ಸವದತ್ತಿ – “ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಅಷ್ಟೇ ಅಲ್ಲ ರಾಜ್ಯದಲ್ಲಿಯೇ ಯಾವ ಶಿಕ್ಷಕರಿಗೂ ಈ ರೀತಿಯಾದ ಹಲ್ಲೆಗಳು ಆಗಬಾರದು. ಈ ಘಟನೆ ರಾಜ್ಯದಲ್ಲಿನ ಅನುದಾನಿತ ಶಾಲೆಗಳ ಶಿಕ್ಷಕರು ಸೇವೆ ಸಲ್ಲಿಸುವಲ್ಲಿ ಒಂದು ರೀತಿಯಾದ ಭಯದ ವಾತಾವರಣ ಉಂಟುಮಾಡಿದೆ. ಸಂಸ್ಥೆಗಳ ಆಡಳಿತ ಮಂಡಳಿಯವರ ಆದೇಶ ಮತ್ತು ಮೇಲಾಧಿಕಾರಿಗಳ ಆದೇಶ ಇಬ್ಬರ ಮಾತನ್ನು ಚಾಚು ತಪ್ಪದೆ ಮಾಡಿದರೂ ಸಹ ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸುವುದು ಬಹಳ ಕಷ್ಟವಾಗುತ್ತಿದೆ.
ಅಥಣಿ ತಾಲೂಕಿನ ಸತ್ತಿ ಗ್ರಾಮದ ಶ್ರೀ ಬಸವೇಶ್ವರ ಅನುದಾನಿತ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಲಕ್ಷ್ಮಣ ನಾಯಿಕರವರ ಮೇಲೆ ಅದೇ ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥರಾದ ಮಾರುತಿ ಹೊನಕಡಬಿಯವರು ಹಲ್ಲೆ ಮಾಡಿರುತ್ತಾರೆ ಅವರ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು” ಎಂದು ಬಿ ಬಿ ನಾವಲಗಟ್ಟಿ. ಮಾತನಾಡಿದರು
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ತಾಲೂಕಾ ಪ್ರೌಡ ಶಾಲೆಗಳ ಸಹ ಶಿಕ್ಷಕರ ಸಂಘ ಹಾಗೂ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಸೇರಿ ಶಿಕ್ಷಕರಾದ ಲಕ್ಷ್ಮಣ ನಾಯಿಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ ಯವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕಾ ಪ್ರೌಡ ಶಾಲೆಗಳ ಸಹ ಶಿಕ್ಷಕರ ಸಂಘದ ಅದ್ಯಕ್ಷರಾದ ಬಿ ಬಿ ನಾವಲಗಟ್ಟಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಎಚ್ ಆರ್ ಪೆಟ್ಲೂರ ಹಾಗೂ ಪ್ರಧಾನ ಕಾಯದರ್ಶಿ ಎಫ್.ಜಿ.ನವಲಗುಂದ ಮತ್ತು ಮಾಜಿ ಅದ್ಯಕ್ಷರಾದ ಎಸ್ ವ್ಹಿ ಬೆಳವಡಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷರಾದ ಎಮ್ ಏ ಕಮತಗಿ. ಸದಸ್ಯರಾದ ಡಿ ಎಪ ಜಾಬಣ್ಣವರ. ಎಮ್ ಎಸ್ ದೊಡಮನಿ. ಎಮ್ ಎಮ್ ಲಕ್ಕಣ್ಣವರ. ಡಿ ಆರ್ ಮೆಣಶಿಣಕಾಯಿ. ಶಂಕರ ರಾಠೋಡ.ಬಿ ಪಿ ಗಾಣಗೇರ.ಎಚ ಕೆ ಎತ್ನಟ್ಟಿ. ಕೆ ಎಸ್ ಪಾಟೀಲ. ಬಿ ಎಸ್ ಆಲದಕಟ್ಟಿ. ಸೇರಿದಂತೆ ತಾಲೂಕಿನ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.