಹದ ತಥ್ಯವನ್ನು ಗ್ರಾಹಕರ ವೇದಿಕೆ ಹಾಗೂ ಸರ್ಕಾರದ ಗಮನಕ್ಕೆ ತಂದು ನಿಜ ಸಂಗತಿಯನ್ನು ಜನರಿಗೆ ತಿಳಿಸುವ ಕಾರ್ಯವಾಗಬೇಕಾಗಿದೆ.
ದಿನೇ ದಿನೇ ಗಗನಕ್ಕೆ ಏರುತ್ತಿರುವ ಚಿನ್ನದ ದರ ಕಡಿಮೆಯಾಗಿ ಮಧ್ಯಮ ವರ್ಗ ಹಾಗೂ ಬಡಜನರ ಕೈಗೆಟಕುವಂತಾಗಬೇಕಾಗಿದೆ. ಈ ನಿಟ್ಟಿನಲ್ಲಿ ಜನತೆ, ಸಂಘಟನೆಗಳು ಹೋರಾಟಕ್ಕೆ ಇಳಿಯಬೇಕಾಗಿದೆ.