spot_img
spot_img

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಅತಿಥಿ ಉಪನ್ಯಾಸಕರಿಂದ ಆಯನೂರ ಮಂಜುನಾಥರಿಗೆ ಬೆಂಬಲ-ಸಂಗ್ರಜಿಕೊಪ್ಪ

Must Read

- Advertisement -

ಮೂಡಲಗಿ: ನೈರುತ್ಯ ಪದವೀಧರ ಕ್ಷೇತ್ರ (ಶಿವಮೊಗ್ಗ) ದಿಂದ ಸ್ಪರ್ಧಿಸಿರುವ ಹಿರಿಯ ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರ ಮಂಜುನಾಥ ಅವರಿಗೆ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಸಂಘಟನೆಯಿಂದ ಸಂಪೂರ್ಣ ಬೆಂಬಲ ಘೋಷಿಸುತ್ತಿದ್ದೇವೆ ಎಂದು ಬೆಳಗಾವಿ ಜಿಲ್ಲಾ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಿಂಗಪ್ಪಾ ಸಂಗ್ರಜಿಕೊಪ್ಪ ಹೇಳಿದರು.

ಶನಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಯಾವುದೇ ರಾಜಕೀಯ ಪಕ್ಷಕ್ಕೆ ಅಥವಾ ರಾಜಕೀಯ ವಿಚಾರಕ್ಕೆ ಸಂಬಂದಿಸಿದ್ದು ಅಲ್ಲ. ಇದು ಕೇವಲ ಅತಿಥಿ ಉಪನ್ಯಾಸಕರಿಗೆ ಸಂಬಂಧಪಟ್ಟದಲ್ಲ, ಆಯನೂರ ಮಂಜುನಾಥ ಅವರು ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರು ಪಾಠ ಭೋಧನೆ ಇಲ್ಲದೆ ಸಂಕಷ್ಟದ ಜೀವನದ ಎದುರಿಸುತ್ತಿದ್ದಾಗ ಆಗಿನ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಸದನದ ಬಾವಿಗಿಳಿದು ಆಡಳಿತ ಪಕ್ಷದ ಎದುರು ಧ್ವನಿ ಎತ್ತಿ 5 ತಿಂಗಳ ಗೌರವಧನ ಲಭಿಸುವಂತೆ ಮಾಡಿದ್ದಾರೆ. ಜೊತೆಗೆ ಮೊಟ್ಟ ಮೊದಲ ಬಾರಿಗೆ ಅತಿಥಿ ಉಪನ್ಯಾಸಕರಿಗೆ ಆನ್ ಲೈನ್ ತರಗತಿ ತೆಗೆದುಕೊಳ್ಳಲು ಅನುವು ಮಾಡಿಕೊಟ್ಟು ನಮ್ಮ ಬದುಕಿಗೆ ಆಸರೆಯಾಗಿದ್ದಾರೆ ಎಂದರು.

ಅಂದಿನ ಉನ್ನತ ಶಿಕ್ಷಣ ಸಚಿವರಾದ ಸಿ.ಎನ್.ಅಶ್ವಥನಾರಾಯಣ ಅವರ ಜೊತೆ ಬೆಂಗಳೂರಿನಲ್ಲಿ ಅತಿಥಿ ಉಪನ್ಯಾಸಕರ ಜೊತೆಗೆ ಸುಮಾರು 13 ಸಭೆಗಳನ್ನು ಮಾಡಿದ್ದಾರೆ. ಮೂರು ವರ್ಷದ ಸರಕಾರದ ಸಂದರ್ಭದಲ್ಲಿ ಅನ್ನ ಕೊಡುವ ಕೆಲಸ ಮಾಡಿದ್ದಾರೆ ಅದನ್ನು ನಾವು ಋಣ ಎಂದು ತಿಳಿದುಕೊಳ್ಳುತ್ತೇವೆ ಮತ್ತೆ ಈ ವರ್ಷವಿದ್ದ ಅತಿಥಿ ಉಪನ್ಯಾಸಕರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇರುತ್ತೇವೋ ಇಲ್ಲವೋ ಗೊತ್ತಿಲ್ಲ ಯಾಕೆಂದರೆ ಸರಕಾರ ಕಾಲ ಕಾಲಕ್ಕೆ ಖಾಯಂ ಅಧ್ಯಾಪಕರ ನೇಮಕ, ವರ್ಗಾವಣೆ ಮತ್ತು ಅದಾಲತ್ ಮಾಡುವುದರಿಂದ ನಮಗೆ ಅಧ್ಯಾಪಕರ ಆಪತ್ತುಗಳಿವೆ. ಅತಿಥಿ ಉಪನ್ಯಾಸಕರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಆಯನೂರ ಮಂಜುನಾಥ ಅವರನ್ನು ಬೆಂಬಲಿಸ ಬೇಕಾಗಿದೆ, ಈಗಿನ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಹಂತ ಹಂತವಾಗಿ ಖಾಯಂಗೊಳಿಸಲಾಗುವುದು ಎಂದು ಘೋಷಣೆ ಮಾಡಿ ಕೊಂಡಿರುವದರಿಂದ ಸದನದಲ್ಲಿ ಅತಿಥಿ ಉಪನ್ಯಾಸಕರ ಪರ ಗಟ್ಟಿ ಧ್ವನಿ ಎತ್ತುವ ವ್ಯಕ್ತಿತ್ವ ಸದನದ ಒಳಗಡೆ ಬೇಕು ಹಾಗಾಗಿ ನಾವು ಆಯನೂರ ಮಂಜುನಾಥ ಅವರು ಪ್ರಸ್ತುತ ಆಡಳಿತ ಪಕ್ಷದಲ್ಲಿ ಇರುವುದರಿಂದ ಆ ಎಲ್ಲಾ ವಿಚಾರಗಳನ್ನು ಒಳಗೊಂಡು ಅವರು ಹಿಂದೆ ಮಾಡಿದ ಕೆಲಸ ಕಾರ್ಯಗಳನ್ನು ಮನಗಂಡು ನಾವು ಅವರಿಗೆ ರಾಜ್ಯ ಮಟ್ಟದಲ್ಲಿ ಎಲ್ಲ ಅತಿಥಿ ಉಪನ್ಯಾಸಕರು ಒಮ್ಮತದಿಂದ ತೀರ್ಮಾನ ಮಾಡಿ ಬೆಂಬಲ ಘೋಷಣೆ ಮಾಡುತ್ತಿದ್ದೇವೆ ಎಂದರು.

- Advertisement -

ಈ ಸಂಧರ್ಭದಲ್ಲಿ ಸಮಿತಿಯ ಸದಸ್ಯರಾದ ಸುಮಿತ್ರಾ ಮಾಸ್ತಿ, ಮಲ್ಲಿಕಾರ್ಜುನ ಹೊಟ್ಟಿನವರ, ದಿಲೀಪ ಕಡಪಟ್ಟಿ ಇದ್ದರು.

- Advertisement -
- Advertisement -

Latest News

ವಿದ್ಯಾರ್ಥಿ ಜೀವನದ ನಿಜವಾದ ಕೌಶಲ ಆಲಿಸುವಿಕೆ – ನಟ ಮಾಸ್ಟರ್ ಮಂಜುನಾಥ ಅಭಿಮತ

ವಿದ್ಯಾರ್ಥಿ ಜೀವನದಲ್ಲಿ ಕೇಳುವಿಕೆ ಹಾಗೂ ಅರ್ಥಮಾಡಿಕೊಳ್ಳುವಿಕೆಯು ನಿಜವಾದ ಕೌಶಲ್ಯವಾಗಿದೆ ಎಂದು ಕನ್ನಡದ ಪ್ರಸಿದ್ಧ ನಟ ಮಾಸ್ಟರ್ ಮಂಜುನಾಥ ಅಭಿಪ್ರಾಯಪಟ್ಟರು. ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಮಾಜ ವಿಜ್ಞಾನ...
- Advertisement -

More Articles Like This

- Advertisement -
close
error: Content is protected !!
Join WhatsApp Group