Homeಸುದ್ದಿಗಳುಇನ್ಮುಂದೆ ಕಪ್ ನಮ್ಮದೇ ಎಂದು ಹೆಮ್ಮೆಯಿಂದ ಹೇಳಿ-ಶಾಸಕ ಬಾಲಚಂದ್ರ ಜಾರಕಿಹೊಳಿ

ಇನ್ಮುಂದೆ ಕಪ್ ನಮ್ಮದೇ ಎಂದು ಹೆಮ್ಮೆಯಿಂದ ಹೇಳಿ-ಶಾಸಕ ಬಾಲಚಂದ್ರ ಜಾರಕಿಹೊಳಿ

ಚೊಚ್ಚಲ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್

೧೮ ವರ್ಷಗಳ ಕಾಯುವಿಕೆ, ಕೋಟ್ಯಂತರ ಅಭಿಮಾನಿಗಳ ಹರಕೆ, ಆಶೀರ್ವಾದ.. ಕೊನೆಗೂ ನನಸಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ೧೮ ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಆಗಿ ಮೂಡಿ ಬಂದಿರುವುದು ಸಕಲ ಕನ್ನಡಿಗರಿಗೆ ಹೆಮ್ಮೆ, ಹರ್ಷ ತಂದಿದೆ ಎಂದು ಅರಭಾವಿ ಶಾಸಕ ಹಾಗೂ ಬೆಮ್ಯೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹರ್ಷವ್ಯಕ್ತಪಡಿಸಿದರು.

ಅಹಮದಾಬಾದ್ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ರೋಚಕವಾಗಿ ಸೋಲಿಸಿದ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.

ಈ ಗೆಲುವನ್ನು ಕಿಂಗ್ ಕೊಹ್ಲಿ ಅವರಿಗೆ ಅರ್ಪಿಸಿ ಕನ್ನಡಿಗರು ಹೃದಯ ವೈಶಾಲ್ಯತೆ ಮೆರೆಯೋಣ.
ಈ ಸಲ ಕಪ್ ನಮ್ಮದೇ ಎನ್ನುತ್ತಿದ್ದ ನಮ್ಮ ಅಭಿಮಾನಿಗಳು ಈಗ ಕಾಲ ಕೂಡಿ ಬಂತು. ನಾವು ಹೊಸ ಚಾಂಪಿಯನ್ ಆಗುವ ನವೋಲ್ಲಾಸ. ಟ್ರೋಫಿಯ ವನವಾಸ ಮುಗಿಯಿತು.

RCB ಗೆದ್ದಾಗ ಕೊಹ್ಲಿ ಸೇರಿದಂತೆ ಅನೇಕ ಆಟಗಾರರು ಕಣ್ಣೀರಲ್ಲಿ ನೀರು ಬಂತು. ಗೆದ್ದಾಗ ಕಣ್ಣೀರಿನ ಆನಂದಭಾಷ್ಪ ಹೇಳತೀರದು. ಈ ದಿನ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಮಹತ್ವದ ದಿನ.
ಆರ್ಸಿಬಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದರು

RELATED ARTICLES

Most Popular

error: Content is protected !!
Join WhatsApp Group