ಮೂಡಲಗಿ – ಕಬ್ಬಿನ ಬೆಲೆ ನಿಗದಿಗಾಗಿ ಕಳೆದ ಆರು ದಿನಗಳಿಂದ ಗುರ್ಲಾಪೂರ ಕ್ರಾಸ್ ನಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಕೆಲವು ಮುಖಂಡರು ರೈತರ ಅಹೋರಾತ್ರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ವೇದಿಕೆಯಲ್ಲಿಯೇ ಮಲಗಿದರು.
ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ರಾಜ್ಯ ಸಭಾ ಸಂಸದ ಈರಣ್ಣ ಕಡಾಡಿ, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ರಾಜ್ಯ ಅಧ್ಯಕ್ಷ ಚೂನಪ್ಪ ಪೂಜೇರ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಶೈಲ ಅಂಗಡಿ, ಮಾಜಿ ಶಾಸಕ ಪಿ. ರಾಜೀವ, ಶಾಸಕ ಸಿದ್ದು ಸವದಿ, ಶರಣಗೌಡ್ರು ತಳ್ಳಿಕೇರಿ, ಬಸವರಾಜ ಉಂದ್ರಿ, ಸುಭಾಸ ಪಾಟೀಲ, ಈರಣ್ಣ ಅಂಗಡಿ, ಪ್ರೇಮಾ ಭಂಡಾರಿ, ದೀಪಾ ಕುಡಚಿ ಸೇರಿದಂತೆ ಅನೇಕ ಮುಖಂಡರು ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡರು.

algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 2097152;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 37;
ನಾಳೆ ವಿಜಯೇಂದ್ರ ಅವರ ಜನ್ಮದಿನವಿದ್ದು ತಮ್ಮ ಜಯಂತಿಯನ್ನು ರೈತರೊಂದಿಗೆ ಆಚರಿಸಿಕೊಳ್ಳುವುದಾಗಿ ವಿಜಯೇಂದ್ರ ಅವರು ಘೋಷಣೆ ಮಾಡಿದ್ದು ರೈತರಲ್ಲಿ ಹರ್ಷ ತಂದಿತು.
ರೈತರ ಬೇಡಿಕೆ ನ್ಯಾಯಯುತವಾಗಿದ್ದು ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ ಎಂಬುದಾಗಿ ಎಲ್ಲ ಮುಖಂಡರು ಈ ಸಂದರ್ಭದಲ್ಲಿ ಘೋಷಿಸಿದರು.

