Homeಸುದ್ದಿಗಳುವಿಕಲಚೇತನ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡೋಣ- ಬಿಇಓ ಆರೀಫ್ ಬಿರಾದಾರ

ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡೋಣ- ಬಿಇಓ ಆರೀಫ್ ಬಿರಾದಾರ

ಸಿಂದಗಿ : ಭಾರತೀಯ ಸಮಾಜದಲ್ಲಿ ಮಾನವೀಯ ಮೌಲ್ಯವಿರುವ ನಮ್ಮಲ್ಲಿ ವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ನಾವೆಲ್ಲರೂ ಸಮಾನತೆಯಿಂದ, ಮಾನವೀಯತೆಯಿಂದ ನೋಡುವದರೊಂದಿಗೆ ಈ ವಿಕಲಚೇತನ ಮಕ್ಕಳಿಗೆ ಇತರ ಮಕ್ಕಳ ಹಾಗೆ ಅವರನ್ನು ಪ್ರೋತ್ಸಾಹಿಸಿ ಈ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡೋಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ  ಆರೀಫ್ ಬಿರಾದಾರ ಹೇಳಿದರು.

ಪಟ್ಟಣದ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳು ವಿಶೇಷ ಚೇತನ ಮಕ್ಕಳಿಗೆ ಫಿಜಿಯೋಥೆರಪಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರನ್ನಾಗಿ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಅದಕ್ಕಾಗಿ ನಾವು ನೀವೆಲ್ಲ ಸೇರಿ ಪ್ರಯತ್ನಿಸೋಣ ಎಂದರು.

ಕಾರ್ಯಕ್ರಮದಲ್ಲಿ ಒಟ್ಟು 26 ಮಕ್ಕಳು ಭಾಗವಹಿಸಿದ್ದರು ಎಲ್ಲಾ ಮಕ್ಕಳಿಗೆ ಪಿಜಿಯೊಥೆರಪಿಸ್ಟ್ ರಾದ  ಡಾ. ಅಕ್ಷತಾ ಮದೀನಕರ್ ಅವರು ಮಕ್ಕಳಿಗೆ ಹಾಗೂ ಪಾಲಕರಿಗೆ ಫಿಜಿಯೋಥೆರಪಿ ಮಾಡುವ ಕ್ರಮವನ್ನು ಹೇಳಿಕೊಟ್ಟರು.

ಕ್ಷೇತ್ರ ಸಮನ್ವಯಧಿಕಾರಿ ಐ. ಎಸ್ ಟಕ್ಕೆ ಮಾತನಾಡಿ, ವಿಕಲಚೇತನರಿಗೆ ಸರಕಾರ ರೂಪಿಸಿದ ಯೋಜನೆಗಳನ್ನು ಪರಿಣಾಮಕಾರಿಯಾಗಿ ರೂಪಿಸಿ ಅವುಗಳ ಅನುಷ್ಠಾನಕ್ಕಾಗಿ ಇಲಾಖೆ ಪ್ರಯತ್ನಿಸಬೇಕು. ಇಲಾಖೆ ಇಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ವಿಕಲಚೇತನ ಮಕ್ಕಳಿಗೆ ಮುಟ್ಟಿಸಲಾಗುವುದು ಎಂದರು.

ಎಲ್ಲಾ ಬಿಐಇ ಆರ್‍ಟಿಗಳಾದ ವಿ ಡಿ ಬಮ್ಮನಹಳ್ಳಿ, ಎ ಎಸ್ ಯತ್ನಾಳ, ಎ ಪಿ ಸೋನಾಳ, ಎಸ್ ಎಸ್ ಗಂಗನಳ್ಳಿಮಠ ರವರು ವಿವಿಧ ಶಾಲೆಗಳಿಂದ ಪಾಲಕರು ಮಕ್ಕಳು ಶಿಕ್ಷಕರು ಭಾಗವಹಿಸಿದ್ದರು.

RELATED ARTICLES

Most Popular

error: Content is protected !!
Join WhatsApp Group