ಖಾನಟ್ಟಿ ; ಮುನ್ನಡೆದ ಅಕ್ಷರ ಬಂಡಿ

0
209
 ಮೂಡಲಗಿ – -ತಾಲೂಕಿನ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾನಟ್ಟಿಯಲ್ಲಿ ಸನ್ 2024-25 ರ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು  ಅಕ್ಷರ ಬಂಡಿ ಹೂಡಿ ಘೋಷ ವಾಕ್ಯಗಳು, ಅಕ್ಷರ ಮಾಲೆಗಳು, ತಳಿರು ತೋರಣಗಳಿಂದ ಶೃಂಗರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿಕೊಂಡು ಮಕ್ಕಳನ್ನು ಶಾಲೆಗೆ ಕರೆತರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ ಇಒ  ನವೀನಪ್ರಸಾದ ಕಟ್ಟಿಮನಿ, ಬಿಇಒ  ಅಜಿತ್ ಮನ್ನಿಕೇರಿ,  ತಾಲೂಕು ಪಂಚಾಯತ ಎಡಿ ಸಂಗಮೇಶ ರೊಡ್ಡಣ್ಣವರ, ಖಾನಟ್ಟಿ ಗ್ರಾಮದ ಪಿಡಿಒ ಹಣಮಂತ ಬಸಳಿಗುಂದಿ,  ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ  ರಾಮಪ್ಪ ಕುಂದರಗಿ, ಸದಸ್ಯರಾದ  ಶ್ರೀಶೈಲ ತುಪ್ಪದ, ಪುಂಡಲೀಕ ಕರಗಣ್ಣಿ  ಶಾಲೆಯ ಪ್ರಧಾನ ಗುರುಗಳಾದ  ಚಂದ್ರಕಾಂತ ಕೊಡತೆ ಹಾಗೂ ಸರ್ವ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.
ಇಒ, ಬಿಇಒ ಹಾಗೂ ಇನ್ನಳಿದವರು ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಿ  ಸಿಹಿ ಹಂಚುವುದರ ಮೂಲಕ ಪ್ರಸಕ್ತ ವರ್ಷ ಶೈಕ್ಷಣಿಕ ಕಲಿಕೆಗೆ ಚಾಲನೆ ನೀಡಿದರು.