ಜಿಎಸ್ ಟಿ ಕಡಿಮೆ ಮಾಡಿದ್ದು ಕೇಂದ್ರದ ಐತಿಹಾಸಿಕ ನಿರ್ಧಾರ – ಪ್ರಹ್ಲಾದ ಜೋಶಿ

Must Read

ಬೀದರ -ಭಾರತ ಸರ್ಕಾರ ಜಿಎಸ್ ಟಿ ಕಡಿಮೆ ಮಾಡುವ ಐತಿಹಾಸಿಕ ತೀರ್ಮಾನ ತೆಗೆದುಕೊಂಡು ಜನರ ಹೊರೆಯನ್ನು ಕಡಿಮೆ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಬಂಡವಾಳ ಮಾಡುತ್ತಿದ್ದೇವೆ. ಜಗತ್ತಿನ ನಾಲ್ಕನೇ ಅರ್ಥ ವ್ಯವಸ್ಥೆಯಾಗಿ ಭಾರತ ಇವತ್ತು ಹೊರಹೊಮ್ಮುತ್ತಿದೆ ಜಿಎಸ್ಟಿ ಇಳಿಸಿದ್ದು ಸ್ವಾತಂತ್ರ ಆದಮೇಲೆ ಇದು ಒಂದು ಅತಿ ದೊಡ್ಡ ಸುಧಾರಣಾ ಕ್ರಮವಾಗಿದೆ ಎಂದರು

ಜನರಿಗೆ ದಿನ ಬಳಕೆ ವಸ್ತುಗಳು ಬಹಳಷ್ಟು ಕಡಿಮೆ ದರದಲ್ಲಿ ಸಿಗುತ್ತಿವೆ ರಿನಿವೇಬಲ್ ಎನರ್ಜಿ ಮೇಲೂ ಜಿಎಸ್‌ಟಿ ಕಡಿಮೆಯಾಗಿದೆ.ರಿನಿವೇಬಲ್ ಎನರ್ಜಿ ಸರಿಯಾಗಿ ಪ್ಲಾನ್ ಮಾಡ್ಕೊಂಡ್ರೆ ರಾಜ್ಯ ಸರ್ಕಾರ ವಿದ್ಯುತ್ ಬಿಲ್ ಬಹಳಷ್ಟು ಕಡಿಮೆ ಮಾಡಬಹುದು. ಮಹಾರಾಷ್ಟ್ರದಲ್ಲಿ ಸೋಲಾರ್ ಇಂಪ್ಲಿಮೆಂಟ್ ನಿಂದ ವಿದ್ಯುತ್ ಬಿಲ್ ಕಡಿಮೆ ಮಾಡಲು ಹೊರಟಿದ್ದಾರೆ ಎಂದು ಜೋಶಿ ಹೇಳಿದರು.

ಪಿಎಂ ಕುಸುಮ್ ಯೋಜನೆಯನ್ನು ಬಹಳಷ್ಟು ವ್ಯವಸ್ಥಿತವಾಗಿ ಮಹಾರಾಷ್ಟ್ರದಲ್ಲಿ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ವಿದ್ಯುತ್ ದರ ಕಡಿಮೆ ಮಾಡಲಿಕ್ಕೆ ರೆಗುಲೇಟರ್ ಬೋರ್ಡ್ ಗೆ ಸಿಎಂ ಫಡ್ನವಿಸ್ ಅವರು ಹೇಳಿದ್ದಾರೆ. ರಾಜ್ಯ ಸರ್ಕಾರಕ್ಕೆ ಅಸ್ಥಿರತೆ ಇದೆ ಅವರಲ್ಲಿ ಒಳ ಜಗಳ, ವೈಫಲ್ಯ ಮುಚ್ಚಲಿಕ್ಕೆ ಈ ರೀತಿ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಏನಾಯಿತು, ಹಿಂದೂ ಧರ್ಮದವರನ್ನ ಒಕ್ಕಲೆಬ್ಬಿಸಿ ಕಳುಹಿಸುತ್ತೇವೆ ಅಂದ್ರೂ ರಾಜ್ಯ ಸರ್ಕಾರ ಏನೂ ಮಾಡಿಲ್ಲ. ಸರ್ಕಾರ ಸುಮ್ನೆ ಕುಳಿತಿದೆ ಅಂದ್ರೆ ಇದೆಲ್ಲ ಫೇಲ್ಯೂರ್ ಆಫ್ ದಿ ಗವರ್ನಮೆಂಟ್. ಇದೆಲ್ಲ ಮರೆಮಾಚಲಿಕ್ಕೆ ಈಗ ಜಾತಿ ಗಣತಿಗೆ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.

ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ ನವೆಂಬರ್ ನಲ್ಲಿ ನಾನು ಮುಖ್ಯಮಂತ್ರಿ ಆಗೇ ಆಗ್ತೀನಿ ಅಂತ. ಅದೇ ರೀತಿ ರಾಜಣ್ಣನು ಹೇಳಿದ್ದಾರೆ ಕ್ರಾಂತಿ ಆಗುತ್ತದೆ ಅಂತ ಸೆಪ್ಟೆಂಬರ್ ಕ್ರಾಂತಿ ಈಗ ಮುಗೀತಾ ಬಂದಿದೆ ಹೀಗಾಗಿ ಕ್ರಾಂತಿ ಮುಂದೆ ಹಾಕಲು ಈ ರೀತಿ ಮಾಡ್ತಿದ್ದಾರೆ. ನಾನು ಕೇಳುತ್ತೇನೆ ನೀವು ಎಷ್ಟು ಜಾತಿಗೆ ಒಳ್ಳೇಯದು ಮಾಡಿದ್ದೀರಿ,..? ನಿಮ್ಮ ಪಾರ್ಟಿ ಕಾಂಗ್ರೆಸ್ ಯಾವತ್ತೂ ಎಸ್ಸಿ, ಎಸ್ಟಿ, ಒಬಿಸಿಗೆ ವಿರೋಧ ಮಾಡ್ತಾ ಬಂದಿದೆ ಎಂದು ಹೇಳಿದ ಅವರು, ಪಂಡಿತ್ ನೆಹರೂ ಹಿಡಿದುಕೊಂಡು ರಾಜೀವ ಗಾಂಧಿಯವರೆಗೂ ನಿಮ್ಮ ಎಲ್ಲಾ ನೇತಾರರು ಮೀಸಲಾತಿಗೆ ವಿರೋಧ ಮಾಡಿದ್ದೀರೊ ಇಲ್ವೊ ? ರಾಜೀವ್ ಗಾಂಧಿ, ಪಂಡಿತ್ ಜವಾಹರ್ ಲಾಲ್ ನೆಹರು, ಕಾಂಗ್ರೆಸ್ ಪಾರ್ಟಿ ಎಸ್ಸಿ,ಎಸ್ಟಿ, ಒಬಿಸಿ ರಿಸರ್ವೇಶನ್ ಅನ್ನ ವಿರೋಧ ಮಾಡಿದ್ರು. ಪಾರ್ಲಿಮೆಂಟ್ ನಲ್ಲೇ ವಿರೋಧ ಮಾಡಿದ್ರು, ಅಲ್ಲಿ ಇಲ್ಲಿ ಅಂತಿಲ್ಲ. ಈಗ ಸಿದ್ದರಾಮಯ್ಯನವರು ಡ್ರಾಮ ನಡೆಸಿದ್ದಾರೆ. ರಿಸರ್ವೇಶನ್ ಕೊಡೋದು ಯಾಕೆ,ಯಾವುದೇ ಒಂದು ಸಮುದಾಯದಲ್ಲಿ ತಲೆತಲಾಂತರದಿಂದ ಅಸ್ಪೃಶ್ಯತೆ ಅಥವಾ ಬೇರೆ ಬೇರೆ ಕಾರಣದಿಂದ ಹಿಂದುಳಿದಿದ್ದಾರೆ ಎಂದು ಕೊಡುತ್ತೇವೆ. ಅಂಥವರಿಗೆ ಕೊಡುವ ಸಂಬಂಧ ಆದರೆ ಮುಸಲ್ಮಾನರು ಕ್ರಿಶ್ಚಿಯನ್ನರಲ್ಲಿ ಜಾತಿ ಅಸ್ಪೃಶ್ಯತೆ ಇದೆ ಅಂತ ನೀವು ಒಪ್ಕೋತೀರಾ? ಎಂದು ಜೋಶಿ ಪ್ರಶ್ನೆ ಮಾಡಿ, ಇದು ನೂರಕ್ಕೆ ನೂರರಷ್ಟು ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಮೆಚ್ಚಿಸುವುದಕ್ಕೆ ಮಾಡಿರುವಂತಹ ಪ್ರಕ್ರಿಯೆ ಇದು ಎಂದರು.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group