Homeಸುದ್ದಿಗಳುಸ್ಥಳೀಯ ನಗರ ಸಭೆ ಚುನಾವಣೆ; ಶಾಸಕ ರಹಿಂ ಖಾನ್ ಗೆ ನಡುಕ ಹುಟ್ಟಿಸಿದ ಜೆಡಿಎಸ್ ಅಭ್ಯರ್ಥಿ...

ಸ್ಥಳೀಯ ನಗರ ಸಭೆ ಚುನಾವಣೆ; ಶಾಸಕ ರಹಿಂ ಖಾನ್ ಗೆ ನಡುಕ ಹುಟ್ಟಿಸಿದ ಜೆಡಿಎಸ್ ಅಭ್ಯರ್ಥಿ ನವಾಜ್ ಖಾನ್

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಎರಡು ವಾರ್ಡ್ ಗಳ ನಗರ ಸಭೆ ಉಪಚುನಾವಣೆಯಲ್ಲಿ ಭರ್ಜರಿ ಭೇಟೆ ನಡೆಸಿದ್ದ ಸ್ಥಳೀಯ ಶಾಸಕ ರಹಿಂ ಖಾನ್ ಮತ ಕೇಳಲು ಹೋದಾಗ ಸ್ಥಳೀಯ ಮತದಾರರು ತಿರಸ್ಕರಿಸಿದರು..

ಇದೇ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿಯ ಭರ್ಜರಿ ಪ್ರಚಾರ ನೋಡಿ ಸ್ಥಳೀಯ ಶಾಸಕರಿಗೆ ಸೋಲಿನ ಭೀತಿ ಉಂಟಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಜೆಡಿಎಸ್ ನ ನವಾಜ್ ಖಾನ್ ಮನೆ ಮನೆಗೆ ತೆರಳಿ ಎಲ್ಲಾ ಸಮಾಜದ ಜನರ ಮತಗಳನ್ನು ಆಕರ್ಷಿಸುತ್ತಿದ್ದಾರೆ.

ಇನ್ನೊಂದು ಕಡೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದು ಕೇಂದ್ರ ಮಂತ್ರಿ ಭಗವಂತ ಖೂಬಾ ಕೂಡ ಮನೆ ಮನೆಗೆ ಹೋಗಿ ತಮ್ಮ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದರು……

ಇಷ್ಟೆಲ್ಲದರ ನಡುವೆ ಮತದಾರ ತಮ್ಮ ರಹಸ್ಯವನ್ನು ಕಾಪಾಡಿಕೊಂಡಿದ್ದು ಈ ಉಪಚುನಾವಣೆಯಲ್ಲಿ ಯಾರ ಕಡೆಗೆ ಒಲಿಯುತ್ತಾರೋ ನೋಡಬೇಕು.


ವರದಿ : ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group