Homeಸುದ್ದಿಗಳುವಿಶ್ವಶಾಂತಿಗಾಗಿ ಕನ್ನಡದ ಕೊಡುಗೆ ಕುರಿತು ಬ್ಯಾಂಕಾಕ್ ನಲ್ಲಿ ಉಪನ್ಯಾಸ

ವಿಶ್ವಶಾಂತಿಗಾಗಿ ಕನ್ನಡದ ಕೊಡುಗೆ ಕುರಿತು ಬ್ಯಾಂಕಾಕ್ ನಲ್ಲಿ ಉಪನ್ಯಾಸ

ಸಿಂದಗಿ: ಬಂಥನಾಳ ಗ್ರಾಮದ ಕುವರ ಮತ್ತು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ನಾನಾಸಾಹೇಬ ಹಚಡದ ಅವರು ‘ವಿಶ್ವ ಶಾಂತಿಗಾಗಿ ಕನ್ನಡ ಸಾಹಿತ್ಯದ ಕೊಡುಗೆ ಕುರಿತು ಬ್ಯಾಂಕಾಕ್ ನಲ್ಲಿ ಉಪನ್ಯಾಸ ನೀಡಲಿದ್ದಾರೆ.

ಇವರು ಇಂಟರ್ ನ್ಯಾಷನಲ್ ಕಲ್ಚರ್ ಟೆಸ್ಟ್ ಇಂಡಿಯಾದ ನಾಡು-ನುಡಿ ಪ್ರಚಾರದ ಜೊತೆಗೆ ಜಾಗತಿಕ ಸೌಹಾರ್ದತೆಯ ಕೆಲಸವನ್ನು ರಾಜ್ಯ ಹೊರರಾಜ್ಯ ಮತ್ತು ಹೊರ ದೇಶಗಳಲ್ಲಿ ಸುಮಾರು 2008 ರಿಂದ ಪ್ರಾರಂಭಿಸಿದ್ದಾರೆ. ಇನ್ನು 20 ಕ್ಕೂ ಹೆಚ್ಚು ದೇಶಗಳಲ್ಲಿ ಥೈಲ್ಯಾಂಡ್, ಶ್ರೀಲಂಕಾ ಅಮೇರಿಕಾ ಕೀನ್ಯಾ ಇಂಡೋನೇಷ್ಯ, ಮಲೇಷಿಯಾ, ಸೇರಿದಂತೆ 29 ರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಕಲೆ,  ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಮಾಡಿ ಎರಡು ದೇಶ  ಭಾಷೆಗಳ ನಡುವೆ ಸಾಮರಸ್ಯ ಮೂಡಿಸುವ ವಿಚಾರಗೋಷ್ಠಿಗಳು ಜರುಗಲಿವೆ.

ಈ ಕಾರ್ಯಕ್ರಮದಲ್ಲಿ ‘ವಿಶ್ವಶಾಂತಿಗಾಗಿ ಕನ್ನಡ ಸಾಹಿತ್ಯದ ಕೊಡುಗೆ ‘ ಎಂಬ ವಿಷಯದ ಕುರಿತು ಉಪನ್ಯಾಸ ಮಾಡಲಿದ್ದಾರೆ.

ಅಭಿನಂದನೆ: ದೇವಣಗಾವ ವಲಯದ ಪತ್ರಕರ್ತ, ಶಿವಶರಣ ಕೊಪ್ಪ, ಸಿಂದಗಿ ತಾಲೂಕು ವರದಿಗಾರ ಮಹಾಂತೇಶ ನೂಲಾನವರ, ಶಿಕ್ಷಕ ಸಾಹಿತಿ ರಾಚೂ ಕೊಪ್ಪ, ಭಾಗಣ್ಣ ತಮದೊಡ್ಡಿ, ರವಿ ಮಣೂರ್, ರಾಹುಲ್ ಗುತ್ತೇದಾರ ಅಭಿನಂದನೆ ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group