ಬೆಳಗಾವಿ– ಹೊಸ ಇದ್ದಲಹೊಂಡ ಸರಕಾರಿ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಆಚರಿಸಲಾಯಿತು
ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ವಿವೇಕ ಪೋತದಾರ ಶಾಖಾ ಪ್ರಬಂಧಕರು ಕೆನರಾ ಬ್ಯಾಂಕ್ ಭೂತರಾಮನಹಟ್ಟಿ ಹಾಗೂ ಕಾರ್ಯಕ್ರಮದ ಅಧ್ಯಕ್ಷರಾಗಿ ಸುರೇಶ ಸಿದ್ದಪ್ಪಾ ಹಂಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ತಾಲೂಕು ಇವರು ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರಧಾನ ಗುರುಮಾತೆಯರಾದ ಶ್ರೀಮತಿ ಜಿ ಬಿ ಸುಗತೆ ಸಹ ಶಿಕ್ಷಕಿಯರಾದ ಶ್ರೀಮತಿ ಸುಜಾತಾ ಕೇರಿಮನಿ, ಶ್ರೀಮತಿ ಮೇತ್ರಿ ಮೇಡಮ್ ಅತಿಥಿ ಉಪನ್ಯಾಸಕರಾದ ಆನಂದ ಹವಾಲ್ದಾರ್ ಹಾಗೂ ಕೆನರಾ ಬ್ಯಾಂಕ್ ನ ಆಪ್ತ ಸಹಾಯಕರಾದ ಸುನಿಲ ತಮ್ಮನ್ನವರ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದಲ್ಲಿಯ ಎಲ್ಲಾ ಅನಕ್ಷರಸ್ಥರನ್ನು ಒಟ್ಟುಗೂಡಿಸಿ ಅವರಿಗೆ ಅಕ್ಷರ ಜ್ಞಾನ ಮಾಡಿಸಬೇಕೆಂದು ವಿವೇಕ ಪೋತದಾರ ಅವರು ಅಭಿಪ್ರಾಯ ಪಟ್ಟರು ಎಲ್ಲಾ ಅನಕ್ಷರಸ್ಥರನ್ನು ಒಟ್ಟುಗೂಡಿಸಿ ಅವರಿಗೆ ಅಕ್ಷರ ಜ್ಞಾನ ಮಾಡಿಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಕ ಸಾ ಪ ಅಧ್ಯಕ್ಷರು ಸುರೇಶ ಸಿದ್ದಪ್ಪಾ ಹಂಜಿ ಭರವಸೆ ನೀಡಿದರು ಆಮೇಲೆ ಎಲ್ಲರೂ ಕೂಡಿಕೊಂಡು ಶಾಲಾ ಮಕ್ಕಳೊಂದಿಗೆ ಗ್ರಾಮದಲ್ಲಿ ಪ್ರಭಾತ ಫೇರಿ ಮುಖಾಂತರ ಗ್ರಾಮದ ಜನರಿಗೆ ಅಂತಾರಾಷ್ಟ್ರೀಯ ಸಾಕ್ಷರತಾ ಬಗ್ಗೆ ಅರಿವು ಮೂಡಿಸಲಾಯಿತು ಕಾರ್ಯಕ್ರಮವನ್ನು ಸುಜಾತಾ ಕೇರಿಮನಿ ನಿರೂಪಿಸಿದರು ಆನಂದ ಹವಾಲ್ದಾರ್ ವಂದಿಸಿದರು