ಮೂಡಲಗಿ:-ಪಟ್ಟಣದ ಸರ್ಕಾರಿ ಕನ್ನಡ ಶಾಲೆಯ ಆವರಣದಲ್ಲಿ ಇರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಪಾಲಕ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ರವರ ದಿನಾಚರಣೆ ಆಚರಿಸಲಾಯಿತು.
ನಿಸರ್ಗ ಫೌಂಡೇಷನ್ ಅಧ್ಯಕ್ಷ ಈರಪ್ಪ ಢವಳೇಶ್ವರ, ಸ್ವಾಭಿಮಾನಿ ಕನ್ನಡ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಸುಭಾಸ ಕಡಾಡಿ, ಮೂಡಲಗಿ ತಾಲೂಕಾ ಪ್ರಾದೇಶಿಕ ಪತ್ರಕರ್ತರ ಸಂಘದ ಉಪಾಧ್ಯಕ್ಷ ಶಿವಬಸು ಗಾಡವಿ, ಮೂಡಲಗಿ ತಾಲೂಕಾ ಪ್ರಾದೇಶಿಕ ಪತ್ರಕರ್ತರ ಸಂಘದ ಕಾರ್ಯದರ್ಶಿ ಸುರೇಶ ಎಮ್ಮಿ, ಬಸವರಾಜ ಬೆಳಗಲಿ, ಆದರ್ಶ ರಡೇರಟ್ಟಿ ಮತ್ತು ಗ್ರಂಥಾಲಯದ ಸಿಬ್ಬಂದಿಗಳಾದ ಶ್ರೀಮತಿ ವೀಣಾ ಸಣ್ಣಕ್ಕಿ ಹಾಗೂ ಶ್ರೀಮತಿ ಶ್ರೀದೇವಿ ಢವಳೇಶ್ವರ ಉಪಸ್ಥಿತರಿದ್ದರು.