Homeಸುದ್ದಿಗಳುಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿದ ಎಲ್ಲರನ್ನೂ ಸ್ಮರಿಸೋಣ - ಎಂ.ಬಿ.ಬಳಿಗಾರ

ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿದ ಎಲ್ಲರನ್ನೂ ಸ್ಮರಿಸೋಣ – ಎಂ.ಬಿ.ಬಳಿಗಾರ

spot_img

ಸವದತ್ತಿಃ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ 75 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು “ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಮರೆಯಲಾಗದ ಕ್ಷಣ. ಈ ಸಂದರ್ಭ ಸ್ವಾತಂತ್ರ್ಯಕ್ಕಾಗಿ ತನು ಮನ ಧನದಿಂದ ಹೋರಾಡಿ ದೇಶದ ಸ್ವಾತಂತ್ರ್ಯಕ್ಕೆ ತಮ್ಮ ತ್ಯಾಗ ಬಲಿದಾನಗೈದ ಎಲ್ಲರನ್ನೂ ಸ್ಮರಿಸುವ ಮೂಲಕ ಸ್ವಾತಂತ್ರ್ಯ ದಿನವನ್ನು ಸ್ಮರಣೀಯವಾಗಿಸೋಣ” ಎಂದು ತಿಳಿಸಿದರು.

ಈ ಕಾರ್ಯಕ್ರಮವನ್ನು ಕಚೇರಿಯ ಆವರಣದಲ್ಲಿ ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿಸಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ವ್ಹಿ.ಸಿ.ಹಿರೇಮಠ, ಡಾ.ಬಿ.ಐ.ಚಿನಗುಡಿ, ರಾಜು ಭಜಂತ್ರಿ, ಬಿ.ಐ.ಇ.ಆರ್.ಟಿ.ಗಳಾದ ವೈ.ಬಿ.ಕಡಕೋಳ, ಎಸ್.ಬಿ.ಬೆಟ್ಟದ, ಸಿ.ವ್ಹಿ.ಬಾರ್ಕಿ, ಎಂ.ಎಂ.ಸಂಗಮ, ಸವದತ್ತಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾಯದರ್ಶಿಗಳಾದ ಎಫ್.ಜಿ.ನವಲಗುಂದ, ಕಂಪ್ಯೂಟರ್ ಪ್ರೋಗ್ರಾಮರ್ ವಿನೋದ ಹೊಂಗಲ, ಡಾಟಾ ಎಂಟ್ರಿ ಆಪರೇಟರ್ ಮಲ್ಲಿಕಾರ್ಜುನ ಹೂಲಿ, ಲೆಕ್ಕಪರಿಶೋಧಕ ಜಿ.ಎಸ್.ಸಿದ್ಲಿಂಗನ್ನವರ, ಜವಾನ ಈರಪ್ಪ ಅವರಾದಿ ಗೃಹ ರಕ್ಷಕ ದಳದ ಪ್ಲಾಟನೆಂಟ್ ಕಮಾಂಡರ್ ಎಂ.ಎಸ್.ಕಿತ್ತೂರ ಹಾಗೂ ತಂಡದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಎಂ.ಎಂ.ಸಂಗಮ ಸ್ವಾಗತಿಸಿದರು. ಸಿ.ವ್ಹಿ.ಬಾರ್ಕಿ ನಿರೂಪಿಸಿದರು. ಎಸ್.ಬಿ.ಬೆಟ್ಟದ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group