ಮೂಡಲಗಿ – ‘ಮೂಡಲ ಜ್ಯೋತಿ’ ಪತ್ರಿಕೆಯು ಯಾವುದೇ ಒಂದು ಪಕ್ಷಕ್ಕೆ, ಸಮುದಾಯಕ್ಕೆ ಸೀಮಿತವಾಗದೇ ಸಮಾಜದ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ಕೆಲಸ ಮಾಡಲಿ ರಾಜ್ಯಾದ್ಯಂತ ತನ್ನದೇ ಆದ ಛಾಪನ್ನು ಮೂಡಿಸಲಿ. ಪತ್ರಿಕಾ ರಂಗದಲ್ಲಿ ಮಹಿಳಾ ಶಿಕ್ಷಣಕ್ಕೆ, ನಿರುದ್ಯೋಗ ಸಮಸ್ಯೆಗೆ, ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ಕೊಡಲಿ. ಇದು ಎಲ್ಲರ ಜ್ಯೋತಿಯಾಗಿ ಬೆಳೆಯಲಿ ಎಂದು ಪ್ರಾದೇಶಿಕ ಭೂದಾಖಲೆಗಳ ನಿವೃತ್ತ ನಿರ್ದೇಶಕರಾದ ಡಾ. ಶ್ರೀಮತಿ ನಜ್ಮಾ ಪೀರಜಾದೆ ಹೇಳಿದರು.
ಮಹಾಲಿಂಗಯ್ಯ ನಂದಗಾಂವಮಠ ಅವರ ‘ಮೂಡಲ ಜ್ಯೋತಿ’ ವಾರಪತ್ರಿಕೆ ಬಿಡುಗಡೆ ಹಾಗೂ ರೈತ ಮುಖಂಡರಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೂಡಲಗಿಯವರೇ ಆದ ಅವರು ಹಲವಾರು ವರ್ಷಗಳ ಹಿಂದೆ ಸ್ವಾಮೀಜಿಯವರಿಂದ ಸನ್ಮಾನಿತರಾಗಿದ್ದು ಸೇರಿದಂತೆ ಹಲವು ನೆನಪುಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು.
ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು. ಆದರೆ ಪತ್ರಿಕೆ ನಡೆಸುವುದು ಸುಲಭವಲ್ಲ ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿ ಮುದ್ರಣ ಮಾಧ್ಯಮ ನಡೆಸುವುದು ತುಂಬಾ ಕಷ್ಟಕರ. ಇಂಥ ಪತ್ರಿಕೆಗಳನ್ನು ನಾವು ಕೊಂಡು ಓದಿ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.

algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 36;
ಮುಖಂಡ ಅಶೋಕ ಪೂಜೇರಿ ಮಾತನಾಡಿ, ಮಾಧ್ಯಮ ರಂಗದ ಹಿರಿಮೆ ದೊಡ್ಡದು. ಎಲ್ಲ ವ್ಯವಸ್ಥೆ ದಾರಿ ತಪ್ಪಿದಾಗ ಅದನ್ನು ತಿದ್ದುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಯಾವ ಅಧಿಕಾರಿಗಳು, ರಾಜಕಾರಣಿಗಳೂ ಮಾಡಲಾಗದ ಕಾರ್ಯವನ್ನು ಪತ್ರಿಕೆಗಳು ಮಾಡುತ್ತವೆ. ಇದೇ ಮಾಧ್ಯಮದ ಶಕ್ತಿ. ಹಾಗೆ ನೋಡಿದರೆ ಮಾಧ್ಯಮ ನಡೆಸುವವರ ಪರಿಸ್ಥಿತಿ ಅಷ್ಟೇನೂ ಸರಿಯಾಗಿಲ್ಲ. ಎಂಥ ಕಷ್ಟದ ಪರಿಸ್ಥಿತಿಯಲ್ಲಿಯು ಅವರು ತಮ್ಮ ಸಾಮಾಜಿಕ ಕರ್ತವ್ಯ ಅವರು ಮಾಡುತ್ತಾರೆ ಎಂದರು.
ಈ ಹಿಂದೆ ಪ್ರೊ. ನಂಜುಂಡಸ್ವಾಮಿ ಹಾಗೂ ಬಾಬಾಗೌಡ ಪಾಟೀಲರ ರೈತ ಹೋರಾಟದ ನಂತರ ಮಂಕಾಗಿದ್ದ ರೈತರ ಹೋರಾಟ ಈಗ ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ಹೋರಾಟದಿಂದ ಮತ್ತೆ ಚುರುಕಾಗಿದೆ. ಈ ರೈತ ಮುಖಂಡರ ದಿಟ್ಟ ಹೋರಾಟದಿಂದ ರೈತರಿಗೆ ಒಳ್ಳೆಯದಾಗಿದೆ. ಈ ಸಂದರ್ಭದಲ್ಲಿ ಅವರಿಬ್ಬರನ್ನು ಸತ್ಕರಿಸುತ್ತಿರುವುದು ತುಂಬಾ ಉಚಿತವಾದುದು ಎಂದರು.
ಕಾಂಗ್ರೆಸ್ ಮುಖಂಡ ರಮೇಶ ಉಟಗಿ ಮಾತನಾಡಿ, ಮೂಡಲ ಜ್ಯೋತಿ ಎಲ್ಲ ರಂಗಗಳ ಅಭಿವೃದ್ಧಿಯೊಂದಿಗೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.
ಇನ್ನೋರ್ವ ಮುಖಂಡ ಲಕ್ಕಣ್ಣ ಸವಸುದ್ದಿ ಮಾತನಾಡಿ, ಪತ್ರಿಕೆಯೊಂದು ಬೆಳೆಯಬೇಕಾದರೆ ಎಲ್ಲರ ಸಹಾಯ ಸಹಕಾರ ಅಗತ್ಯವಾಗಿದೆ. ನಾವೂ ಕೂಡ ಎಲ್ಲರೂ ಜೊತೆಯಾಗಿ ಮೂಡಲ ಜ್ಯೋತಿ ಪತ್ರಿಕೆ ಬೆಳೆಯಲು ಕೈ ಜೋಡಿಸೋಣ ಎಂದರು.
ವೇದಿಕೆಯ ಮೇಲೆ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಶಶಿಕಾಂತ ಗುರೂಜಿ, ರಾಜ್ಯ ಅಧ್ಯಕ್ಷರಾದ ಚೂನಪ್ಪ ಪೂಜೇರಿ, ತಾಲೂಕಾ ಅಧ್ಯಕ್ಷರಾದ ಶ್ರೀಶೈಲ ಅಂಗಡಿ ಹಾಗೂ ರೈತ ಮುಖಂಡ ಪ್ರಕಾಶ ತೇರದಾಳ, ಪಾಂಡು ಬೀರನಗಡ್ಡಿ ಮುಂತಾದವರನ್ನು ಸತ್ಕರಿಸಲಾಯಿತು
ವೇದಿಕೆಯ ಮೇಲೆ ಮಹಾಲಿಂಗಯ್ಯ ನಂದಗಾಂವಮಠ, ಕೃಷ್ಣಪ್ಪ ಸೊನ್ನದ, ಎಸ್ ಆರ್ ಸೋನವಾಲಕರ, ಕೆ ಟಿ ಗಾಣಿಗೇರ, ಮಲ್ಲಪ್ಪ ಮದಗುಣಕಿ, ಈರಣ್ಣ ಕೊಣ್ಣೂರ, ಪ್ರಕಾಶ ಮಾದರ, ಕಲ್ಲಪ್ಪ ಲಕ್ಕಾರ, ಮಹೇಶ ಕೌಜಲಗಿ ಉಪಸ್ಥಿತರಿದ್ದರು.
ಶಿವಾಪೂರದ ಶ್ರೀ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು.

