ಬೆಳಗಾವಿ – ದಿ.೧೪-೧೨-೨೦೨೫ ರಂದು ಬೆಳಗಾವಿಯ ಲಿಂಗಾಯತ ಸಂಘಟನೆಯ ಹಳಕಟ್ಟಿ ಭವನದಲ್ಲಿ ವಚನ ಚಿಂತನ ಕಾರ್ಯಕ್ರಮದಲ್ಲಿ “ ಸತಿಪತಿಗಳೊಂದಾದ ಭಕ್ತಿ “ ಎನ್ನುವ ವಿಷಯದ ಕುರಿತ ಅನುಭಾವ ಗೋಷ್ಟಿಯಲ್ಲಿ ಶರಣೆ ದಾನಮ್ಮ ಅಂಗಡಿ ಅವರು ಮಾತನಾಡಿದರು.
ಶರಣ ಯುಗದ ಹಲವಾರು ದೃಷ್ಥಾಂತಗಳೊಂದಿಗೆ ದಾಂಪತ್ಯ ಬದುಕಿನ ಮೌಲ್ಯಗಳನ್ನು ಎತ್ತಿ ತೋರಿಸಿದರು. ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ, ಮೋಳಿಗೆ ಮಾರಯ್ಯ ಮತ್ತು ಮಹಾದೇವಿ, ಅಪ್ಪ ಬಸವಣ್ಣ ಮತ್ತು ನೀಲಾಂಬಿಕೆಯವರಾದಿಯಾಗಿ ಎಲ್ಲಾ ಶರಣರು ಸಮಾಜಕ್ಕೆ ಮಾದರಿಯಾದವರೆ ಆಗಿದ್ದಾರೆ ಎಂದರು.
ನಿವೃತ್ತ ಪ್ರಾದ್ಯಾಪಕರಾದ ವಿರುಪಾಕ್ಷ ದೊಡಮನಿ ಗುರುಗಳು ಮಾತನಾಡಿ,ಆದ್ಯ ವಚನಕಾರರಾದ ಜೇಡರ ದಾಸಿಮಯ್ಯನವರ ವಚನದೊಂದಿಗೆ ಸಮಾಜದ ಸಾಮರಸ್ಯಕ್ಕೆ ಹೊಂದಾಣಿಕೆ, ತಿಳವಳಿಕೆಯ ಬದುಕು ಅತಿ ಅಗತ್ಯ ಎಂಬುದನ್ನು ತಮ್ಮ ನುಡಿಗಳಲ್ಲಿ ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶರಣೆ ಮಹಾದೇವಿ ಅರಳಿ ಅವರ ನೇತೃತ್ವದಲ್ಲಿ ಸಾಮೂಹಿಕ ವಚನ ಪ್ರಾರ್ಥನೆ ನೆರವೇರಿತು. ಶರಣರಾದ ಆನಂದ ಕರ್ಕಿ,ಪ್ರಣೀತಾ ವಸ್ತ್ರದಮಠ,ಬಸವರಾಜ ಬಿಜ್ಜ ರಗಿ,ಮಹಾದೇವ ಕೆoಪಿಗೌಡ್ರ, ಮಹಾದೇವಿ ಅರಳಿ,ಶಿವ ಲೀಲಾ ಗೌಡರ,ರುದ್ರಮ್ಮ ಅಕ್ಕನವರ, ಇವರೆಲ್ಲರಿಂದ ವಚನ ಪಠಣ ಮತ್ತು ಗಾಯನ ನೆರವೇರಿತು.
ದೇಯನ್ನವರ ಪರಿವಾರದವರಿಂದ ಪ್ರಸಾದ ದಾಸೋಹ ನೆರವೇರಿತು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಮಹಾಂತೇಶ ಮೆನಸಿನಕಾಯಿಯವರು ಉಪನ್ಯಾಸಕರನ್ನು ಪರಿಚಯಿಸಿದರು. ಕಾರ್ಯಕ್ರಮದ ನಿರೂಪನೆಯ ನೇತೃತ್ವವನ್ನು ಸಂಘಟನೆಯ ಉಪಾಧ್ಯಕ್ಷರಾದ ಶರಣ ಸಂಗಮೇಶ ಅರಳಿ ನೆರವೇರಿಸಿದರು.
ನಿಕಟಪೂರ್ವ ಅದ್ಯಕ್ಷರಾದ ಶಶಿಭೂಷಣ ಪಾಟೀಲ, ಅನೀಲ ರಘಶೆಟ್ಟಿ, ಶಿವಾನಂದ ತಲ್ಲೂರ,ಬಸವ ರಾಜ ಕರಡಿಮಠ,ಕಮಲಾ ಗಣಾಚಾರಿ, ನoದಾ ಬಗಲಿ, ವಿದ್ಯಾ ತಿಗಡಿ, ಶಿವಾನoದ ನಾಯಕ, ಲ.ಕುoಬಾರ, ರಾ ಮಾಪೂರಿ ದoಪತಿಗಳು ಹೀಗೆ ಸಂಘಟನೆಯ ಸರ್ವ ಸದಸ್ಯಬಳಗ ಕಾರ್ಯಕ್ರಮದಲ್ಲಿ ಹಾಜರಿದ್ದರು.

