- Advertisement -
ಮೂಡಲಗಿ: ಬರ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮೂಡಲಗಿ ಗ್ರೇಡ್-2 ತಹಶೀಲ್ದಾರ ಶಿವಾನಂದ ಬಬಲಿ ಅವರಿಗೆ ತಾಲೂಕಿನ ಅವರಾದಿ ಗ್ರಾಮಸ್ಥರು ಶನಿವಾರ ಮನವಿ ಸಲ್ಲಿಸಿದರು.
ಅವರಾದಿ ಗ್ರಾಮದ ವ್ಯಾಪ್ತಿಯಲ್ಲಿ ಸುಮರು 3000 ಎಕರೆ ಜಮಿನು ಇದ್ದು, ಇಲ್ಲಿಯ ರೈತರಿಗೆ ಶೇ. 1 ಸಹ ರೈತರಿಗೆ ಬರ ಪರಿಹಾರದ ಹಣ ತಲುಪಿಲ್ಲ, ತಾಲೂಕಿನಲ್ಲಿ ಮಳೆಯಾಗದೇ ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ಬಂದಿದ್ದು. ಕಾರಣ ಕೂಡಲೇ ಅವರಾದಿ ರೈತರಿಗೆ ಬರ ಪರಿಹಾರದ ಹಣ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಶೈಲ ಪೂಜೇರಿ, ಗಂಗಾಧರ ಹಿರೇಮಠ, ಸಿದ್ದಯ್ಯಾ ಮಠಪತಿ, ಸೈದುಸಾಬ ಬಾಗವಾನ, ಶಿವಪ್ಪ ಪೂಜೇರಿ, ಬಸಪ್ಪ ಹುನ್ನೂರ, ಚನಬಸು ಕುಳೋಳಿ ಮತ್ತಿತರರು ಉಪಸ್ಥಿತರಿದ್ದರು.