ಬೀದರ – ರಾಜ್ಯದಲ್ಲಿ ಕೊರೋನಾ ವೇಗದಲ್ಲಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಹೇರಿ ಸರ್ಕಾರ ಆದೇಶ ಹೊರಡಿಸಿದ್ದರೂ ಜಿಲ್ಲಾ ಆಡಳಿತ ರಾಜ್ಯ ಸರ್ಕಾರದ ಆದೇಶ ಧಿಕ್ಕರಿಸಿ ಜಾತ್ರೆ ನಡೆಯಲು ಅವಕಾಶ ನೀಡಿದೆ.
ಜಿಲ್ಲೆಯಲ್ಲಿ ಯಾವುದೇ ಜಾತ್ರೆ, ಮದುವೆ ಸಮಾರಂಭಗಳು ನಡೆಯಬಾರದು ಎಂಬ ಆದೇಶಕ್ಕೆ ಬೀದರ ಜಿಲ್ಲಾ ಅಧಿಕಾರಿ ಕವಡೆ ಕಾಸಿನ ಕಿಮ್ಮತ್ತೂ ಕೊಡಲಿಲ್ಲ. ಇದಕ್ಕೆ ಶಾಸಕ ಶರಣು ಸಲಗರ ಅವರೂ ಸಾಥ್ ನೀಡಿದ್ದು, ಬಸವಕಲ್ಯಾಣದ ಹಾರ್ಕೋಡ್ ನಲ್ಲಿ ಭರ್ಜರಿ ರಥೋತ್ಸವ ಮಾಡಿದ್ದಾರೆ.
ಈಗಾಗಲೆ ಬೀದರ್ ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕರೋನ ವಕ್ಕರಿಸಿದರು ಕೂಡ ಜಿಲ್ಲಾ ಆಡಳಿತ ಎಚ್ಚರ ವಹಿಸಿಲ್ಲ. ಈಗ ಜಾತ್ರೆಗೆ ಅನುವು ಮಾಡಿಕೊಟ್ಟು ಕೊರೋನಾ ಹೆಚ್ಚಾಗುವಂತೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ ಆದರೂ ಬಸವಕಲ್ಯಾಣದ ಹಾರ್ಕೋಡ್ ನಲ್ಲಿ ಭರ್ಜರಿ ರಥೋತ್ಸವ ಮಾಡಿದ ಶರಣು ಸಲಗರ ಹಾಗೂ ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ ಇಬ್ಬರೂ ಸೇರಿ ಭರ್ಜರಿಯಾಗಿ ಸದ್ಗುರು ಚನ್ನಬಸವ ಶಿವಯೋಗಿಗಳ 70ನೇ ಜಾತ್ರಾ ಮಹೋತ್ಸವ ನೆರವೇರಿಸಿದರು.
ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು ಜನಪ್ರತಿನಿಧಿಗಳೇ ರಾಜ್ಯ ಸರ್ಕಾರದ ಆದೇಶ ಧಿಕ್ಕರಿಸಿದರೆ ಜನ ಸಾಮಾನ್ಯರು ಏನು ಮಾಡಬೇಕು. ಕೊರೋನಾ ಹೆಚ್ಚಾದರೆ ಯಾರು ಹೊಣೆಗಾರರು ಎಂಬ ಪ್ರಶ್ನೆ ಉದ್ಭವಿಸಿದೆ. ಜಿಲ್ಲಾಡಳಿತ ಇದಕ್ಕೆ ಉತ್ತರ ಕೊಡಬೇಕಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ