spot_img
spot_img

‘ಮುಗಿಲಿಗೆ ಹಾರೋಣ’ ಮಕ್ಕಳ ಕವನ ಸಂಕಲನ ಬಿಡುಗಡೆ ‘ಓದು ಮತ್ತು ಬರವಣಿಗೆ ಶಿಕ್ಷಕರಿಗೆ ಗೌರವ ತರುತ್ತವೆ’

Must Read

- Advertisement -

ಮೂಡಲಗಿ: ‘ಶಾಲಾ ಶಿಕ್ಷಕರು ಪುಸ್ತಕಗಳನ್ನು ಓದುವುದರೊಂದಿಗೆ ಮಕ್ಕಳಲ್ಲಿಯೂ ಓದುವ ಪ್ರವತ್ತಿಯನ್ನು ಬೆಳೆಸಬೇಕು’ ಎಂದು ಚಿಕ್ಕೋಡಿಯ ಡಿಡಿಪಿಐ ಮೋಹನಕುಮಾರ ಹಂಚಾಟೆ ಅವರು ಹೇಳಿದರು.

ಇಲ್ಲಿಯ ನೇಮಗೌಡರ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಅರಿಹಂತ ಬಿರಾದಾರ ಪಾಟೀಲ ಅವರು ರಚಿಸಿರುವ ‘ಮುಗಿಲಿಗೆ ಹಾರೋಣ’ ಮಕ್ಕಳ ಕವನ ಸಂಕಲನವನ್ನು ಬಿಡುಗಡೆ ಮಾಡಿ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ

ಮಾತನಾಡಿದ ಅವರು, ಓದು ಮತ್ತು ಬರವಣಿಗೆಯು ಶಿಕ್ಷಕ ವೃತ್ತಿಗೆ ಬಹುದೊಡ್ಡ ಗೌರವ ತಂದು ಕೊಡುತ್ತವೆ ಎಂದರು.

- Advertisement -

ಶಿಕ್ಷಕರು ಶಿಕ್ಷಣ ಇಲಾಖೆ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳುವುದರೊಂದಿಗೆ ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಶ್ರದ್ಧೆ, ಪ್ರಾಮಾಣಿಕವಾಗಿ ಕಾರ್ಯಮಾಡುವುದು ಅವಶ್ಯವಿದೆ. ತಾವು ಮಾಡುವ ಕಾರ್ಯಗಳ ಮೂಲಕ ಸಮಾಜವು ಗುರುತಿಸಬೇಕು ಎಂದರು.

ಅರಿಹಂತ ಬಿರಾದಾರಪಾಟೀಲ ಅವರು ರಚಿಸಿರುವ ಮುಗಿಲಿಗೆ ಹಾರೋಣ ಕೃತಿಯು ಮೌಲಿಕವಾಗಿದೆ. ಇಂಥ ಪುಸ್ತಕಗಳನ್ನು ಮಕ್ಕಳು ಓದುವ ಪರಿಸರ ಬೆಳೆಸಬೇಕು ಎಂದರು.

ಪುಸ್ತಕ ಪರಿಚಯಿಸಿದ ಮಕ್ಕಳ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿ, ಕವಿ ಅರಿಹಂತ ಬಿರಾದಾರ ಪಾಟೀಲ ಅವರು ಮಕ್ಕಳ ಮನಸ್ಸನ್ನು ತಾಕುವಂತೆ ರಚಿಸಿರುವ ಪದ್ಯಗಳು ಮಕ್ಕಳಲ್ಲಿ ಮನೋಲ್ಲಾಸದೊಂದಿಗೆ ಮಕ್ಕಳ ಜ್ಞಾನ ವಿಸ್ತಾರಗೊಳಿಸುತ್ತವೆ ಎಂದರು.

- Advertisement -

24 ಕವಿತೆಗಳನ್ನು ಹೊಂದಿರುವ ಕೃತಿಯು ಕಾಲಧರ್ಮಕ್ಕೆ ಕವಿಯ ಸ್ಪಂದನೆ ಇದೆ. ಹೀಗಾಗಿ ನೂತನ ಸಂವೇದನೆಗಳು ಪದ್ಯದಲ್ಲಿ ಇದ್ದು ಪ್ರಸ್ತುತತೆಗೆ ಪೂರಕವಾಗಿವೆ ಎಂದರು.

ಮಕ್ಕಳ ಸಾಹಿತ್ಯ ರಚಿಸುವಲ್ಲಿ ಇರಬೇಕಾದ ಸೂಕ್ಷ್ಮತೆ, ಕವಿಯ ಪರಕಾಯ ಪ್ರವೇಶ ಮತ್ತು ಜವಾಬ್ದಾರಿಯು ಕವಿ ಅರಿಹಂತ ಬಿರಾದಾರ ಪಾಟೀಲ ಸಮರ್ಥವಾಗಿ ನಿಭಾಯಿಸಿದ್ದಾರೆ. ಮುಗಿಲಿಗೆ ಹಾರೋಣ ಇದು ಕನ್ನಡ ಮಕ್ಕಳ ಸಾಹಿತ್ಯ ಲೋಕದಲ್ಲಿ ದೃಢವಾಗಿ ನಿಲ್ಲುವಂತ ಕೃತಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಬಾಲಶೇಖರ ಬಂದಿ ಮಾತನಾಡಿ, ಪುಸ್ತಕ ಓದುವ ಸಂಸ್ಕೃತಿ ಬೆಳೆಸುವುದು ಇಂದಿನ ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಕೃತಿಕಾರ ಅರಿಹಂತ ಬಿ. ಬಿರಾದಾರಪಾಟೀಲ ದಂಪತಿ ಹಾಗೂ ಚಿಕ್ಕೋಡಿ ಡಿಡಿಪಿಐ ಕಚೇರಿಗೆ ವರ್ಗಾವಣೆಯಾಗಿರುವ ಮುಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಯ ವ್ಯವಸ್ಥಾಪಕ ಸಲೀಂ ಶೇಖ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು.

ಇಲಾಖೆಯ ಗುರುಸ್ಪಂದನ ಅಂಗವಾಗಿ ಸರಿಪಡಿಸಿರುವ ಸೇವಾ ಪುಸ್ತಕಗಳನ್ನು ಶಿಕ್ಷಕರಿಗೆ ವಿತರಿಸಿದರು.

ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಬಸಪ್ಪ ನೇಮಗೌಡರ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಪುರಸಭೆ ಸದಸ್ಯರಾದ ಸಂತೋಷ ಸೋನವಾಲಕರ, ಈರಣ್ಣ ಕೊಣ್ಣೂರ, ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ, ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಗಾರ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ಎಸ್.ಎಂ. ಲೋಕನ್ನವರ, ಎಲ್.ಎಂ. ಬಡಕಲ್ಲ, ಮಾಲತೇಶ ಸಣ್ಣಕ್ಕಿ, ಜಿ.ಆರ್. ಮಾಳಗಿ, ಆರ್.ಎಂ. ಮಹಾಲಿಂಗಪುರ ವೇದಿಕೆಯಲ್ಲಿದ್ದರು.

ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ. ಪರಸನ್ನವರ ನಿರೂಪಿಸಿದರು, ಸಿಆರ್‍ಪಿ ಸಿದ್ರಾಮ್ ದ್ಯಾಗಾನಟ್ಟಿ ವಂದಿಸಿದರು.

- Advertisement -
- Advertisement -

Latest News

ಹಿಂದಿ ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಹುನಗುಂದ : ಈಚೆಗೆ ಬಾಗಲಕೋಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯದ ಮೊಹಮ್ಮದ್ ರಿಹಾನ್ ಇಟಗಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group