ಮುನವಳ್ಳಿ: “ಪ್ರತಿ ವರ್ಷ ಅಯ್ಯಪ್ಪನ ವ್ರತ ಆಚರಿಸಿ ಮಹಾಪೂಜೆ ಮತ್ತು ಅಗ್ನಿಪೂಜೆ ಕಾರ್ಯಕ್ರಮದ ನಂತರ ಅಯ್ಯಪ್ಪನ ದರ್ಶನಕ್ಕಾಗಿ ಭಕ್ತರು ಶಬರಿಮಲೆಗೆ ತೆರಳಿ ದರ್ಶನ ಪಡೆದು ಪುನೀತರಾಗುತ್ತಾರೆ.ಇದರಿಂದ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಕಟ್ಟುನಿಟ್ಟಿನ ವ್ರತ ಆಚರಣೆಯ ಮೂಲಕ ಅಯ್ಯಪ್ಪನ ದರ್ಶನದಿಂದ ಜೀವನ ಸುಖಮಯವಾಗುವುದು” ಎಂದು ವಿಧಾನಸಭಾ ಉಪ ಸಭಾಪತಿ ಹಾಗೂ ಶಾಸಕ ಆನಂದ ಮಾಮನಿ ಹೇಳಿದರು.
ಅವರು ಮುನವಳ್ಳಿ ಸಮೀಪದ ಸಿಂದೋಗಿ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ಅಯ್ಯಪ್ಪ ಸ್ವಾಮಿ ಸನ್ನಿಧಿ ಹತ್ತಿರದ ಸಭಾಭವನ ಉದ್ಘಾಟಿಸಿ ಮಾತನಾಡಿದರು. “ಯಾರು ಅಯ್ಯಪ್ಪನ ಮೇಲೆ ಭಕ್ತಿಯಿಟ್ಟು ನಡೆದುಕೊಳ್ಳುತ್ತಾರೋ ಅವರ ಕಷ್ಟಗಳು ನಿವಾರಣೆಯಾಗುತ್ತವೆ.”ಎಂದರು.
ಈ ಸಂದರ್ಭದಲ್ಲಿ ಅಯ್ಯಪ್ಪ ಭಕ್ತರಿಂದ ಶಾಸಕರ ಸನ್ಮಾನ ಜರುಗಿತು. ಕಾರ್ಯಕ್ರಮದಲ್ಲಿ ವೇದಮೂರ್ತಿ ಮಡಿವಾಳಯ್ಯ ಹಿರೇಮಠ,ಈರಯ್ಯ ಹಿರೇಮಠ, ಗ್ರಾಮ ಪಂಚಾಯತಿ ಸದಸ್ಯರಾದ ಈಶ್ವರ ಯಕ್ಕೇರಿ, ಗ್ರಾಮದ ಮುಖ್ಯಸ್ಥರಾದ ಮಹಾಂತೇಶ ನಡನಳ್ಳಿ, ಸುರೇಶ ಕುರುಬಗಟ್ಟಿ,ಮಹಾಂತೇಶ ಕುರುಬಗಟ್ಟಿ, ಬಾಬು ಲವಟೆ, ವೆಂಕಾಜಿನಾಯಕ
ಪಾಟೀಲ, ಮಹಾಂತೇಶ ಯಕ್ಕೇರಿ, ಫಕೀರಪ್ಪ ಖಾನಪ್ಪನವರ, ಸತ್ಯಪ್ಪ ಅಡವಿ, ಮುದಕಪ್ಪ ಮೇಟಿ, ಶೇಖರ ಗೋಕಾವಿ, ಮಲ್ಲಿಕಾರ್ಜುನ ಅಡವಿ, ವಿಠ್ಠಲ ಟೋಪೋಜಿ, ಚನ್ನಪ್ಪ ಕಟ್ಟಿ, ಈರಯ್ಯ ಹಿರೇಮಠ,ರಾಜೇಂದ್ರ ಪಾಟೀಲ,ನಾರಾಯಣ ಕದಂ,ಅಯ್ಯಪ್ಪ ಸ್ವಾಮಿ ಭಕ್ತರಾದ ಗುರುಸ್ವಾಮಿಯವರಾದ ಗಂಗಯ್ಯ ನುಗ್ಗಾನಟ್ಟಿ ಹಾಗೂ ಮಾಲಾಧಾರಿಗಳು ಉಪಸ್ಥಿತರಿದ್ದರು.