ಮೊದಲಿನಂತೆ ಮಕ್ಕಳು ಶಾಲೆಗೆ ಬರಲಿ – ಖಾಶೆಂಪೂರ

Must Read

ಬೀದರ – ಮಕ್ಕಳು ಮೊದಲು ಹೇಗೆ ಶಾಲೆಗೆ ಬರುತ್ತಿದ್ದರೋ ಹಾಗೆಯೇ ಬರಬೇಕು ಹೊಸದೇನನ್ನೂ ಮಾಡಬಾರದು ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದ್ದಾರೆ.

ಹಿಜಾಬ ವಿವಾದದ ಹಿನ್ನೆಲೆಯಲ್ಲಿ ಬೀದರ್ ನಲ್ಲಿ ಅವರು ಪತ್ರಕರ್ತರೊಡನೆ ಮಾತನಾಡಿದರು.

ಮಕ್ಕಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದ ತಪ್ಪು. ಮಕ್ಕಳನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಖಾಶಂಪೊರ್ , ರಾಜಕೀಯ ನಾಯಕರು ತಮ್ಮ ಸ್ವಾರ್ಥಕ್ಕೋಸ್ಕರ ಹಿಜಾಬ ಕಿಡಿ ಹೊತ್ತಿಸಿದ್ದಾರೆ. ಮಂಗಳೂರಿನಲ್ಲಿ ಹೊತ್ತಿದ ಕಿಚ್ಚು ರಾಜ್ಯಾದ್ಯಂತ ವ್ಯಾಪಿಸಿದೆ ಇದಕ್ಕೆ ಯಾರು ಕಾರಣ ಎಂದು ಬಂಡೇಪ ಖಾಶಂಪೊರ್ ಪ್ರಶ್ನಿಸಿದರು.

ಮಕ್ಕಳು ಮೊದಲು ಹೇಗೆ ಶಾಲೆಗೆ ಬರುತ್ತಿದ್ದರೋ ಹಾಗೆಯೇ ಬರಬೇಕು ಹೊಸದೇನನ್ನೂ ಮಾಡಬಾರದು. ಪಾಠದ ಕಡೆಗೆ ಲಕ್ಷ್ಯ ಕೊಡಬೇಕು ಎಂದು ಅವರು ಹೇಳಿದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group