ಮುನವಳ್ಳಿ: ಇಲ್ಲಿಗೆ ಸಮೀಪದ ತಲ್ಲೂರ ವಲಯದ ಸಂಪನ್ಮೂಲ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ಎಫ್ಎಲ್ ಕಲಿಕಾ ಹಬ್ಬದ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಸಮೂಹ ಸಂಪನ್ಮೂಲ ಕೇಂದ್ರ ತಲ್ಲೂರದಲ್ಲಿ ಜರುಗಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ವಿ ಸಿ ಹಿರೇಮಠ್ ತಲ್ಲೂರ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಗುರುದೇವಿ ಮಲಕಣ್ಣವರ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮಮತಾ ಬನಕಾರ , ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರುಗಳಾದ ಡಿ ಡಿ ಭೋವಿ, ಶಿವಾನಂದ ಅಣ್ಣಿಗೇರಿ, ಸೈದುಸಾಬ ಜಂಬಗಿ, ವಿಜಯ ಮರಡಿ, ಸೋನನೇ, ರಾಜು ದುಂಡನಕೊಪ್ಪ, ಲೋಕನಾಥ ಪೂಜೇರ, ಆನಂದ ಲಕ್ಕನ್ನವರ್, ಜರಗು. ಕ. ರಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಚ್ ವೈ ಗೌಡರ ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆ ನಂತರ ತಲ್ಲೂರು ವಲಯದ ಸಂಪನ್ಮೂಲ ವ್ಯಕ್ತಿಗಳಾದ ಗುರು ದೇವಿ ಮಲಕನ್ನವರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಹೊಸ ಶಿಕ್ಷಣ ನೀತಿಯ ಮುಖ್ಯ ಆಶಯಗಳಲ್ಲಿ ಕಲಿಕಾ ಹಬ್ಬವೂ ಒಂದಾಗಿದೆ. ಕಲಿಕಾ ಹಬ್ಬದಲ್ಲಿ ಆಡು ಮತ್ತು ಹಾಡು, ಕಾಗದ –ಕತ್ತರಿ, ಬಣ್ಣ, ಮಾಡು– ಆಡು ಹೀಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹ ನೀಡುವುದಾಗಿದೆ ಎಂದು ಕಲಿಕಾ ಹಬ್ಬದ ಮಹತ್ವ ತಿಳಿಸಿದರು.
ನಂತರ ಮಾತನಾಡಿದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ವೀರಯ್ಯ ಹಿರೇಮಠ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ಕ್ಲಸ್ಟರ್ ಮಟ್ಟದಲ್ಲಿ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ‘ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ (FLN) ಚಟುವಟಿಕೆಗಳ ಬಲವರ್ಧನೆಗೆ ಕಲಿಕಾ ಹಬ್ಬವು ಸಂತೋಷದಾಯಕ ಹಾಗೂ ಅನುಭವಯುಕ್ತ ಕಲಿಕೆಯ ವಾತಾವರಣವನ್ನು ಪ್ರೇರೇಪಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮುಖ್ಯೋಪಾಧ್ಯಾಯ ರಾದ ಡಿ ಡಿ ಭೋವಿ ಸ್ವಾಗತಿಸಿದರು ಕಿರಣ ಭೋವಿ ನಿರೂಪಿಸಿದರು.
.