ಮನೆ ಹಕ್ಕುಪತ್ರ ವಿತರಣೆ ಸಮರ್ಪಕವಾಗಲಿ – ಶಾಸಕ ಭೂಸನೂರ

Must Read

ಸಿಂದಗಿ: ಅಧಿಕಾರಿಗಳು ಜವಾಬ್ದಾರಿತನದಿಂದ ಇಂತಹ ಕೆಲಸಗಳನ್ನು ಮಾಡಬೇಕು ಮನೆಗಳ ವಿಷಯದಲ್ಲಿ ನನ್ನನ್ನು ಕತ್ತಲಲ್ಲಿ ಇಡಲಾಗುತ್ತಿದೆ ಅದು ಸರಿಯಲ್ಲ ಎಂದು ಶಾಸಕ ರಮೇಶ ಭೂಸನೂರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನಡೆದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣದ ಹೊರವಲಯದಲ್ಲಿರುವ ಅಂತರಗಂಗಿ ರಸ್ತೆ ಪಕ್ಕದಲ್ಲಿರುವ ಜಾಗದಲ್ಲಿ ಫಲಾನುಭವಿಗಳಿಗೆ ಬಾಕಿ ಉಳಿದಿರುವ ಹಕ್ಕು ಪತ್ರ ನೀಡುವ ಕೆಲಸ ಎಲ್ಲಿಗೆ ನಿಂತಿದೆ ಎಂಬುದರ ಬಗ್ಗೆ ನಿಗಾವಹಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಅಲ್ಲದೆ 566/2 ರಲ್ಲಿರುವ 10.5ಎ ಜಾಗದಲ್ಲಿ ನಿವೇಶನಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ತರುವುದಾಗಿ ಅಲ್ಲದೆ ನೂತನ ನಿವೇಶನಗಳ ಖರೀದಿ ಮಾಡಲು ಆಶ್ರಯ ಸಮಿತಿ ಸದ್ಯರಾಗಲಿ ಪುರಸಭೆ ಅಧ್ಯಕ್ಷರಾಗಲಿ ಅವರ ನಜರಿಗೆ ತರದೆ ಮಾಡುತ್ತಿರುವುದು ಸರಿಯಲ್ಲ ಎಂದರು.

ಆಶ್ರಯ ಸಮಿತಿ ಸದಸ್ಯ ರಾಕೇಶ ಕಂಟಗೊಂಡ ಮಾತನಾಡಿ, ಚಿಕ್ಕ ಸಿಂದಗಿ ಹತ್ತಿರ ಇರುವ ಸರ್ವೆ ನಂ 660 ಮತ್ತು 661/1 ನ್ನು ಸಭೆಯಲ್ಲಿ ಪ್ರಸ್ತಾವನೆ ಮಾಡಿರುವುದು ಯಾವ ಉದ್ದೇಶಕ್ಕಾಗಿ ಎಂದು ಪುರಸಭೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಳ್ಳುತ್ತಿದಂತೆ ಇನ್ನೋರ್ವ ಸದಸ್ಯ ಖಾಜು ಬಂಕಲಗಿ ಧ್ವನಿಗೂಡಿಸಿ ನಗರಕ್ಕೆ ಸಮೀಪ ಇರುವ ಸರ್ವೆಯಲ್ಲಿ ಜಾಗ ಖರೀದಿ ಮಾಡಬಹುದು ನಗರದಿಂದ ಐದಾರು ಕಿಲೋ ಮೀಟರ್ ದೂರದಲ್ಲಿ ಜನರಿಗೆ ತೊಂದರೆ ಆಗುತ್ತಿರುವ ನಿಟ್ಟಿನಲ್ಲಿ ಸ್ಥಳ ಗುರುತಿಸುತ್ತಿರುವುದು ನೋಡಿದರೆ ಇಲ್ಲಿ ಅವ್ಯವಹಾರದ ಲಕ್ಷಣ ಕಾಣುತ್ತಿವೆ ಎಂದು ಆರೋಪಿಸಿದರು.

ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅವರು ಮಧ್ಯಪ್ರವೇಶಿಸಿ ಯಾರಿಗೂ ಹೇಳದೆ ಪ್ರಸ್ತಾವನೆಯಲ್ಲಿ ಯಾಕೆ ಇಟ್ಟಿದ್ದೀರಿ ಇಂತಹ ತಪ್ಪುಗಳು ಆಗಬಾರದೆಂದು ಸೂಚಿಸಿದರು.

ಇಂದಿನ ಸಭೆಯಲ್ಲಿ ನಡೆದ ನಡಾವಳಿಗಳ ಬಗ್ಗೆ ಏನು ಕ್ರಮ ತೆಗೆದುಕೊಂಡ ಬಗ್ಗೆ ಮುಂದಿನ ಸಭೆಯಲ್ಲಿ ವರದಿ ನೀಡಬೇಕೆಂದು ಶಾಸಕ ರಮೇಶ ಭೂಸನೂರ ಪುರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಆಶ್ರಯ ಸಮಿತಿ ಸದಸ್ಯರಾದ ರಜಾಕ ಮುಜಾವರ, ಜ್ಯೋತಿ ನಂದಿಕೋಲ ಮುಖ್ಯಾಧಿಕಾರಿ ಪ್ರಕಾಶ ಮುದಗೋಳಕರ್, ಸಲೀಂ ಅತ್ತಾರ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group