ಮುನವಳ್ಳಿ: ಪಟ್ಟಣದ ಸೋಮಶೇಖರ ಮಠದಲ್ಲಿ ಪರಮಪೂಜ್ಯ ಶ್ರೀ. ಮತ್ತು. ನಿ. ಪ್ರ. ಸ್ವ.ಮುರುಘೇಂದ್ರ ಮಹಾಸ್ವಾಮಿಗಳವರು ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ದಂಪತಿಗಳ 25 ನೇ ವಿವಾಹ ವಾರ್ಷಿಕೋತ್ಸವದ ನಿಮಿತ್ತವಾಗಿ ಗುರುರಕ್ಷೆ ನೀಡಿ ಸನ್ಮಾನಿಸಿದರು.
“ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ಶೈಕ್ಷಣಿಕ ವಾಗಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ.ತಮ್ಮ ದಾಂಪತ್ಯ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ” ಎಂದು ಪೂಜ್ಯರು ಈ ಸಂದರ್ಭದಲ್ಲಿ ಆಶೀರ್ವಾದ ನುಡಿಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ವಿರಾಜ ಕೊಳಕಿ ದಂಪತಿಗಳು. ಶಿಕ್ಷಕ ಬಸನಗೌಡ ಹುಲಿಗೊಪ್ಪ. ಮಾಧ್ಯಮ ಪ್ರತಿನಿಧಿ ಹಾಗೂ ಛಾಯಾಗ್ರಾಹಕ ಪ್ರಶಾಂತ ತುಳಜನ್ನವರ ಉಪಸ್ಥಿತರಿದ್ದರು. ಬಿ.ಬಿ.ಹುಲಿಗೊಪ್ಪ ಕಾರ್ಯ ಕ್ರಮ ನಿರೂಪಿಸಿದರು