ಗಾಂಧಿ ಭವನದಲ್ಲಿ ಗ್ರಂಥಾಲಯ ಸಪ್ತಾಹ ಆಚರಣೆ

Must Read

ಬೆಂಗಳೂರು ಶಿವಾನಂದ ವೃತ್ತದ ಬಳಿ ಇರುವ ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಗಾಂಧಿ ಭವನದ ಆವರಣದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಶಾಖೆಯಲ್ಲಿ ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಸ್ಮರಣಾರ್ಥ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಗಾಂಧಿ ಭವನದ ಕಾರ್ಯದರ್ಶಿ ಇಂದಿರ ಕೃಷ್ಣಪ್ಪ ಮಾತನಾಡುತ್ತಾ, ದೇವಾಲಯಗಳಿಗೆ ಹೋದರೆ ಕಣ್ಣು ಮುಚ್ಚಿ ಪ್ರಾರ್ಥಿಸಲಾಗುತ್ತದೆ ಅದರಂತೆ ಗ್ರಂಥಾಲಯಗಳಿಗೆ ಬಂದರೆ ಕಣ್ಣು ತೆಗೆದು ಜ್ಞಾನವನ್ನು ಪಡೆಯಬಹುದು ಗ್ರಂಥಾಲಯಗಳು ಸರಸ್ವತಿ ಸದನ ; ಜ್ಞಾನದ ಭಂಡಾರವಾಗಿದ್ದು ಸಾರ್ವಜನಿಕರು ಇಲ್ಲಿ ಉಪಲಬ್ಧವಿರುವ ವಿವಿಧ ಭಾಷೆಯ ನಾನಾ ರೀತಿಯ ಪುಸ್ತಕ -ಪತ್ರಿಕೆ ಗಳನ್ನು ಓದುವ ಮೂಲಕ ಜ್ಞಾನಾರ್ಜನೆ ಪಡೆದುಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ವೋದಯ ಮಂಡಲದ ನಗರ ಜಿಲ್ಲಾ ಅಧ್ಯಕ್ಷ ಡಾ.ಗುರುರಾಜ ಪೋಶೆಟ್ಟಿಹಳ್ಳಿ , ಕಾರ್ಯದರ್ಶಿ ಮತ್ತು ಪತ್ರಕರ್ತೆ ಸುಮಾ ಚಂದ್ರಶೇಖರ್ ,ಕ ಗಾ ಸ್ಮ ನಿ ವ್ಯವಸ್ಥಾಪಕ ಯೋಗೇಶ್, ಸುಶೀಲಮ್ಮ , ಚಂದ್ರಪ್ಪ, ನವೀನ್ ಗ್ರಂಥಾಲಯ ನಿರ್ವಾಹಕಿ ಶಶಿಕಲ ಮತ್ತಿತರರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group