ನವದೆಹಲಿ: ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ೯೬ ವರ್ಷದ ಎಲ್ ಕೆ ಅಡ್ವಾನಿಯವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ‘ ಭಾರತ ರತ್ನ ‘ ಘೋಷಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ ಈ ವಿಚಾರವನ್ನು ಹೊರ ಹಾಕಿದ್ದು, ಬಿಜೆಪಿಯ ಭೀಷ್ಮ ಎಂದು ಕರೆಯಲ್ಪಡುವ ಅಡ್ವಾನಿಯವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಹಾಗೆ ನೋಡಿದರೆ ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣವಾಗಲು ಹೋರಾಟದ ಮುಂಚೂಣಿಯಲ್ಲಿ ಇದ್ದ ಅಡ್ವಾನಿಯವರು, ಈಗಿನ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದವರು. ದೆಹಲಿಯ ಜನಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ, ಮಾಜಿ ಉಪ ಪ್ರಧಾನಿಯಾಗಿ ರಾಜ್ಯ ಸಭೆಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ತಳ ಮಟ್ಟದಿಂದ ಕಾರ್ಯಕರ್ತರನ್ನು ಹುರಿದುಂಬಿಸಿ ಬಿಜೆಪಿಯನ್ನು ಕಟ್ಟಿ ಬೆಳಸುವಲ್ಲಿ ಎಲ್ ಕೆ ಅಡ್ವಾನಿಯವರ ಪಾತ್ರ ತುಂಬ ಹಿರಿದಾದುದು. ೯೦ ರ ದಶಕದಲ್ಲಿ ರಾಮ ಮಂದಿರ ಹೋರಾಟಕ್ಕೆ ಧುಮುಕಿದ ಅವರು ಅಯೋಧ್ಯೆಯವರೆಗೂ ಪಾದಯಾತ್ರೆ ಮಾಡಿ ರಾಮ ಮಂದಿರ ಹೋರಾಟಕ್ಕೊಂದು ಬಿರುಸು ನೀಡಿದ್ದರು.