ಅಂಬೇಡ್ಕರ್ ಅವರ ತತ್ವ- ಆದರ್ಶಗಳನ್ನು ಪಾಲಿಸೋಣ: ಡಾ ಹೊಸಮನಿ

Must Read

ಬೆಳಗಾವಿ:ಅಂಬೇಡ್ಕರ್ ಅವರು ಎಲ್ಲ ಮೇರೆಗಳನ್ನು ಮೀರಿ,ಪ್ರತಿಯೊಬ್ಬರಿಗೂ ಪೂಜನೀಯರು,ಅವರು ನಡೆದ ಮಾರ್ಗ,ಅವರ ಕಾರ್ಯಗಳು,ತತ್ವ, ಆದರ್ಶಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶಕ ಎಂದು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶ್ ಕುಮಾರ್ ಹೊಸಮನಿ ಅವರು ಹೇಳಿದರು.

ಅವರು ನಗರ ಕೇಂದ್ರ ಗ್ರಂಥಾಲಯ ಬೆಳಗಾವಿ ಯಲ್ಲಿ 67 ನೇಯ ಪರಿನಿರ್ವಾಣ ದಿನ ನಿಮಿತ್ತ ಅಂಬೇಡ್ಕರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಮಾತನಾಡುತ್ತಿದ್ದರು.

ಅಂಬೇಡ್ಕರ್ ಅವರು ಯಾವಾಗಲೂ ಗ್ರಂಥಾಲಯಗಳಲ್ಲಿ ಸಮಯ ಕಳೆದು,ಉತ್ತಮ ಜ್ಞಾನವಂತರಾಗಿ ಭಾರತದ ಸಂವಿಧಾನದಂತಹ ಮಹಾನ್ ಗ್ರಂಥ ರಚಿಸಲು ಸಾಧ್ಯವಾಯಿತು, ಆದ್ದರಿಂದ ತಾವೆಲ್ಲರೂ ಉತ್ತಮ ಓದುಗರಾಗಿ ಮನೆಗೆ, ಊರಿಗೆ, ದೇಶಕ್ಕೇ ಕೀರ್ತಿ ತನ್ನಿ ಎಂದು ಕರೆನೀಡಿದರು. ಡಿಜಿಟಲ್ ಸಾರ್ವಜನಿಕ ಗ್ರಂಥಾಲಯದ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.

ಉಪನಿರ್ದೇಶಕರಾದ ರಾಮಯ್ಶಾ ಅವರು ಅಂಬೇಡ್ಕರ ಅವರ ಜೀವನ ಮತ್ತು ಸಾಧನೆ ಕುರಿತು ಮಾತನಾಡಿ, ನಾವು ಎಲ್ಲರೂ ಸರಿಸಮಾನರು,ಉತ್ತಮ ಬಾಂಧವ್ಯ ಬೆಸೆಯುವ ಕೆಲಸ ಮಾಡೋಣ, ರಾಷ್ಟ್ರ ನಿರ್ಮಾಣದಲ್ಲಿ ನಾವೆಲ್ಲರೂ ಒಂದಾಗೋಣ ಎಂದು ಹೇಳಿದರು. ಇನ್ನೋರ್ವ ಅತಿಥಿಗಳಾಗಿ ಗ್ರಂಥಾಲಯ ಇಲಾಖೆಯ ಆಡಳಿತಾಧಿಕಾರಿಗಳಾದ  ಮನು ಅವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕ ಓದುಗರು,ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಇ ಎನ್ ಅಂಬೇಕರ್ ಕಾರ್ಯಕ್ರಮ ನಿರ್ವಹಿಸಿದರು, ಪ್ರಕಾಶ ಇಚಲಕರಂಜಿ ವಂದಿಸಿದರು.

ನಗರ ಜಿಲ್ಲಾ ಕೇಂದ್ರ ಗ್ರಂಥಾಲಯ ಬೆಳಗಾವಿ ಎಲ್ಲ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳೂ, ಸಾರ್ವಜನಿಕರು, ಮಾಧ್ಯಮ ಮಿತ್ರರು ಉಪಸ್ಥಿತರಿದ್ದು ಮಹಾನ್ ಚೇತನಕ್ಕೆ ಗೌರವ ಸಲ್ಲಿಸಿದರು.

ನಗರ ಕೇಂದ್ರ ಗ್ರಂಥಾಲಯ ಬೆಳಗಾವಿ

9632851524.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group