ಈ ಸಲ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸೋಣ – ಜಗದೀಶ ಶೆಟ್ಟರ

Must Read

ಸಿಂದಗಿ: ದಿ.ಎಂ.ಸಿ ಮನಗೂಳಿ ಅವರು ಯಾವುದೇ ಪಕ್ಷ ಅಧಿಕಾರದಲ್ಲಿದ್ದರು ಪಟ್ಟು ಹಿಡಿದ ಕೆಲಸ ಬಿಟ್ಟವರಲ್ಲ ಅಂಥವರ ಮಗನಾದ ಅಶೋಕ ಮನಗೂಳಿಯಿಂದ ಅಭಿವೃದ್ಧಿ ಸಾಧ್ಯ. ಬಿಜೆಪಿಯಲ್ಲಿ ಪ್ರಾಮಾಣಿಕರಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ ಅದಕ್ಕೆ ಬಿಜೆಪಿಯನ್ನು ಅಧಿಕಾರದಿಂದ ಇಳಿಸಿ ತಕ್ಕ ಪಾಠ ಕಲಿಸೋಣ. ಅಶೋಕ ಮನಗೂಳಿಯನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ಪಟ್ಟಣದ  ಆರ್ಶೀವಾದ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಬಿಜೆಪಿಯಲ್ಲಿ 6 ಬಾರಿ ಶಾಸಕನಾಗಿ ಆಯ್ಕೆಯಾಗಿ 30 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ ಅಲ್ಲದೆ ಭ್ರಷ್ಟಾಚಾರ ರಹಿತ ಅಧಿಕಾರ ನಡೆಸಿದ್ದೇನೆ ನನ್ನಂಥ ಪ್ರಾಮಾಣಿಕರಿಗೆ ಸಿಕ್ಕಿಲ್ಲ. ಚುನಾವಣೆ ವಿಷಯ ಬಂದಾಗ ನಿಮಗೆ ವಯಸ್ಸಾಗಿದೆ ನೀವು ನಿವೃತ್ತಿಯಾಗಿ ನಿಮ್ಮ ಸೊಸೆಗೆ ಟಿಕೆಟು ಕೊಡುತ್ತೇವೆ ಎಂದಾಗ ಕುಟುಂಬ ರಾಜಕಾರಣ ಬೇಡ ಎನ್ನುವ ಸಿದ್ಧಾಂತದಿಂದ ಬಂದವನು ನಾನೆಂದು ಕುಟುಂಬ ರಾಜಕಾರಣ ಮಾಡುವವನಲ್ಲ. ಭ್ರಷ್ಠಾಚಾರ, ಸಿಡಿ ಹಗರಣ ಹಾಗೂ ಗುಲಾಮನಾಗಿ ಕೆಲಸ ಮಾಡುವವರಿಗೆ ಇಲ್ಲಿ ಅವಕಾಶವಿದೆ ಕಾರಣಕ್ಕೆ ಜಗದೀಶ ಶೆಟ್ಟರರನ್ನು ಮುಗಿಸಬೇಕು ಎನ್ನುವ ಪಿತೂರಿ ಹುನ್ನಾರ ನಡೆಸಿದಲ್ಲದೆ ಚಿತ್ರಹಿಂಸೆಯನ್ನು ಸಹಿಸಲಿಕ್ಕಾಗದೆ ಪಕ್ಷ ಬಿಟ್ಟು ಹೊರ ಬಂದು ಯಾವುದೇ ಶರತ್ತುಗಳಿಡದೇ ನೂರು ವರ್ಷದ ಇತಿಹಾಸ ಹೊಂದಿದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದೇನೆ. ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು ಹುಸಿಯಾಗದು ಬಿಜೆಪಿಯಿಂದ ರಾಜ್ಯದ ಜನತೆ ರೋಸಿ ಹೋಗಿದ್ದಾರೆ ಬದಲಾವಣೆಯ ಗಾಳಿ ಬೀಸಿದೆ ಈ ಬಾರಿ 140ರಿಂದ 150 ಸ್ತಾನಗಳನ್ನು ಗೆಲ್ಲುವ ಮೂಲಕ ನಿಚ್ಚಳ ಬಹುಮತ ದೊರೆಯುತ್ತದೆ ಕಾರಣ ಪಕ್ಷದ ಎಲ್ಲ ಕಾರ್ಯಕರ್ತರು ಪ್ರಾಮಾಣಿಕವಾಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಅಶೋಕ ಮನಗೂಳಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.   

                                                                             

ಅಭ್ಯರ್ಥಿ ಅಶೋಕ ಮನಗೂಳಿ ಮಾತನಾಡಿ, ಅಖಂಡ 30 ವರ್ಷದ ರಾಜಕಾರಣದಲ್ಲಿ ಎಲ್ಲ ಮಜಲುಗಳನ್ನುಂಡ ಜಗದೀಶ ಶೆಟ್ಟರ ಅವರಂಥವರಿಗೆ ಇಂತಹ ಅವಮಾನವಾಗಿದೆ ಕಾಂಗ್ರೆಸ್ ಪಕ್ಷ ಸ್ವತಂತ್ರ ಹೋರಾಟಗಾರ ಪಕ್ಷವಾಗಿದ್ದು ಇಡೀ ಕ್ಷೇತ್ರದ ಅಭಿವೃದ್ಧಿ ಬಯಸಿದವನು ನಾನು ನನಗೊಮ್ಮೆ ಅಧಿಕಾರ ಕೊಡಿ ನಿಮ್ಮ ಸೇವಕನಾಗಿ ದುಡಿಯುವೆ ಎಂದು ಮನವಿ ಮಾಡಿಕೊಂಡರು.

ಕೆಪಿಸಿಸಿ ವಕ್ತಾರ ಎಸ್.ಎಮ್.ಪಾಟೀಲ ಗಣಿಹಾರ, ಬ್ಲಾಕ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳುರ, ಆಲಮೆಲ ಅಧ್ಯಕ್ಷ ಅಯೂಬ ದೇವರಮನಿ, ಮಲ್ಲಣ್ಣ ಸಾಲಿ, ಅಶೋಕ ವಾರದ, ಶಿವಕುಮಾರ ಗುಂದಗಿ, ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ, ಉಪಾಧ್ಯಕ್ಷ ಹಾಸೀಂ ಆಳಂದ, ಮುಸ್ತಾಕ ಮುಲ್ಲಾ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group